ಇದು ವಸತಿ ಸಚಿವ ಸೋಮಣ್ಣ ಅವರ ಸರಳತೆಯಾಗಿದೆ. ಪೆಟ್ಟಿಗೆ ಅಂಗಡಿಯೊಂದರಲ್ಲಿ ಬೋಂಡಾ ಟೀ ಸೇವಿಸಿ ಅವನಿಗೆ 1000 ರು. ನೀಡಿ ಬಂದಿದ್ದಾರೆ.
ಚಾಮರಾಜನಗರ (ಆ.26): ಜಿಲ್ಲಾ ಪ್ರವಾಸ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ವಸತಿ ಸಚಿವ ವಿ.ಸೋಮಣ್ಣ ಮಳವಳ್ಳಿ ತಾಲೂಕಿನ ಬ್ಲಪ್ ಗೇಟ್ ಬಳಿಯ ರಸ್ತೆ ಬದಿಯ ಮಹದೇವಸ್ವಾಮಿ ಎಂಬುವರ ಪೆಟ್ಟಿಗೆ ಅಂಗಡಿಯಲ್ಲಿ ಟೀ ಕುಡಿದರು.
ಇನ್ನು ಇದೇ ಅಂಗಡಿಯಲ್ಲಿ ಬೋಂಡ ತಿಂದು ಸರಳತೆ ತೋರಿದರು. ಅಂಗಡಿ ಮಾಲಿಕನಿಗೆ 1000 ಕೊಟ್ಟು ಸೋಮಣ್ಣ ತೆರಳಿದರು.
ಚಾಮರಾಜನಗರ ಜಿಲ್ಲಾ ಪ್ರವಾಸ
undefined
ಜಿಲ್ಲಾ ಕೇಂದ್ರದ ಜನರಿಗೆ ವಸತಿ ನಿರ್ಮಾಣಕ್ಕೆ 100 ಎಕರೆ ಜಾಗ ಖರೀದಿಗೆ ಹಣ ಮಂಜೂರು ಮಾಡುವುದಾಗಿ ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.
ನಾಯಂಡಹಳ್ಳಿ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಿ: ಸಚಿವ ಸೋಮಣ್ಣ...
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಅಭಿವೃದ್ಧಿಯಾದರೆ ಜಿಲ್ಲೆಯ ಅಭಿವೃದ್ಧಿ ಕಣ್ಣಿಗೆ ಕಾಣಿಸುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ವಸತಿ ರಹಿತರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಬೇಕಿದೆ.
ಜಿಲ್ಲಾ ಕೇಂದ್ರದಲ್ಲಿ ವಸತಿ ರಹಿತರಿಗೆ ವಸತಿ ಕಲ್ಪಿಸಲು ಅಗತ್ಯವಿರುವಷ್ಟುಸರ್ಕಾರಿ ಜಾಗವಿಲ್ಲದಿರುವುದರಿಂದ ಖಾಸಗಿ ವ್ಯಕ್ತಿಗಳಿಂದ ಖರೀದಿಸಲು 30 ಎಕರೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ. 15-20 ದಿನದಲ್ಲಿ 30 ಎಕರೆ ಜಾಗ ಖರೀದಿಸಲಾಗುವುದು. ನಂತರ ವಸತಿ ರಹಿತರಿಗೆ ಸರ್ಕಾರ ಖರೀದಿಸುವ 30 ಎಕರೆ ಜಾಗದಲ್ಲಿ ವಸತಿ ನಿರ್ಮಿಸಿ ಅಲ್ಲಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಇಪ್ಪತ್ತೇರಡುವರೆ ಲಕ್ಷಕ್ಕೆ ಒಂದು ಎಕರೆಯಂತೆ 40 ಎಕರೆ ಜಾಗವನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿಕೊಡಿಸುವುದಾಗಿ ಹೇಳಿದ್ದಾರೆ. ಜೊತೆಗೆ 40 ಎಕರೆ ಜಾಗ ಹೊಂದಿಕೊಂಡಂತೆ ಒಟ್ಟಾರೆಯಾಗಿ 100 ಎಕರೆ ಜಾಗವನ್ನು ಗುರುತಿಸಿ ಖರೀದಿಸಲು ಮುಂದಾಗಿ ಎಂದು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದ್ದೇನೆ ಎಂದರು.