ಯಲ್ಲಾಪುರ: ಮಹಿಳೆಯ ಕೊಳೆತ ಶವ ಪತ್ತೆ, ಕಾರಣ..?

Kannadaprabha News   | Asianet News
Published : Aug 26, 2020, 10:10 AM IST
ಯಲ್ಲಾಪುರ: ಮಹಿಳೆಯ ಕೊಳೆತ ಶವ ಪತ್ತೆ, ಕಾರಣ..?

ಸಾರಾಂಶ

ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆ| ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ನಡೆದ ಘಟನೆ|  ಮಹಿಳೆಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ| 

ಯಲ್ಲಾಪುರ(ಆ.26): ಪಟ್ಟಣದ ಕಾಳಮ್ಮನಗರದ ಆಶ್ರಯ ಕಾಲನಿಯಲ್ಲಿ ಮಹಿಳೆಯೋರ್ವಳ ಶವ ಕೊಳೆತ ಸ್ಥಿತಿಯಲ್ಲಿ ಆಕೆಯ ಮನೆಯಲ್ಲೇ ಪತ್ತೆಯಾಗಿದೆ. ಮೃತಪಟ್ಟ ಮಹಿಳೆಯನ್ನು ಉಚಗೇರಿ ಕಸಗೆಜಡ್ಡಿಯ ಭಾಗಿ ಮಂಜುನಾಥ ಸಿದ್ದಿ(50) ಎಂದು ಗುರುತಿಸಲಾಗಿದೆ. 

ಮೂಲತಃ ಉಚಗೇರಿಯವರಾದ ಈಕೆ ಸದ್ಯ ಕಾಳಮ್ಮನಗರ ಆಶ್ರಯ ಕಾಲನಿಯಲ್ಲಿ ವಾಸವಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆನ್ನಲಾಗಿದೆ. ಈಕೆ ಮೃತಪಟ್ಟು 3-4 ದಿನಗಳೆ ಕಳೆದಿದ್ದು, ಮನೆಯಲ್ಲಿ ಆಕೆ ಒಬ್ಬರೇ ಇದ್ದುದರಿಂದ ಮೃತಪಟ್ಟ ವಿಷಯ ಯಾರಿಗೂ ತಿಳಿದಿರಲಿಲ್ಲ.

ಮಾನವನ ಪ್ರೀತಿಗೆ ಮಾರು ಹೋದ ಹಾರ್ನಬಿಲ್‌: ಕಾಡು ಬಿಟ್ಟು ನಾಡು ಸೇರಿದ ಪಕ್ಷಿ..!

ಶವ ಕೊಳೆತು ವಾಸನೆ ಬರಲಾರಂಭಿಸಿದ ಮೇಲೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪರಿಶೀಲಿಸಿದಾಗ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಇದು ಅಸಹಜ ಸಾವೆಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯ ನಂತರವಷ್ಟೇ ಸಾವಿನ ಕಾರಣ ತಿಳಿದು ಬರಬೇಕಿದೆ.
 

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!