ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಬಿಳಿ ಬಣ್ಣ ಬಳಿದುಬಿಟ್ಟು ಹೋಗುತ್ತಾರೆ ಎಂದು ಹುಣಸೂರಿನಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಸಾಲು ಸಾಲು ಸೋತು ತಂದುಕೊಡುತ್ತಿರುವ ಬಗ್ಗೆ ಅವರು ವ್ಯಂಗ್ಯ ಮಾಡಿದ್ದಾರೆ.
ಮೈಸೂರು(ಡಿ.01): ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಬಿಳಿ ಬಣ್ಣ ಬಳಿದುಬಿಟ್ಟು ಹೋಗುತ್ತಾರೆ ಎಂದು ಹುಣಸೂರಿನಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಸಾಲು ಸಾಲು ಸೋತು ತಂದುಕೊಡುತ್ತಿರುವ ಬಗ್ಗೆ ಅವರು ವ್ಯಂಗ್ಯ ಮಾಡಿದ್ದಾರೆ.
ಹುಣಸೂರಿನಲ್ಲಿ ವಿಶ್ವನಾಥ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಡಿಸೆಂಬರ್ 9ರ ನಂತರ ರಾಜಕೀಯ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಡಿಸೆಂಬರ್ 9ರ ನಂತರ ಬದಲಾವಣೆ ಆಗುತ್ತೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಬಿಳಿ ಬಣ್ಣ ಬಳಿದುಬಿಟ್ಟು ಹೋಗುತ್ತಾರೆ ಎಂದು ತಮಾಷೆ ಮಾಡಿದ್ದಾರೆ.
'ಸೇಬಿನ ಹಾರ ಹಾಕಿಸ್ಕೊಂಡು ಮುಂದಿನ ಊರಿಗೆ ಹೋಗೋದಷ್ಟೆ ಡಿಕೆಶಿ ಕೆಲಸ'..!
ಮೊದಲಿಗೆ ಸಿದ್ದರಾಮಯ್ಯ ನಾಯಕತ್ವದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಸಮ ಆಯ್ತು. ಎರಡನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆದ್ದರು. ರಾಜ್ಯದಲ್ಲಿ ಈಗ ನಡೆಯುತ್ತಿರುವ ಉಪಚುನಾವಣೆ ಮೂರನೇ ಚುನಾವಣೆ. ಕ್ರಿಕೆಟ್‌ನಲ್ಲಿ ಸತತವಾಗಿ ಮೂರು ಸೋಲು ಕಂಡರೆ ವೈಟ್ ವಾಷ್ ಅಂತಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಅನ್ನು ವೈಟ್ ವಾಷ್ ಮಾಡಿ ಮನೆಗೆ ಹೋಗುತ್ತಾರೆ ಎಂದಿದ್ದಾರೆ.
ಗಾಂಜಾ ವ್ಯಾಪಾರಿ ಬಂಧನ: 15 ಕೆ.ಜಿ ಗಾಂಜಾ ವಶ
ಸಿದ್ದರಾಮಯ್ಯ ಅನ್ನಭಾಗ್ಯ ಅಂತಾರೆ. ಕೈ ಕೆಳಗಿಳಿಸಿ ಜೇಬಿಗೆ ಇಳಿಸಿದರೆ 80 ಲಕ್ಷ ರೂಪಾಯಿ ವಾಚ್ ಇರುತ್ತೆ. ಇವರ ಭಾಗ್ಯಗಳನ್ನು ಜನ ನೋಡಿದ್ದಾರೆ. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಹೇಗೆ ನಡೆದುಕೊಂಡರು ಎಂಬುದನ್ನು ಜನ ನೋಡಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಎಲ್ಲಿ ಕಿಟ್ಟಿ ಪಾರ್ಟಿ ಮಾಡುತ್ತಿದ್ದರು ಎಂಬುದು ಗೊತ್ತಿದೆ. ಆ ಪಾರ್ಟಿಗಳಿಗೆ ಯಾರ‌್ಯಾರು ಹೋಗುತ್ತಿದ್ದರು ಎಂಬುದೂ ಗೊತ್ತು. ಕಿಟ್ಟಿ ಪಾರ್ಟಿಗೆ ಹುಣಸೂರು ಕಾಂಗ್ರೆಸ್ ಆಭ್ಯರ್ಥಿ ಮಂಜುನಾಥ ಕೂಡ ಹೋಗುತ್ತಿದ್ದ ಎಂದು ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಹರಿಹಾಯ್ದಿದ್ದಾರೆ.
15 ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದರೆ ರಾಜೀನಾಮೆ ನೀಡ್ತೀರಾ ಸಿದ್ದರಾಮಯ್ಯನವರೇ?