ಕರ್ನಾಟಕದಲ್ಲಿ ಮುಸಲ್ಮಾನರ ಅಟ್ಟಹಾಸ ಹೆಚ್ಚಾಗಿದೆ: ಸಿದ್ಧಲಿಂಗ ಶ್ರೀ

Published : May 29, 2022, 12:14 PM IST
ಕರ್ನಾಟಕದಲ್ಲಿ ಮುಸಲ್ಮಾನರ ಅಟ್ಟಹಾಸ ಹೆಚ್ಚಾಗಿದೆ: ಸಿದ್ಧಲಿಂಗ ಶ್ರೀ

ಸಾರಾಂಶ

*  ವಾಡಿ ದಲಿತ ಯುವಕನ ಹತ್ಯೆಗೆ ಸಿದ್ಧಲಿಂಗ ಸ್ವಾಮೀಜಿ ಕಿಡಿ *  ಹಿಂದೂಗಳು ಪ್ರೀತಿಗೆ ಪ್ರೀತಿ ಹರಿಸಿದರೆ, ಮುಸಲ್ಮಾನರು ಪ್ರೀತಿಗೆ ರಕ್ತ ಹರಿಸುತ್ತಿದ್ದಾರೆ *  ಪ್ರಿಯಾಂಕ್‌ ಖರ್ಗೆ ವಿರುದ್ಧ ಕಿಡಿ 

ಕಲಬುರಗಿ(ಮೇ.29):  ಮುಸ್ಲಿಂ ಸಮುದಾಯದ ಯುವತಿಯನ್ನು ಪ್ರೀತಿ ಮಾಡಿದ ಎಂಬ ಏಕೈಕ ಕಾರಣಕ್ಕೆ ಜಿಲ್ಲೆಯ ವಾಡಿಯಲ್ಲಿ ದಲಿತ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಇತ್ತೀಚೆಗೆ ರಾಜ್ಯದಲ್ಲಿ ಮುಸಲ್ಮಾನರ ಅಟ್ಟಹಾಸ ಮಿತಿಮೀರಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ.

ಈ ಕುರಿತಂತೆ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲಿ ಮುಸಲ್ಮಾನರ ಅಟ್ಟಹಾಸ ಮಿತಿಮೀರಿದೆ. ಹಿಂದೂ ಯುವಕರ ಮೇಲೆ ಕೊಲೆ ಎಂಬ ಅಸ್ತ್ರವನ್ನು ನಿರಂತರವಾಗಿ ಬಳಸಲಾಗುತ್ತಿದೆ. ಮುಸ್ಲಿಂ ಸಮುದಾಯದ ಯುವತಿಯನ್ನು ಪ್ರೀತಿ ಮಾಡಿದ ಎಂಬ ಏಕೈಕ ಕಾರಣಕ್ಕೆ ದಲಿತ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. 6 ತಿಂಗಳ ಹಿಂದೆ ಕೊಲೆಯಾದ ಯುವಕನಿಗೆ ಯುವತಿಯ ಸಹೋದರ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.ಆರೋಪಿಗಳು ಹೊಂಚುಹಾಕಿ ವಿಜಯನನ್ನು ನಡು ರಸ್ತೆಯಲ್ಲೇ ಕೊಲೆ ಮಾಡಿದ್ದಾರೆ. ಕರ್ನಾಟಕ ಮಾತ್ರವಲ್ಲ ದೇಶದಾದ್ಯಂತ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಲವ್‌

ಜಿಹಾದ್‌ ಹೆಸರಿನಲ್ಲಿ ಅವರ ಬದುಕನ್ನು ಹಾಳು ಮಾಡುತ್ತಾರೆ. ಆದರೆ, ಹಿಂದೂ ಯುವಕರು ಮುಸ್ಲಿಂ ಯುವತಿಯೊಂದಿಗೆ ಸ್ನೇಹ ಬೆಳೆಸಿದರೆ ಸಾಕು ಅವರನ್ನು ಹತ್ಯೆ ಮಾಡುತ್ತಾರೆ. ಹಿಂದೂಗಳು ಪ್ರೀತಿಗೆ ಪ್ರೀತಿ ಹರಿಸಿದರೆ, ಮುಸಲ್ಮಾನರು ಪ್ರೀತಿಗೆ ರಕ್ತವನ್ನು ಹರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Kalaburagi Crime: ಮೊಬೈಲ್‌ ಸ್ಟೇಟಸ್‌ನಲ್ಲಿ ಕೊಲೆಯ ಮುನ್ಸೂಚನೆ..!

ಪ್ರಿಯಾಂಕ್‌ ಖರ್ಗೆ ವಿರುದ್ಧ ಕಿಡಿ:

ಇತ್ತೀಚಿಗೆ ಚಿತ್ತಾಪುರ ತಾಲೂಕಿನಲ್ಲಿ ಹಿಂದೂ ಯುವಕರ ಹತ್ಯೆ ನಿರಂತರವಾಗಿ ನಡೆದಿದೆ. ಕಳೆದ ಮೂರು ವರ್ಷದಲ್ಲಿ ಚಿತ್ತಾಪುರ ತಾಲೂಕುವೊಂದರಲ್ಲಿಯೇ ಮೂರು ಜನ ಹಿಂದೂ ಯುವಕರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಇಷ್ಟಾದರೂ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಕೊಲೆ ಪ್ರಕರಣ ಖಂಡಿಸಿಲ್ಲ. ಕೊಲೆಯಾದ ಯುವಕರ ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸವನ್ನು ಸಹ ಮಾಡಿಲ್ಲ. ಇಂತಹ ಶಾಸಕರು ನಮಗೆ ಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.
ದಲಿತ ಯುವಕನ ಮನೆಗೆ ಹೋಗಿ ಸಾಂತ್ವನ ಹೇಳಲು ಮುಂದಾಗಿದ್ದ ಆಂದೋಲಾ ಶ್ರೀಗಳನ್ನು ನಿನ್ನೆಯೇ ಜಿಲ್ಲೆಯ ಪೊಲೀಸರು ಅಲ್ಲಿಗೆ ಹೋಗಲು ಬಿಡದಂತೆ ವಾಡಿ- ರಾವೂರ್‌ ನಡುವೆಯೇ ತಂದು ಮಠದಲ್ಲಿ ಕೆಲಕಾಲ ಇರುವಂತೆ ನೋಡಿಕೊಂಡರು ಎಂದು ಗೊತ್ತಾಗಿದೆ.
 

PREV
Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ