ತುಂಗಭದ್ರಾ ಎಡ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಸಿಂಧನೂರು ಬಂದ್

By Web DeskFirst Published Nov 25, 2019, 9:10 AM IST
Highlights

ಐಸಿಸಿ ಸಭೆಯಲ್ಲಿ ಮಾರ್ಚ ಅಂತ್ಯದವರೆಗೂ ನೀರು ಬಿಡಲು ನಿರ್ಧರಿಸಲಾಗಿತ್ತು| ಏಪ್ರಿಲ್ 10 ರವರೆಗೆ ನೀರು ಬಿಡುವಂತೆ ಬೇಡಿಕೆ ಇಡಲಾಗಿತ್ತು| ನೀರು ಬಿಡುವ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಾರದ ಹಿನ್ನಲೆಯಲ್ಲಿ ಬಂದ್ ಗೆ ಸೂಚನೆ| ನೀರಿಗಾಗಿ ಪಕ್ಷಾತೀತವಾಗಿ ಬಂದ್ ಗೆ ಬೆಂಬಲ|

ರಾಯಚೂರು(ನ.25): ತುಂಗಭದ್ರಾ ಎಡ ನಾಲೆಗೆ ನೀರು ಬಿಡುವಂತೆ ಆಗ್ರಹಿಸಿ ಕಾಂಗ್ರೆಸ್‌ ಪಕ್ಷ ಇಂದು(ಸೋಮವಾರ) ಸಿಂಧನೂರು ನಗರ ಬಂದ್ ಗೆ ಕರೆ ನೀಡಿದೆ. ತುಂಗಭದ್ರಾ ಐಸಿಸಿ ಸಭೆಯಲ್ಲಿ ನಾಲೆಗೆ ನೀರು ಬಿಡುವ ಬಗ್ಗೆ ಸ್ಪಷ್ಟ ನಿರ್ಧಾರ ಬಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸಿಂಧನೂರು ಬಂದ್ ಗೆ ಕರೆ ನೀಡಿದೆ. 

ಐಸಿಸಿ ಸಭೆಯಲ್ಲಿ ಮಾರ್ಚ ಅಂತ್ಯದವರೆಗೂ ನೀರು ಬಿಡಲು ನಿರ್ಧರಿಸಲಾಗಿತ್ತು. ಆದರೆ, ಏಪ್ರಿಲ್ 10 ರವರೆಗೆ ನೀರು ಬಿಡುವಂತೆ ಬೇಡಿಕೆ ಇಡಲಾಗಿತ್ತು. ಆದರೆ, ನೀರು ಬಿಡುವ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಾರದ ಹಿನ್ನಲೆಯಲ್ಲಿ ಬಂದ್ ಗೆ ಸೂಚನೆ ನೀಡಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಂದು ಬೆಳಗ್ಗೆಯಿಂದಲೇ ಬಹುತೇಕ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿವೆ. ನೀರಿಗಾಗಿ ಪಕ್ಷಾತೀತವಾಗಿ ಬಂದ್ ಗೆ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ, ಇಂದು ನಡೆಯಲಿರುವ ಪದವಿ ಪರೀಕ್ಷೆಗಳಿಗೆ ಯಾವುದೇ ತೊಂದರೆ ಇಲ್ಲ, ಹಾಗೂ ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ. 
 

click me!