ಸೈನ್ ಇನ್ ಸೆಕ್ಯುರಿಟಿ ಯೋಜನೆಯ ಅಡಿಯಲ್ಲಿ ಈಗಾಗಲೇ ಉಡುಪಿ ನಗರದ ಜುವೆಲ್ಲರಿ ಮಾಲೀಕರು ಕ್ಯಾಮೆರಾ ಅಳವಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದು, ಉಡುಪಿ ನಗರದಲ್ಲಿ ಸುಮಾರು 20 ಕ್ಯಾಮೆರಾಗಳನ್ನು ಮಾ. 23 ರಿಂದ ಅಳವಡಿಸಲಾಗುತ್ತಿದೆ.
ಉಡುಪಿ (ಮಾ.25) : ಜಿಲ್ಲೆಯಲ್ಲಿ ರಾತ್ರಿ ವೇಳೆ ನಡೆಯುವ ಕಳ್ಳತನ, ದರೋಡೆ ಪ್ರಕರಣಗಳನ್ನು ತಡೆಗಟ್ಟಲು 2019 ರಲ್ಲಿ ಆರಂಭಗೊಂಡ ಸೈನ್ ಇನ್ ಸೆಕ್ಯೂರಿಟಿ(Sign in Security) ಕುಂದಾಪುರ ಸಂಸ್ಥೆ ಹಾಗು ಪೋಲಿಸ್ ಇಲಾಖೆಯ ಜಂಟಿಯಾಗಿ ಜಾರಿಗೊಳಿಸಿದ ವಿನೂತನ ಯೋಜನೆಯು ಕುಂದಾಪುರದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರ ಎರಡನೇ ಹಂತವಾಗಿ ಉಡುಪಿಗೂ ವಿಸ್ತರಣೆಗೊಳ್ಳುತ್ತಿದೆ.
ಪ್ರಸ್ತುತ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ(Hakay Akshay Machhindra IPS), ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಜೊತೆಗೂಡಿ ಸೇಫ್ ಉಡುಪಿ ಎಂಬ ಹೆಸರಿನಲ್ಲಿ ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಲು ಸಿದ್ದತೆ ನಡೆಸಿದ್ದಾರೆ. ಇದರ ಎರಡನೇ ಹಂತವಾಗಿ ಉಡುಪಿ ಉಪವಿಭಾಗದ ಡಿವೈಎಸ್ಪಿ ದಿನಕರ್ ಹಾಗು ನಗರ ಠಾಣಾಧಿಕಾರಿ ಮಂಜಪ್ಪ ಜ್ಯುವೆಲ್ಲರಿ ಮಾಲೀಕರ ಸಂಘ ಮತ್ತು ಉದ್ಯಮಿಗಳ ಜೊತೆ 10 ಕ್ಕೂ ಹೆಚ್ಚು ಸಭೆ ನಡೆಸಿ ಯೋಜನೆಯ ಬಗ್ಗೆ ಅರಿವು ಮೂಡಿಸಿದ್ದಾರೆ.
undefined
CEIR Portal: ಮೊಬೈಲ್ ಫೋನ್ ಕಳ್ಳತನ ತಡೆಗೆ 'ಖಾಕಿ ಪ್ಲ್ಯಾನ್'
ಕ್ಯಾಮೆರಾ ಅಳವಡಿಕೆ ಆರಂಭ
ಸೈನ್ ಇನ್ ಸೆಕ್ಯುರಿಟಿ ಯೋಜನೆಯ ಅಡಿಯಲ್ಲಿ ಈಗಾಗಲೇ ಉಡುಪಿ ನಗರದ ಜುವೆಲ್ಲರಿ ಮಾಲೀಕರು ಕ್ಯಾಮೆರಾ ಅಳವಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದು, ಉಡುಪಿ ನಗರದಲ್ಲಿ ಸುಮಾರು 20 ಕ್ಯಾಮೆರಾಗಳನ್ನು ಮಾ. 23 ರಿಂದ ಅಳವಡಿಸಲಾಗುತ್ತಿದೆ.
ಈ ಯೋಜನೆಯೂ ಪೋಲಿಸ್ ಇಲಾಖೆಯೊಂದಿಗೆ ಕೆಲಸ ಮಾಡುತ್ತದೆ
1. ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯೂ ಕ್ಯಾಮೆರಾಗಳನ್ನು ಉಚಿತವಾಗಿ ಅಳವಡಿಸುತ್ತದೆ.
2. ಈ ಕ್ಯಾಮೆರಾವನ್ನು ಅಳವಡಿಸಿಕೊಂಡವರು ಒಂದು ಕ್ಯಾಮೆರಾಕ್ಕೆ 2,000 ರೂ ನಂತೆ ಪ್ರತಿ ತಿಂಗಳು ಪಾವತಿಸಬೇಕು.
3. ಪ್ರತಿ ದಿನ ರಾತ್ರಿ 8 ರಿಂದ ಬೆಳಗ್ಗೆ 6 ರ ತನಕ ನೇರ ವೀಕ್ಷಣೆ ನಡೆಸಲಾಗುತ್ತದೆ. (ಅಗತ್ಯಕ್ಕನುಸಾರವಾಗಿ 24x7 ನೇರ ವೀಕ್ಷಣೆ ನಡೆಸಲಾಗುತ್ತದೆ)
4. ಈ ಸಂಸ್ಥೆಯಲ್ಲಿ ನೇರ ವೀಕ್ಷಣೆ ಮಾತ್ರ ಸಾಧ್ಯವಿರುತ್ತದೆ. ಯಾವುದೇ ಘಟನೆಗಳು ಸಂಭವಿಸುವುದು ಗಮನಕ್ಕೆ ಬಂದ ತಕ್ಷಣ ಸಿಸ್ಟಮ್ ನಲ್ಲಿ ಡೌನ್ ಲೋಡ್ ಮಾಡುತ್ತಾರೆ. ಇದರಿಂದಾಗಿ ಅಪರಾಧ ನಡೆಯುವ ಸ್ಥಳದಲ್ಲಿರುವ ಹಾರ್ಡ್ ಡಿಸ್ಕ್ ನಲ್ಲಿ ಸಮಸ್ಯೆಯಿದ್ದರೂ, ದೃಶ್ಯಾವಳಿಗಳು ಸುರಕ್ಷಿತವಾಗಿರುತ್ತದೆ.
5. ಘಟನಾವಳಿಗಳು ನಡೆಯುವಾಗ ಸಂಭಂದಪಟ್ಟ ಬೀಟ್ ಪೋಲಿಸರಿಗೆ, ಠಾಣೆಗೆ ಹಾಗು ಸಂಭಂದಿಸಿದ ಮಾಲೀಕರಿಗೆ ದೂರವಾಣಿ ಮೂಲಕ ಮಾಹಿತಿ ನೀಡುತ್ತಾರೆ.
6. ಅಳವಡಿಸುವ ಎಲ್ಲಾ ಕ್ಯಾಮೆರಾಗಳು ಅಲ್ಟ್ರಾ ಹೆಚ್.ಡಿ ಕ್ಯಾಮೆರಾಗಳಾಗಿದ್ದು, ಧ್ವನಿಯನ್ನು ಸ್ಪಷ್ಟವಾಗಿ ದಾಖಲಿಸುತ್ತದೆ
7. ಒಂದು ತಿಂಗಳ ದೃಶ್ಯಾವಳಿಗಳು ಕಂಟ್ರೋಲ್ ರೂಮ್ ನಲ್ಲಿ ಲಭ್ಯವಿರುತ್ತದೆ.
ಈಗಾಗಲೇ 250 ಕ್ಯಾಮೆರಾಗಳು ಕಾರ್ಯಚರಿಸುತ್ತಿದ್ದು, 19 ಜನರು ನೇರ ವೀಕ್ಷಣೆಯಲ್ಲಿ ತೊಡಗಿದ್ದಾರೆ. ಪ್ರತಿ 10 ಕ್ಯಾಮೆರಾಕ್ಕೆ 1 ಕ್ಯಾಮೆರಾವನ್ನು ಸಂಸ್ಥೆಯೂ ಉಚಿತವಾಗಿ ಸಮಾಜದ ಸುರಕ್ಷತೆಗಾಗಿ ಅಳವಡಿಸುತ್ತದೆ.
Vastu Tips: ಮನೆಯಲ್ಲಿ ಕಳ್ಳತನ ತಪ್ಪಿಸಲು ಹೀಗೆ ಮಾಡಿ