ಎಚ್‌ಡಿಕೆ ನಡವಳಿಕೆಗೆ ಬೇಸತ್ತು ಜೆಡಿಎಸ್‌ ಬಿಟ್ಟೆ: ಬಾಲಕೃಷ್ಣ

By Govindaraj S  |  First Published Dec 31, 2022, 8:19 PM IST

ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇ ನಾವು, ಅವರ ನಡವಳಿಕೆಯಿಂದ ಬೇಸತ್ತು ಜೆಡಿಎಸ್‌ ಪಕ್ಷವನ್ನು ಬಿಟ್ಟಿದ್ದೇವೆ ಎಂದು ಮಾಜಿ ಶಾಸಕ ಬಾಲಕೃಷ್ಣ ಹೇಳಿದರು. 


ಮಾಗಡಿ (ಡಿ.31): ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇ ನಾವು, ಅವರ ನಡವಳಿಕೆಯಿಂದ ಬೇಸತ್ತು ಜೆಡಿಎಸ್‌ ಪಕ್ಷವನ್ನು ಬಿಟ್ಟಿದ್ದೇವೆ ಎಂದು ಮಾಜಿ ಶಾಸಕ ಬಾಲಕೃಷ್ಣ ಹೇಳಿದರು. ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಮಾಗಡಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಪರಿಶಿಷ್ಟಜಾತಿ ವಿಭಾಗದ ಪದಾಧಿಕಾರಿಗಳ ನೇಮಕಾತಿ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿದ ಅವರು, ಮಾಜಿ ಪ್ರಧಾನಿಗಳನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ನನ್ನ ಪಾತ್ರವೂ ಕೂಡ ಇದೆ. ಅವರನ್ನು ಮುಖ್ಯಮಂತ್ರಿ ಮಾಡಲು ಧರಂಸಿಂಗ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಯಡಿಯೂರಪ್ಪನವರ ಜೊತೆ ಕೈಜೋಡಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ನಮ್ಮ ಪಾತ್ರ ಬಹಳಷ್ಟಿತ್ತು. 

ಕೊನೆ​ಗೆ ಅವರ ನಡವಳಿಕೆಯಿಂದ ಬೇಸತ್ತು ಕಾಂಗ್ರೆಸ್‌ ಸೇರಿ​ದ್ದೇವೆ ಎಂದರು. ಕಾಂಗ್ರೆಸ್‌ ಪಕ್ಷ ಸಿದ್ದರಾಮಯ್ಯನವರ ಅಧಿಕಾರ ಅವಧಿಯಲ್ಲಿ ಪರಿಶಿಷ್ಟಜಾತಿ ಪಂಗಡದ ಅಭಿವೃದ್ಧಿಗಾಗಿ ಸಾಕಷ್ಟುಕಾರ್ಯಕ್ರಮಗಳನ್ನು ಕೊಟ್ಟಿದೆ. ಅವರು ಅಧಿಕಾರಕ್ಕೆ ಬಂದ ಕೂಡಲೇ ಸಾಲ ಮನ್ನಾ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಆದರೆ, ಕಳೆದ ಚುನಾವಣೆಯಲ್ಲಿ ಸದಾಶಿವ ಆಯೋಗ ಜಾರಿ ಮಾಡಿಲ್ಲ ಎಂದು ಸಿದ್ದರಾಮಯ್ಯನವರ ಮೇಲೆ ಕೋಪಕ್ಕೆ ದಲಿ​ತರು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಲು ಹಿಂದೇಟು ಹಾಕಿದರು. ಇದ​ರಿಂದಾಗಿ ನಾನು ಕೂಡ ಮಾಗಡಿಯಲ್ಲಿ ಸೋಲಬೇಕಾ​ಯಿತು ಎಂದು ಹೇಳಿ​ದರು.

Tap to resize

Latest Videos

ಕಮಲ ಅರ​ಳಿ​ಸಲು ಬಿಜೆ​ಪಿ​ಯಿಂದ ಶ್ರೀರಾ​ಮನ ಜಪ: ಎಚ್‌ಡಿಕೆ, ಡಿಕೆ​ಶಿ ಕಟ್ಟಿಹಾಕುವ ಪ್ಲಾನ್‌

ದಲಿತ ಪರವಾಗಿ ನಿಂತಿರುವ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ತಾವು ಪಡೆದ ಅಧಿಕಾರವನ್ನು ತಮ್ಮ ಜನಗಳ ಹೇಳಿಕೆಗಾಗಿ ಉಪಯೋಗಿಸಿದಾಗ ಮಾತ್ರ ನಿಮಗೆ ಕೊಟ್ಟಿದ್ದಕ್ಕೆ ಪ್ರಯೋಜನವಾಗುತ್ತದೆ. ಎಲ್ಲರೂ ಸಂಘಟಿತರಾಗಿ ಮುಂಬರುವ ಚುನಾವಣೆಯನ್ನು ಎದುರಿಸಬೇಕಿದೆ ಎಂದು ತಿಳಿಸಿದರು.

ಸುಳ್ಳುಗಳ ಸರದಾರ ಶಾಸಕರು: ಮಾಗಡಿಯಲ್ಲಿ ಗಾರ್ಮೆಂಟ್ಸ್‌ ಅನ್ನು ಯಾರೋ ಮಾಡುತ್ತಿದ್ದರು ನಾನೇ ಮಾಡುತ್ತಿದ್ದೇನೆ ಎಂದು ಪ್ರಚಾರ ಪಡೆಯುತ್ತಾರೆ. ಆ ಗಾಮೆಂರ್‍ಟ್ಸ್‌ ಮಾಲೀಕರು ನನ್ನ ಬಳಿಗೂ ಬಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಭಾಗವಹಿಸಿ ಎಂದು ಆಹ್ವಾನಿಸಿದ್ದಾರೆ. ಶಾಸಕ ಎ.ಮಂಜು​ನಾಥ್‌ ಸುಳ್ಳು​ಗಳ ಸರ​ದಾರ ಎಂದು ಟೀಕಿ​ಸಿ​ದರು. ಜಿಲ್ಲಾ ಕಾಂಗ್ರೆಸ್‌ ಎಸ್ಸಿ ಘಟಕ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ಮಾಡಬಾಳ್‌ ಜಯರಾಂ, ತಾಲೂಕು ಅಧ್ಯಕ್ಷ ಚಿಕ್ಕರಾಜು ಮಾತನಾಡಿದರು. ಮಾಗಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೆಳಗುಂಬ ವಿಜಯ್ ಕುಮಾರ್‌, ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ದಿಶಾ ಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಮುಖಂಡರಾದ ಬಿ.ಟಿ.ವೆಂಕಟೇಶ್‌, ದೊಡ್ಡಿ ಲಕ್ಷ್ಮಣ್‌, ಧನಂಜಯ ನಾಯಕ್‌, ಆಗ್ರೋ ಪುರುಷೋತ್ತಮ್, ಗೋಪಾಲ್ ತಿಪ್ಪಸಂದ್ರ ಹರೀಶ್‌, ರುಕ್ಮಿಣಿ ರಂಗನಾಥ್‌ ಮತ್ತಿ​ತ​ರರು ಉಪ​ಸ್ಥಿ​ತ​ರಿ​ದ್ದರು.

ಜೆಡಿ​ಎಸ್‌ ಅಧಿ​ಕಾ​ರಕ್ಕೆ ಬಂದಲ್ಲಿ ಪಂಚ​ರತ್ನ ಜಾರಿಗೆ: ನಿಖಿಲ್‌ ಕುಮಾ​ರ​ಸ್ವಾ​ಮಿ

ಕಾಂಗ್ರೆಸ್‌ಗೇ ನನ್ನ ಬೆಂಬಲ: ನಾನು ಯಾವುದೇ ಕಾರಣಕ್ಕೂ ಮಾಗಡಿಯಿಂದ ಸ್ಪರ್ಧಿಸುವ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ದ್ರೋಹ ಬಗೆಯುವ ಕೆಲಸ ಮಾಡುವುದಿಲ್ಲ ಮುಂಬರುವ ಚುನಾವಣೆಯಲ್ಲಿ ಬಾಲಕೃಷ್ಣರವರು ಗೆದ್ದು ಮಂತ್ರಿಗಳಾಗಲಿ ಎಂದು ಮಾಜಿ ಸಚಿವ ಎಚ್‌.ಎಂ.​ರೇ​ವಣ್ಣ ಹೇಳಿದರು. ನನ್ನ ಮತ್ತು ಬಾಲಕೃಷ್ಣರ ನಡುವೆ ಸ್ವಲ್ಪ ಪ್ರಮಾಣದಲ್ಲಿ ಗೊಂದಲಗಳಿತ್ತು. ಅದನ್ನು ಈಗ ನಿವಾರಿಸಿಕೊಂಡಿದ್ದೇವೆ. ನಾನು ಪ್ರಾಮಾಣಿಕವಾಗಿ ಕಾಂಗ್ರೆಸ್‌ ಪಕ್ಷದ ಪರವಾಗಿ ದುಡಿಯುತ್ತೇನೆ. ನಾನು ಬೇರೆ ಜಿಲ್ಲೆಯಲ್ಲಿ ಪಕ್ಷದ ಟಿಕೆಚ್‌ಗೆ ಅರ್ಜಿ ಸಲ್ಲಿಸಿದ್ದು ಪಕ್ಷ ಯಾವ ರೀತಿ ಸ್ಪಂದಿಸುತ್ತದೆಯೋ ನೋಡೋಣ. ಶಾಸಕ ಎ.ಮಂಜುನಾಥ್‌ ನಾನು ಬಂದಾಗ ಕಾಲಿಗೆ ಬೀಳುತ್ತಾರೆ. ಅವರ ಕಚೇರಿಯಲ್ಲಿ ನನ್ನ ಫೋಟೋ ಹಾಕಿಕೊಂಡಿರುವುದು ಗೊಂದ​ಲಕ್ಕೆ ಕಾರ​ಣ​ವಾ​ಗಿದೆ. ನಾನು ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷಕ್ಕೆ ಬೆಂಬಲ ನೀಡು​ವು​ದಿಲ್ಲ ಎಂದು ಸ್ಪಷ್ಟನೆ ನೀಡಿದರು.

click me!