ಕುಮಾರಸ್ವಾಮಿಗೆ ಕಾಡುತ್ತಿದೆಯಾ ಆ ಒಂದು ಕೊರಗು? ದೇವಸ್ಥಾನದಲ್ಲಿ ಎಚ್‌ಡಿಕೆ ತಪ್ಪುಕಾಣಿಕೆ ಸಲ್ಲಿಕೆ

Kannadaprabha News   | Asianet News
Published : Jan 15, 2021, 01:35 PM ISTUpdated : Jan 15, 2021, 02:40 PM IST
ಕುಮಾರಸ್ವಾಮಿಗೆ ಕಾಡುತ್ತಿದೆಯಾ ಆ ಒಂದು ಕೊರಗು? ದೇವಸ್ಥಾನದಲ್ಲಿ ಎಚ್‌ಡಿಕೆ ತಪ್ಪುಕಾಣಿಕೆ ಸಲ್ಲಿಕೆ

ಸಾರಾಂಶ

ರಾಮನಗರದ ಚಾಮುಂಡೇಶ್ವರಿ ದೇವಿಗೆ ತಪ್ಪು ಕಾಣಿಕೆ ಸಮರ್ಪಿಸಿದ ಕುಮಾರಸ್ವಾಮಿ| ಈ ಹಿಂದೆ ದೇವಸ್ಥಾನದ ಮುಂದೆ ಬಾಷಣ ಮಾಡುವಾಗ ನನಗೆ ಯಾವುದೇ ಅಧಿಕಾರ ಬೇಡ ಎಂದಿದ್ದ ಹೆಚ್‌ಡಿಕೆ| ಬಳಿಕ ಎರಡು ಬಾರಿ ಸಿಎಂ ಆದರೂ ಅರ್ಧಕ್ಕೆ ಅಧಿಕಾರ ಕಳೆದುಕೊಂಡಿದ್ದ ಕುಮಾರಸ್ವಾಮಿ| 

ರಾಮ​ನ​ಗರ(ಜ.15): ಯುವರಾಜ ಸ್ವಾಮೀಜಿ ವಂಚನೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ರಾಧಿಕಾ ಕುಮಾರಸ್ವಾಮಿ ಅವರನ್ನ ಕರೆಯಿಸಿಕೊಳ್ಳಲಾಗಿತ್ತು. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಅವರು ಯಾರು ಅಂತಾನೇ ಗೊತ್ತಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಎಲ್ಲೆಡೆಯಿಂದ ತೀವ್ರ ಟೀಕೆಯೂ ವ್ಯಕ್ತವಾಗಿತ್ತು. 

ಸೋಷಿಯಲ್ ಮೀಡಿಯಾದಲ್ಲಿ ಕಟ್ಟಿಕೊಂಡು ಪತ್ನಿ ಬಗ್ಗೆ ಹೀಗೆ ಹೇಳಿದರೆ, ರಾಜ್ಯದ ಜನರಿಗೆ ಇನ್ನು ಹೇಗೆ ಗೌರವ ಕೊಡಬಲ್ಲರೆಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರಿಂದ ಕುಮಾರಸ್ವಾಮಿ ತೀವ್ರ ಮುಜುಗರಕ್ಕೆ ಒಳಗಾಗಿದ್ದರು. 

‘ಪಂಚ​ರತ್ನ’ ಅಸ್ತ್ರದೊಂದಿಗೆ ಪಕ್ಷ ಸಂಘಟನೆ: ಕುಮಾರಸ್ವಾಮಿ

ಆದರೆ, ಕುಮಾರಸ್ವಾಮಿ ಇಂದು ರಾಮನಗರದಲ್ಲಿ ಚಾಮುಂಡೇಶ್ವರಿ ದೇವಿಗೆ ಕುಮಾರಸ್ವಾಮಿ ತಪ್ಪು ಕಾಣಿಕೆಯನ್ನ ಅರ್ಪಿಸಿದ್ದಾರೆ. ಈ ಹಿಂದೆ ದೇವಸ್ಥಾನದ ಮುಂದೆ ಬಾಷಣ ಮಾಡುವಾಗ ನನಗೆ ಯಾವುದೇ ಅಧಿಕಾರ ಬೇಡ ಎಂದು ಹೇಳಿದ್ದರು. 

ಇದಾದ ಬಳಿಕ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದರೂ ಅರ್ಧಕ್ಕೆ ಅಧಿಕಾರ ಕಳೆದುಕೊಂಡಿದ್ದರು. ಆ ಕಾರಣಕ್ಕಾಗಿ ಕುಮಾರಸ್ವಾಮಿ ಇಂದು ದೇವರಿಗೆ ತಪ್ಪು ಕಾಣಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಹಾಗೂ ಸೊಸೆ ರೇವತಿ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿ 101 ರುಪಾಯಿ ತಪ್ಪು ಕಾಣಿಕೆಯನ್ನ ನೀಡಿದ್ದಾರೆ. 
 

PREV
click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ