Vijayapura: ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ: ಸಿಎಂ ಆಗಮನ!

By Govindaraj S  |  First Published Dec 31, 2022, 8:50 PM IST

ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ಚಾಮೀಜಿ ಅನಾರೋಗ್ಯ ಹಿನ್ನೆಲೆಯಲ್ಲಿ ಶ್ರೀಗಳಿಗೆ ನಗರದ ಬಿಎಲ್ಡಿಇ ಸಂಸ್ಥೆಯ ಬಿ ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ ವೈದ್ಯರ ತಂಡದ ವೈದ್ಯರಾದ ಡಾ ಎಸ್ ಬಿ ಪಾಟೀಲ್, ಯುರೋಲಾಜಿಸ್ಟ್, ಡಾ ಅರವಿಂದ ಪಾಟೀಲ್ ಪ್ರಾಂಶುಪಾಲ ಬಿ‌ ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಡಾ ಮಲ್ಲಣ್ಣ ಮೂಲಿಮನಿ ಎಂಡಿ ಅವರ ನೇತೃತ್ವದಲ್ಲಿ ಶ್ರೀಗಳಿಗೆ‌ ಚಿಕಿತ್ಸೆ ನೀಡಲಾಗುತ್ತಿದೆ.


ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಡಿ.31): ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ಚಾಮೀಜಿ ಅನಾರೋಗ್ಯ ಹಿನ್ನೆಲೆಯಲ್ಲಿ ಶ್ರೀಗಳಿಗೆ ನಗರದ ಬಿಎಲ್ಡಿಇ ಸಂಸ್ಥೆಯ ಬಿ ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ ವೈದ್ಯರ ತಂಡದ ವೈದ್ಯರಾದ ಡಾ ಎಸ್ ಬಿ ಪಾಟೀಲ್, ಯುರೋಲಾಜಿಸ್ಟ್, ಡಾ ಅರವಿಂದ ಪಾಟೀಲ್ ಪ್ರಾಂಶುಪಾಲ ಬಿ‌ ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಡಾ ಮಲ್ಲಣ್ಣ ಮೂಲಿಮನಿ ಎಂಡಿ ಅವರ ನೇತೃತ್ವದಲ್ಲಿ ಶ್ರೀಗಳಿಗೆ‌ ಚಿಕಿತ್ಸೆ ನೀಡಲಾಗುತ್ತಿದೆ.

Latest Videos

undefined

ಸ್ವಾಮೀಜಿಗಳು ಆರೋಗ್ಯವಾಗಿದ್ದಾರೆ: ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡಿದ ಬಳಿಕ ಮಾತನಾಡಿದ ವೈದ್ಯರ ತಂಡ, ಸ್ವಾಮೀಜಿ ಆರೋಗ್ಯವಾಗಿದ್ದಾರೆ. ಎಂದಿನಂತೆ ಆಹಾರ ಸೇವನೆ ಮಾಡುತ್ತಿದ್ದಾರೆ. ಪಲ್ಸ್  ಬಿಪಿ ಸಹಜವಾಗಿದೆ. ಯಾರೂ ಸುಳ್ಳು ವದಂತಿಗೆ ಕಿವಿಗೊಡಬೇಡಿ. ಸ್ವಾಮೀಜಿಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿ‌ ನಾಳೆಯಿಂದ ಸ್ಚಾಮೀಜಿಗಳ ದರ್ಶನವನ್ನು ಆನ್ ಲೈನ್ ಮೂಲಕ ಮಾಡಿಸಲಾಗುತ್ತದೆ ಎಂದು ಡಾ ಎಸ್ ಬಿ‌‌ ಪಾಟೀಲ್ ಹೇಳಿದರು.

ಎಚ್‌ಡಿಕೆ ನಡವಳಿಕೆಗೆ ಬೇಸತ್ತು ಜೆಡಿಎಸ್‌ ಬಿಟ್ಟೆ: ಬಾಲಕೃಷ್ಣ

ವದಂತಿ ವಿಚಾರ: ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಮಾತನಾಡಿ, ಆಶ್ರಮದ ವೆಬ್ ಸೈಟ್ ನಲ್ಲಿ ಎಲ್ಲಾ ಮಾಹಿತಿ ನೀಡಲಾಗುತ್ತಿದೆ. ನಾಳೆಯಿಂದ ಆಶ್ರಮದಿಂದ ಆನ್ ಲೈನ್ ನಲ್ಲೇ ಶ್ರೀಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. Janayogashrama Vijayapur ಎಂಬ ವಿಳಾಸ ಫೇಸ್ ಬುಕ್ ಹಾಗೂ ಯೂಟ್ಯೂಬ್ ನಲ್ಲಿ ಮಾಹಿತಿ ಬಿಡಲಾಗುತ್ತದೆ. ಏನೇ ಇದ್ದರೂ ಅಧಿಕೃತ ಮಾಹಿತಿ ಇಲ್ಲಿಯೇ ಹಾಕಲಾಗುತ್ತದೆ. ಬೇರೆ ಎಲ್ಲಿಯೋ ನೋಡಿ ವದಂತಿ ನಂಬಬೇಡಿ ಎಂದು ಮನವಿ ಮಾಡಿದರು.

ಬಿಎಲ್ಡಿಇ ಆಸ್ಪತ್ರೆಯ ತಜ್ಞ ವೈದ್ಯರ ತಂಡ: ನಗರದ ಬಿಎಲ್ಡಿಇ ಸಂಸ್ಥೆಯ ಬಿ ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ ವೈದ್ಯರ ತಂಡ ಡಾ ಎಸ್ ಬಿ ಪಾಟೀಲ್, ಯುರೋಲಾಜಿಸ್ಟ್, ಡಾ ಅರವಿಂದ ಪಾಟೀಲ್ ಪ್ರಾಂಶುಪಾಲರು‌ ಬಿ‌ ಎಂ ಪಾಟೀಲ್ ಮೆಡಿಕಲ್ ಕಾಲೇಜ್  ಡಾ ಮಲ್ಲಣ್ಣ ಮೂಲಿಮನಿ ಎಂಡಿ ಅವರ ನೇತೃತ್ವದಲ್ಲಿ ಶ್ರೀಗಳಿಗೆ‌ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡಿದ ಬಳಿಕ ಮಾತನಾಡಿದ ವೈದ್ಯರ ತಂಡ, ಸ್ವಾಮೀಜಿ ‌ಆರೋಗ್ಯ ಚೆನ್ನಾಗಿದೆ, ದೈನಂದಿನ ಕಾರ್ಯ ನಡೆಯುತ್ತಿವೆ ಪಲ್ಸ್ ರೇಟ್ ಬಿಪಿ, ಆಕ್ಸಿಜನ್ ಸೆಚ್ಯೂರೇಷನ್ ನಾರ್ಮಲ್  ಇದೆ. ಉತ್ತಮವಾಗಿ ಆಹಾರ ಸೇವನೆ ಮಾಡುತ್ತಿದ್ದಾರೆ.ಕೊರೊನಾ ಮುಂಜಾಗೃತಾ ಕ್ರಮವಾಗಿ ಭಕ್ತರ ದರ್ಶನ ಮಾಡಬಾರದು ಎಂದು ಸಲಹೆ ನೀಡಿದ್ದೇವೆ ಎಂದರು. ಕೊರೊನಾ ಆತಂಕದಿಂದ ಬಹಿರಂಗ ದರ್ಶನ ಬೇಡ ವೆಂದಿದ್ದೇವೆ, ಸರ್ಕಾರದ ನಿರ್ದೆಶನವೂ ಬಂದಿದೆ. ಸ್ವಾಮೀಜಿಗಳಿಗೆ ನೆಗಡಿ ಕೆಮ್ಮು ಇತ್ತು ಈಗಾ ಲವಲವಿಕೆಯಿಂದ ಇದ್ದಾರೆ, ಭಕ್ತರು ಬಂದರೆ ಬೇಡ ಅನ್ನಲು ಆಗುವದಿಲ್ಲ, ಆದ್ದರಿಂದ ಭಕ್ತರು ದೂರವಿದ್ದರೆ ಆರೋಗ್ಯ ಚೇತರಿಕೆ ಆಗುತ್ತದೆ. 

ಎಷ್ಟೇ ನೋವಿದ್ದರು ಭಕ್ತರಿಗೆ ದರ್ಶನ ಭಾಗ್ಯ ಒದಗಿಸಿದ ಶ್ರೀಗಳು: ಎಷ್ಟೇ ನೋವಿದ್ದರೂ ಭಕ್ತರ ದರ್ಶನಕ್ಕೆ ಬರುತ್ತಾರೆ. ಆದ್ದರಿಂದ ಭಕ್ತರ ದರ್ಶನವನ್ನು ಆನ್ ಲೈನ್ ಮಾಡಲಾಗಿದೆ. ಭಕ್ತರು ಹೆಚ್ಚಿಗೆ ಬಂದರೆ ಸ್ವಾಮೀಜಿ ಹೊರ ಬರಬೇಕಾಗುತ್ತದೆ. ಇಂದು ಸಹ ಮಧ್ಯಾಹ್ನ 2 ಗಂಟೆಗೆ, ಸಾಯಂಕಾಲ ಐದು ಗಂಟೆಗೆ ಈಗಾಗಲೇ ದರ್ಶನ ನೀಡಿರೋ ಸ್ವಾಮೀಜಿ ಭಕ್ತರು ಹೆಚ್ಚಿಗೆ ಬಂದ ಕಾರಣ ಇದೀಗ ಕಾಯಂ 7-50 ರ ಸುಮಾರಿಗೆ ಮತ್ತೇ ದರ್ಶನ ನೀಡಲು ಆರಂಭಿಸಿದ್ದಾರೆ.

ಸಾಗರೋಪಾದಿಯಲ್ಲಿ ಹರಿದು ಬರ್ತಿರೋ ಭಕ್ತರು: ಇನ್ನು ಶ್ರೀಗಳನ್ನ ನೋಡಲು ತಂಡೋಪ‌ ತಂಡವಾಗಿ ಭಕ್ತರು ಆಗಮಿಸುತ್ತಿದ್ದಾರೆ. ನಿನ್ನೆ ಕಿರಿಯ ಶ್ರೀಗಳು ಭಕ್ತರು ಆಶ್ರಮಕ್ಕೆ ಬರುವುದು ಬೇಡ ಲೈವ್ ನಲ್ಲೆ ದರ್ಶನ ಮಾಡುವ ಬಗ್ಗೆ ಹೇಳಿದ್ದರು, ಭಕ್ತರು ಕೇಳದೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಮಧ್ಯಾಹ್ನ ಶ್ರೀಗಳ ದರ್ಶನದ ಬಳಿಕವಷ್ಟೇ ವಾಪಾಸ್ ತೆರಳಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ವಾಹನ ತೆಗೆದುಕೊಂಡು ಭಕ್ತರು ಆಗಮಿಸುತ್ತಿದ್ದಾರೆ. ಕಲಬುರ್ಗಿ, ಬೆಳಗಾವಿ, ಹುಬ್ಬಳಿ-ಧಾರವಾಡ, ದಾವಣಗೆರೆ ಸೇರಿದಂತೆ ಬೆಂಗಳೂರಿನಿಂದಲು ಭಕ್ತರ ದಂಡು ಶ್ರೀಗಳ ದರ್ಶನಕ್ಕೆ ಬರುತ್ತಿದೆ.

ಬೊಂಬೆ ಉದ್ಯಮದ ಬಗ್ಗೆ ಪ್ರಧಾನಿಗೆ ವಿಶೇಷ ಒಲವು: ಕೇಂದ್ರ ಸಚಿವ ಫಗ್ಗನ್‌ ಸಿಂಗ್‌

ಗಣ್ಯರು, ಸ್ವಾಮೀಜಿಗಳ ಭೇಟಿ, ಆರೋಗ್ಯ ವಿಚಾರಣೆ: ಇಂದು ಸಹ ಗಣ್ಯರು, ಸ್ವಾಮೀಜಿಗಳು ವಿವಿಧ ಮಠಾಧೀಶರು ಆಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಸಚಿವ ಸಿಸಿ ಪಾಟೀಲ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಭಗವಂತ ಖೂಬಾ, ಮಾಜಿ ಸಚಿವ ಹೆಚ್ ಕೆ ಪಾಟೀಲ್, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಪಂಚಮಸಾಲಿ ಬಸವಜಯಮೃತ್ಯುಂಜಯ ಸ್ವಾಮೀಜಿ, ಮನಗೂಳಿ ಸಂಗನಬಸವ ಸ್ವಾಮೀಜಿ, ಅಥಣಿ ಗಚ್ಚಿನಮಠದ ಪ್ರಭು ಚನ್ನಬಸವ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ಭೇಟಿ ನೀಡಿದರು.

click me!