ಗುಂಬಜ್‌ ಒಡೆಯುತ್ತೇನೆ ಅನ್ನುವುದಕ್ಕೆ ಪ್ರತಾಪ್‌ ಸಿಂಹ ಯಾರು?: ಸಿದ್ದರಾಮಯ್ಯ

By Kannadaprabha NewsFirst Published Nov 16, 2022, 5:12 AM IST
Highlights

ಗುಂಬಜ್‌ ಒಡೆಯುತ್ತೇನೆ ಅನ್ನುವುದಕ್ಕೆ ಪ್ರತಾಪ್‌ ಸಿಂಹ ಯಾವನ್‌ ರೀ? ಸಂಸದನಾಗಿ ಕಾಮನ್‌ಸೆನ್ಸ್‌ ಬೇಡ್ವಾ? ಏನು ಅವರು ಮನೆಯಿಂದ ದುಡ್ಡು ಹಾಕಿ ಬಸ್‌ ನಿಲ್ದಾಣ ಕಟ್ಟಿಸಿದ್ದಾರಾ? ಅಧಿಕಾರಿಗಳು ವಿನ್ಯಾಸ ಕೊಡುವಾಗ ಏನು ಮಾಡುತ್ತಿದ್ದರು? ಈಗ ನಾನೇ ಒಡೆಯುತ್ತೇನೆ ಅಂದ್ರೆ ಏನರ್ಥ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

 ಮೈಸೂರು (ನ.16):  ಗುಂಬಜ್‌ ಒಡೆಯುತ್ತೇನೆ ಅನ್ನುವುದಕ್ಕೆ ಪ್ರತಾಪ್‌ ಸಿಂಹ ಯಾ......? ಸಂಸದನಾಗಿ ಕಾಮನ್‌ಸೆನ್ಸ್‌ ಬೇಡ್ವಾ? ಏನು ಅವರು ಮನೆಯಿಂದ ದುಡ್ಡು ಹಾಕಿ ಬಸ್‌ ನಿಲ್ದಾಣ ಕಟ್ಟಿಸಿದ್ದಾರಾ? ಅಧಿಕಾರಿಗಳು ವಿನ್ಯಾಸ ಕೊಡುವಾಗ ಏನು ಮಾಡುತ್ತಿದ್ದರು? ಈಗ ನಾನೇ ಒಡೆಯುತ್ತೇನೆ ಅಂದ್ರೆ ಏನರ್ಥ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಗುಂಬಜ್‌ ಮಾದರಿಯ(Bus stand)  ಒಡೆಯುತ್ತೇನೆಂಬ ಸಂಸದ (Prathapsimha) ಹೇಳಿಕೆಗೆ ಮೈಸೂರಿನಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, 600 ವರ್ಷಗಳ ಹಿಂದೆ ಮೊಘಲರು ನಮ್ಮ ದೇಶವನ್ನು ಆಳುವಾಗ ಇವರೆಲ್ಲ ಏನು ಮಾಡುತ್ತಿದ್ದರು? ಎಂದು ಅಸಮಾಧಾನ ಹೊರಹಾಕಿದರು.

ಈಗ ಅಶಾಂತಿ ನಿರ್ಮಾಣ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತ ಕ್ರೋಡೀಕರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಬಸ್‌ ತಂಗುದಾಣ ಇದೇ ರೀತಿ ಇರಬೇಕು ಎಂಬ ರೂಲ್ಸ್‌ ಎಲ್ಲಿದೆ? ಸರ್ಕಾರಿ ಅಧಿಕಾರಿಗಳು ಮಾಡಿರುವ ಪ್ಲ್ಯಾನ್‌ ಇದು. ಗುಂಬಜ್‌ ರೀತಿ ಇರುವುದನ್ನೆಲ್ಲ ಒಡೆದು ಬಿಡುತ್ತೀರಾ? ಬಿಜೆಪಿಯ ಈ ತಂತ್ರ ವರ್ಕ್ ಆಗಲ್ಲ. ಕರ್ನಾಟಕ ಮತ್ತು ಈ ದೇಶದ ಜನ ಜಾತ್ಯತೀತರು. ಜಾತಿ, ಧರ್ಮದ ವಿಚಾರವನ್ನು ಜನ ಒಪ್ಪುವುದಿಲ್ಲ ಎಂದು ತಿಳಿಸಿದರು.

2 ದಿನದಲ್ಲಿ ಬಸ್ ಶೆಲ್ಟರ್ ನಾನು ತೆರವು ಮಾಡುತ್ತೇನೆ

ಮೈಸೂರು   :  ಬಸ್‌ ತಂಗುದಾಣ (ನಿಲ್ದಾಣ) ದಲ್ಲಿ ಗುಂಬಜ್‌ ತೆರವಿಗೆ ನಾನು ನೀಡಿದ ಎರಡು ದಿನದ ಗಡುವು ಮುಗಿದಿದೆ. ಇನ್ನೆರಡು ದಿನದಲ್ಲಿ ತೆರವು ಮಾಡದೇ ಇದ್ದರೆ ನಾನೇ ಅದನ್ನು ತೆರವು ಮಾಡುತ್ತೇನೆ. ನಾನು ನಿಲ್ದಾಣ ತೆರವು ಮಾಡಲ್ಲ, ಗುಂಬಜ್‌ ಮಾತ್ರ ತೆರವು ಮಾಡುತ್ತೇನೆ ಎಂದು ಸಂಸದ ಪ್ರತಾಪ್‌ ಸಿಂಹ ಪುನರುಚ್ಚರಿಸಿದರು.

ನಗರದಲ್ಲಿ ಮಂಗಳ ವಾರ ಸುದ್ದಿ ಗಾರರೊಂದಿಗೆ ಮಾತನಾಡಿ, ನಾನು ಹೇಳಿಕೆ ಕೊಡುವ ಮುನ್ನ ಬಸ್‌ ತಂಗು ದಾಣ ಮೇಲೆ ಬರೀ ಗುಂಬಜ್‌ ಇತ್ತು. ನಂತರ ರಾತ್ರೋ ರಾತ್ರಿ ಅದರ ಮೇಲೆ ಕಳಸ ಹೇಗೆ ಬಂತು? ಅರಮನೆ ಗೋಪುರಕ್ಕೂ ಮಸೀದಿ ಮೇಲಿನ ಗುಂಬಜ್‌ಗೂ ವ್ಯತ್ಯಾಸ ಇಲ್ವಾ? ಅರಮನೆ ಗೋಪುರ ಇಂಡೋ-ಸಾರ್ಸೆನಿಕ್‌ ಶೈಲಿಯಲ್ಲಿದೆ. ಬಸ್‌ ನಿಲ್ದಾಣದ್ದು ಯಾವ ವಾಸ್ತುಶಿಲ್ಪ ಎಂದು ಪ್ರಶ್ನಿಸಿದರು.

ಅದೆಷ್ಟುಒಡೆದು ಹಾಕ್ತಾರೆ ಒಡೆದು ಹಾಕಲಿ : ಸಂಸದ ಪ್ರತಾಪ್ ವಿರುದ್ಧ ಕಿಡಿ.

ಬಸ್‌ ನಿಲ್ದಾಣದ ಮೇಲಿನ ಗುಂಬಜ್‌ ತೆರವು ಶತಃ ಸಿದ್ಧ. ಗುಂಬಜ್‌ ತೆರವಿಗೆ ಜಿಲ್ಲಾಡಳಿತದ ಅನುಮತಿ ಬೇಕಿಲ್ಲ. ಬಸ್‌ ನಿಲ್ದಾಣ ನಿರ್ಮಾಣ ಆಗಿರುವುದು ರಾಷ್ಟ್ರೀಯ ಹೆದ್ದಾರಿ ಜಾಗದಲ್ಲಿ. ಯಾವುದೇ ಅನುಮತಿ ಪಡೆಯದೆ ಬಸ್‌ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರ ಹಣ ನಷ್ಟ ವಾಗಬಾರದೆಂದು ಬಸ್‌ ನಿಲ್ದಾಣ ಉಳಿಸಿಕೊಳ್ಳಲಾಗುತ್ತದೆ. ಬಸ್‌ ನಿಲ್ದಾಣದ ಮೇಲಿನ ಗುಂಬಜ್‌ ಮಾತ್ರ ತೆರವು ಮಾಡಲಾಗುತ್ತದೆ ಎಂದು ತಿಳಿಸಿದರು.

ಶಾಸಕ ರಾಮದಾಸ್‌ ಅವರು ಅರಮನೆ ಮಾದರಿಯಲ್ಲಿ 20 ಬಸ್‌ ನಿಲ್ದಾಣ ಕಟ್ಟಲಿ. ನಾನು ಗುಂಬಜ್‌ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಎಸ್‌.ಎ.ರಾಮದಾಸ್‌ ಅವರು ಮೌನವಹಿಸಿದ್ದಾರೆಂದರೆ ಅದರ ಅರ್ಥ ನನ್ನ ಮಾತಿಗೆ ಅವರ ಸಮ್ಮತಿ ಇದೆ. ಅವರು ಹಿಂದುತ್ವದ ಹಿನ್ನೆಲೆಯಲ್ಲಿ ಬಂದವರು ಬಹುಶಃ ಗುತ್ತಿಗೆದಾರ ಅವರ ದಾರಿ ತಪ್ಪಿಸಿರಬಹುದು ಎಂದು ಹೇಳಿದರು.

  ಗುಂಬಜ್‌ ಒಡೆಯುತ್ತೇನೆ ಅನ್ನುವುದಕ್ಕೆ ಪ್ರತಾಪ್‌ ಸಿಂಹ ಯಾರು ? ಸಂಸದನಾಗಿ ಕಾಮನ್‌ಸೆನ್ಸ್‌ ಬೇಡ್ವಾ? : ಸಿದ್ದರಾಮಯ್ಯ

ಅಧಿಕಾರಿಗಳು ವಿನ್ಯಾಸ ಕೊಡುವಾಗ ಏನು ಮಾಡುತ್ತಿದ್ದರು? ಈಗ ನಾನೇ ಒಡೆಯುತ್ತೇನೆ ಅಂದ್ರೆ ಏನರ್ಥ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ.

click me!