ಬಳ್ಳಾರಿಯಲ್ಲಿ ಮೊದಲ ಬಾರಿಗೆ ಮಾವು ಮೇಳ: ಎಲ್ಲೆಲ್ಲೂ ಹಣ್ಣಿನ ರಾಜನದ್ದೇ ದರ್ಬಾರ್‌..!

By Girish Goudar  |  First Published May 29, 2022, 10:33 AM IST

*  ಇದೇ ಮೊದಲ ಬಾರಿಗೆ ಬಿಸಿಲ ನಾಡಿನಲ್ಲಿ ಮಾವು ಮೇಳ ಆಯೋಜನೆ
*  300ಕ್ಕೂ ಹೆಚ್ಚು ಮಾವಿನ ಹಣ್ಣಿನ ತಳಿಗಳ ಪ್ರದರ್ಶನ  
*  ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ
 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಳ್ಳಾರಿ

ಬಳ್ಳಾರಿ(ಮೇ.29):  ಹಸಿದು ಹಲಸು ತಿನ್ನು ಉಂಡು ಮಾವು ತಿನ್ನು ಎನ್ನುವ ಮಾತು ಸರ್ವಕಾಲಿಕ. ಉತ್ತರದಿಂದ ದಕ್ಷಿಣದವರೆಗೂ ಮಾವಿನ ಹಣ್ಣನ್ನು ಇಷ್ಟಪಡದವರೇ ಇಲ್ಲ. ಒಂದೊಂದು ಕಡೆ ಒಂದೊಂದು ಥಳಿಯ ಮಾವು ಸಿಕ್ತದೆ. ಆದ್ರೇ ಇದೇ ಮೊಟ್ಟ ಮೊದಲ ಬಳ್ಳಾರಿಯ ಇತಿಹಾಸದಲ್ಲಿ ಹಣ್ಣಿನ ರಾಜ ಮಾವಿನ (ಮೇಳ) ಹಬ್ಬವನ್ನು ಎರಡು ದಿನಗಳ ಕಾಲ ಆಯೋಜಿಸಲಾಗಿದೆ. ಇಲ್ಲಿ ‌ಮೂನ್ನೂರು ತಳಿಯ ಮಾವಿನ ಹಣ್ಣನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ.
ಮಾವು ಬೆಳೆಯು “ಹಣ್ಣಿನ ರಾಜ ನೆಂದೇ ಹೆಸರುವಾಸಿಯಾಗಿರೋ ಮಾವಿನ ಮಹತ್ವ ಹಾಗೂ ಸ್ವಾದದ ಕುರಿತಂತೆ ಪುರಾಣ ಪುಣ್ಯ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ರುಚಿಯ ಜೊತೆಗೆ ಇದರಲ್ಲಿ ಪೌಷ್ಠಿಕಾಂಶತೆ ಇದೆ ಎಂದು ವೈದ್ಯರು ಕೂಡ ಹೇಳ್ತಾರೆ.

Tap to resize

Latest Videos

undefined

ಬಿಸಿಲನಾಡಿನಲ್ಲಿ‌ ಮಾವಿನ‌ ಹಬ್ಬ

ಹೌದು, ಬಿಸಿಲ ನಾಡು, ಗಣಿ ನಾಡು ಎಂದೆಲ್ಲ ಪ್ರಖ್ಯಾತಿ ಪಡೆದಿರೋ ಬಳ್ಳಾರಿಯಲ್ಲಿಗ ಎರಡು ದಿನಗಳ ಕಾಲ ಮಾವಿನ ಹಬ್ಬ ಮಾಡಲು ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ಸ್ ಸಹಯೋಗದಲ್ಲಿ ಯೋಜನೆ ರೂಪಿಸಲಾಗಿದೆ ಬಳ್ಳಾರಿ ತಹಶೀಲ್ದಾರರ ಕಚೇರಿ ಆವರಣದಲ್ಲಿ ಪ್ರಪ್ರಥಮ ಬಾರಿಗೆ ಮಾವು ಮೇಳ-2022 ನಡೆಯಲಿದ್ದು ಬಳ್ಳಾರಿಯ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಸ್.ಪಿ.ಭೋಗಿ ಮನವಿ ಮಾಡಿದ್ದಾರೆ.  ಮೇ. 30ರಿಂದ ಜೂ.1ರವರೆಗೆ ಎರಡು ದಿನಗಳ ಕಾಲ ಆಯೋಜನೆ ಮಾಡಿರೋ ಈ ಮೇಳದಲ್ಲಿ 300ಕ್ಕೂ ಹೆಚ್ಚು ಮಾವಿನ ಹಣ್ಣಿನ ತಳಿಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ. 

ಪಕ್ಷದಲ್ಲಿ ಬಿಎಸ್‌ವೈ ಸೈಡ್‌ಲೈನ್‌ ಆದ್ರಾ?: ರಾಮುಲು ಹೇಳಿದ್ದಿಷ್ಟು

ವೈವಿಧ್ಯಮಯ ಮಾವಿನ ಹಣ್ಣುಗಳ ತಳಿಗಳ ಸ್ವಾದ ಸವಿಯುವ ಭಾಗ್ಯ:

ಬಳ್ಳಾರಿ ನಗರದ ಮಾರುಕಟ್ಟೆಗಳಲ್ಲಿ ಬೆನೆಶಾನ್ ಮಾವಿನ ಹಣ್ಣಿನ ತಳಿಯು ಮಾತ್ರ ಖರೀದಿಗೆ ಲಭ್ಯವಾಗಿರುತ್ತದೆ. ಇದರಿಂದ ಮಾವಿನ ಹಣ್ಣಿನ ವಿಶೇಷ ಹಾಗೂ ಪ್ರಾಮುಖ್ಯತೆ ಪಡೆದಿರುವ ವೈವಿಧ್ಯಮಯ ತಳಿಗಳ ರುಚಿಯ ಸ್ವಾದದಿಂದ ಬಳ್ಳಾರಿ ಜನರು ವಂಚಿತರಾಗಬಾರದೆಂಬ ಸದುದ್ದೇಶದಿಂದ ಮತ್ತು ವೈಜ್ಞಾನಿಕವಾಗಿ, ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳನ್ನು ಲಭಿಸುವಂತೆ ಮಾಡಲು ಮಾವು ಮೇಳ ಆಯೋಜಿಸಲಾಗಿದೆ. ದೇಶಾದ್ಯಂದ ಪ್ರಸಿದ್ಧಿ ಪಡೆದಿರುವ ಹಾಗೂ ಕರ್ನಾಟಕ ರಾಜ್ಯಾದ್ಯಂತ ಪ್ರಚಲಿತದಲ್ಲಿರುವ ಸುಮಾರು 300 ಕ್ಕೂ ಹೆಚ್ಚು ಮಾವಿನ ಹಣ್ಣಿನ ತಳಿಗಳ ಪ್ರದರ್ಶನ ಈ ಮಾವು ಮೇಳದಲ್ಲಿರಲಿದೆ.

ಎಟಿಎಂಗೆ ಹಾಕೋ ಹಣದೊಂದಿಗೆ ಪರಾರಿಯಾದ ಸಿಬ್ಬಂದಿ, ಹೊಸ ಮೊಬೈಲ್ ಖರೀದಿಸಿ ಸಿಕ್ಕಿಬಿದ್ದ

ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರ ಹಿತದೃಷ್ಟಿಯಿಂದ ನೇರ ಮಾರುಕಟ್ಟೆ ವ್ಯವಸ್ಥೆ:

ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ರೈತರು ಬೆಳೆದ ಮಾವನ್ನು ನೇರವಾಗಿ ಯೋಗ್ಯ ಬೆಲೆಯಲ್ಲಿ ಜಿಲ್ಲೆಯ ಸಮಸ್ತ ಜನತೆಗೆ ತಲುಪಿಸಿ ರೈತರ ಆರ್ಥಿಕ ಮಟ್ಟವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಈ ಮೇಳ ಏರ್ಪಡಿಸಲಾಗಿದೆ.
ರೈತರ ಹಿತದೃಷ್ಠಿಯಿಂದ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆನೆಶಾನ್ ಹಣ್ಣಿನ ತಳಿಯಲ್ಲದೇ ಉತ್ಕೃಷ್ಟ ಗುಣಮಟ್ಟದ ತಳಿಗಳ ಮಾರಾಟ ವ್ಯವಸ್ಥೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ರೈತರು ಬೆಳೆದಿರುವ ಮಾವು ಬೆಳೆಯನ್ನು ಗ್ರಾಹಕರಿಗೆ ನೇರ ಮಾರಾಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಯಾವ್ಯಾವ ತಳಿಯ ಮಾವು ಲಭ್ಯ?: 

ಈ ಮಾವಿನ ಮೇಳದಲ್ಲಿ ಮಾವಿನ ಹಣ್ಣಿನ ಉತ್ಕೃಷ್ಟವಾದ ಥಳಿಗಳಾದ ಆಲ್ಫಾನ್ಸೋ,ಮಲ್ಲಿಕಾ, ಮಲಗೋವ, ರಸಪುರಿ, ದಶೆಹರಿ, ಬೆನೆಶನ್, ಯಾಕೃತಿ, ರತ್ನ, ನಾಜೂಕಪಸಂದ, ಕೊಬ್ಬರಿಮಾವು ಸೇರಿದಂತೆ ವಿವಿಧ ಬಗೆಯ ಮಾವಿನ ಹಣ್ಣಿನ ತಳಿಗಳರಲಿವೆ.
 

click me!