ಶಿವಮೊಗ್ಗ: ದೇಶದ ಹಿರಿಯ ಪತ್ರಕರ್ತ ಕಾಮ್ರೆಡ್ ಲಿಂಗಪ್ಪ ಸಾವು: ಗಣ್ಯರ ಸಂತಾಪ

By Ravi Janekal  |  First Published Mar 25, 2023, 12:57 PM IST

ದೇಶದ ಹಿರಿಯ ಪತ್ರಕರ್ತ, ಸ್ಥಳೀಯ ಪತ್ರಿಕೆಯ ಸಂಪಾದಕ ಕಾಮ್ರೆಡ್‌ ಲಿಂಗಪ್ಪ (98) ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾಜಿ ಸಿಎಂ ಬಿಎಸ್ ವೈ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸಂಸದ ಬಿವೈ ರಾಘವೇಂದ್ರ ಸೇರಿದಂತೆ ಹಲವು ಗಣ್ಯರ ಸಂತಾಪ


ಶಿವಮೊಗ್ಗ (ಮಾ.25): ದೇಶದ ಹಿರಿಯ ಪತ್ರಕರ್ತ, ಸ್ಥಳೀಯ ಪತ್ರಿಕೆಯ ಸಂಪಾದಕ ಕಾಮ್ರೆಡ್‌ ಲಿಂಗಪ್ಪ (98) ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

 ಅವ​ರಿಗೆ ಪುತ್ರಿ ಮತ್ತು ಮೊಮ್ಮಗ ಇದ್ದಾರೆ. ವಾರದಿಂದ ಅನಾರೋಗ್ಯದಿಂ​ದಾ​ಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ವಿಫಲವಾಗಿ ನಿಧನ ಹೊಂದಿದರು. 

Tap to resize

Latest Videos

ಸುದೀರ್ಘ ಕಾಲ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದರು ಶಿವಮೊಗ್ಗದಲ್ಲಿ ಕ್ರಾಂತಿ ಭಗತ್ ಪತ್ರಿಕೆ(kranti bhagat)ಯ ಸಂಪಾದಕರಾಗಿದ್ದ ಕಾಮ್ರೆಡ್ ಲಿಂಗಪ್ಪ(Comrade Lingappa)  ಹಲವಾರು ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದರು. ಇಳಿವಯಸ್ಸಿನಲ್ಲಿಯೂ ಚಟುವಟಿಕೆಯಿಂದ ಜೀವನ ಸಾಗಿಸುತ್ತಿದ್ದರು. 

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್‌ ಯಡಗೆರೆ, ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಎನ್‌. ಮಂಜುನಾಥ್‌ ಮತ್ತು ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಬಿಎಸ್ ವೈ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸಂಸದ ಬಿವೈ ರಾಘವೇಂದ್ರ ಸೇರಿದಂತೆ ಹಲವು ಗಣ್ಯರ ಸಂತಾಪ ವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಡಿಸಿ ಸೆಲ್ವಮಣಿ ಅವರಿಂದಲೂ ಕಾಮ್ರೆಡ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಾಯಿತು.

ಹಿರಿಯ ಪತ್ರಕರ್ತ, ಕನ್ನಡಪ್ರಭ ಮಾಜಿ ಸಂಪಾದಕ ಕೆ.ಸತ್ಯನಾರಾಯಣ ನಿಧನ

click me!