Tumakur : ನಗರಸಭೆ ಖಾತಾ ರಿಜಿಸ್ಟರ್‌ನಲ್ಲಿ ಅಕ್ರಮ ಖಾತೆಗಳ ಎಂಟ್ರಿ

By Kannadaprabha News  |  First Published Nov 16, 2022, 4:53 AM IST

ನಗರಸಭೆಯ ಆಡಳಿತ ಕುಸಿದಿದ್ದು ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಚರಂಡಿ, ನೈರ್ಮಲ್ಯತೆಯ ಕೊರತೆ ಎದ್ದು ಕಾಣುತ್ತಿದ್ದು, ಕಳೆದ ಐದು ವರ್ಷಗಳಿಂದ ಇ-ಖಾತೆ ಮಾಡಿಕೊಡದೆ ಸಾಕಷ್ಟುತೊಂದರೆಯಾಗುತ್ತಿದ್ದು ಈ ಬಗ್ಗೆ ನಗರಸಭೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ನಗರಸಭೆ ಸದಸ್ಯರು ಅಧಿಕಾರಿಗಳ ವಿರುದ್ಧ ನಗರಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.


 ತಿಪಟೂರು (ನ.16):   ನಗರಸಭೆಯ ಆಡಳಿತ ಕುಸಿದಿದ್ದು ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಚರಂಡಿ, ನೈರ್ಮಲ್ಯತೆಯ ಕೊರತೆ ಎದ್ದು ಕಾಣುತ್ತಿದ್ದು, ಕಳೆದ ಐದು ವರ್ಷಗಳಿಂದ ಇ-ಖಾತೆ ಮಾಡಿಕೊಡದೆ ಸಾಕಷ್ಟುತೊಂದರೆಯಾಗುತ್ತಿದ್ದು ಈ ಬಗ್ಗೆ ನಗರಸಭೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ನಗರಸಭೆ ಸದಸ್ಯರು ಅಧಿಕಾರಿಗಳ ವಿರುದ್ಧ ನಗರಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಗರ ಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ರಾಮ ಮೋಹನ್‌ (Ram Mohan )  ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ನಗರಸಭಾ ಸದಸ್ಯರು ನಗರದಲ್ಲಿರುವ ಸಮಸ್ಯೆಗಳ ಸರಮಾಲೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಘಟನೆ ನಡೆಯಿತು. ಸದಸ್ಯೆ ಟಿ.ಎಂ.ಗಂಗಾ ಮಾತನಾಡಿ, ಸರ್ಕಲ್‌ನಿಂದ ಪಾಲಿಟೆಕ್ನಿಕ್‌ವರೆಗೆ, ಬಿ.ಎಚ್‌.ರಸ್ತೆ (road)  ಸೇರಿದಂತೆ ಮುಖ್ಯ ರಸ್ತೆಗಳಲ್ಲಿಯೇ ಬೀದಿ ದೀಪಗಳಿಲ್ಲದೇ ಜನರಿಗೆ ಓಡಾಡಲು ತೊಂದರೆಯಾಗಿದೆ. ಜನವರಿಯಲ್ಲಿ ಇದೇ ಭಾಗದಲ್ಲಿ ರಾಜ್ಯ ಮಟ್ಟದ ಸಿದ್ದರಾಮ ಜಯಂತಿ ಕಾರ್ಯಕ್ರಮ ನಡೆಯಲಿರುವುದರಿಂದ ಶೀಘ್ರವಾಗಿ ಬೀದಿ ದೀಪಗಳನ್ನು ಹಾಕಿಸಿ. ಇದರ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ನಮ್ಮ ವಾರ್ಡ್‌ ಸೇರಿದಂತೆ ವಿವಿಧ ಭಾಗಗಳಲ್ಲಿ 24*7 ನೀರು ಪೂರೈಕೆ ಆಗದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಕ್ಕೆ ಸಾಕಷ್ಟುಸದಸ್ಯರು ಸಹ ಧ್ವನಿಗೂಡಿಸಿದರು.

Latest Videos

undefined

ನಗರಸಭೆ ಖಾತಾ ರಿಜಿಸ್ಟರ್‌ಗಳಲ್ಲಿ ಅಕ್ರಮವಾಗಿ ಖಾತೆಗಳ ಎಂಟ್ರಿ ಮಾಡಲಾಗುತ್ತಿದೆ. ಕೆಲ ಖಾತಾ ಪುಸ್ತಕಗಳಲ್ಲಿ ಪೆನ್ಸಿಲ್‌ನಲ್ಲಿ ಸೈಟಿನ ಅಳತೆ ಬರೆದಿದ್ದು ತೀರಾ ಅನುಮಾನಕ್ಕೆ ಎಡೆಯಾಗಿದೆ. ಅಲ್ಲದೆ ಕೆಲ ಸೈಟುಗಳನ್ನು 100*100 ಎಂದು ಬರೆದಿದ್ದು ಇಷ್ಟುದೊಡ್ಡ ಸೈಟುಗಳೇ ನಗರದಲ್ಲಿರುವುದು ತೀರಾ ಕಡಿಮೆ. ಹಾಗಾಗಿ ಕೆಲ ಅಧಿಕಾರಿಗಳು ಲಂಚದ ಆಸೆಗೆ ಬಿದ್ದು ಖಾತೆ ವಿಷಯದಲ್ಲಿ ಗೋಲ್‌ಮಾಲ್‌ ಮಾಡುತ್ತಿದ್ದು ಇವುಗಳನ್ನ ಪತ್ತೆ ಹಚ್ಚಿ ದಾಖಲಾತಿಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಖಾತೆಗಾಗಿ ದಾಖಲೆಗಳ ಸಮೇತ ಕಾನೂನುಬದ್ಧವಾಗಿ ಅರ್ಜಿಸಲ್ಲಿಸಿದವರ ಖಾತೆಗಳು ಆಗುತ್ತಿಲ್ಲ. ಆದರೆ ಈ ರೀತಿ ಅಕ್ರಮವಾಗಿ ಆಗಿರುವ ಖಾತೆಗಳೇ ಸುಮಾರು ಎಕರೆಗಳಷ್ಟಾಗುತ್ತದೆ. ಹೀಗೆ ವ್ಯವಸ್ಥಿತವಾಗಿ ಕೆಲವು ಆಸ್ತಿಗಳ ಖಾತೆಗಳು ಸೇರಿಕೊಳ್ಳುತ್ತಿವೆ ಎಂದು ಚರ್ಚಿಸಿದ ಸದಸ್ಯರಿಗೆ ಉತ್ತರಿಸಿದ ಪೌರಾಯುಕ್ತರು ನಗರಸಭೆಯಲ್ಲಿ ಹಾಲಿ ಇರುವ ಒಟ್ಟು 30 ಸಾವಿರ ಖಾತೆಗಳಲ್ಲಿ ಸುಮಾರು 12 ಸಾವಿರ ಖಾತೆಗಳನ್ನು ಈಗಾಗಲೇ ಪರಿಶೀಲಿಸಿದ್ದು, ಕೆಲ ಖಾತೆಗಳ ರಿಜಿಸ್ಟರ್‌ನಲ್ಲಿ ದಾಖಲೆಗಳಿಲ್ಲದ, ಷರಾ ಬರೆಯದ, ಪೆನ್ಸಿಲ್‌ ಎಂಟ್ರಿಗಳು ಕಂಡು ಬಂದಿದೆ. ಅವುಗಳ ಮಾಲೀಕರಿಗೆ ನೋಟಿಸ್‌ ನೀಡಿ ನಂತರ ಎಲ್ಲ ಖಾತೆಗಳನ್ನೂ ಪರಿಶೀಲಿಸಿ ಅಕ್ರಮ ಖಾತೆಗಳನ್ನು ತೆಗೆದು ಹಾಕಲು ಮತ್ತು ಸೂಕ್ತ ದಾಖಲೆ ತಂದುಕೊಟ್ಟವರಿಗೆ ಮಾತ್ರ ಮತ್ತೆ ಖಾತೆ ಮಾಡಿಕೊಡಲಾಗುವುದು ಎಂದಾಗ, ಈ ಬಗ್ಗೆ ಪೂರ್ಣ ಅಧಿಕಾರವನ್ನು ಸಭೆ ಪೌರಾಯುಕ್ತರಿಗೆ ನೀಡಿತು.

ಸಭೆಯಲ್ಲಿ ಮನೆಮನೆ ಕಸ ಸಂಗ್ರಹದಲ್ಲಿ ಸಾಕಷ್ಟುಅವ್ಯವಹಾರ, ಲೋಪಗಳಾಗುತ್ತಿದ್ದು ಪ್ರತಿ ದಿನ ಕಸ ಸಂಗ್ರಹಣೆಗೆ ಬರುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳೂ ಗಮನ ಹರಿಸುತ್ತಿಲ್ಲ. ಎಲ್‌ಇಡಿ ಬಲ್ಪ್‌ಗಳ ರಿಪೇರಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಆಗದೆ ಬಡಾವಣೆಗಳು ಕತ್ತಲಲ್ಲಿ ಮುಳುಗಿವೆ. ಇಡೀ ನಗರದಲ್ಲಿ ನೈರ್ಮಲ್ಯ ಹಾಳಾಗಿದ್ದು ಆಡಳಿತ ನಿರ್ಲಕ್ಷ್ಯವಹಿಸಿದೆ. ಇನ್ನು ಮುಂದಾದರೂ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು, ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿ ನಗರದ ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸದಸ್ಯರು ಎಚ್ಚರಿಸಿದರು.

ಸಭೆಯಲ್ಲಿ ಹಿಂದಿನ ತಿಂಗಳುಗಳ ಜಮಾಖರ್ಚು, ಜನನ-ಮರಣಗಳ ಪರಿಶೀಲನೆ, ಹಿಂದಿನ ಸ್ಥಾಯಿ ಸಮಿತಿ ಸಭೆಯ ಸ್ಥರಿಕರಣ ಸೇರಿದಂತೆ 22-23ನೇ ಸಾಲಿನ 15ನೆ ಹಣಕಾಸು ವಿಷಯ, ವಿವಿಧ ಕಾಮಗಾರಿಗಳಿಗೆ ಕರೆಯಲಾಗಿದ್ದ ಅನೇಕ ಟೆಂಡರ್‌ ಅನುಮೋದನೆ ಹಾಗೂ ಸರ್ಕಾರದ ಸುತ್ತೋಲೆಗಳನ್ನು ಸಭೆಯ ಗಮನಕ್ಕೆ ತಂದು ಚರ್ಚಿಸಲಾಯಿತು.

ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ರಾಮ್‌ಮೋಹನ್‌, ನಗರಸಭೆ ಉಪಾಧ್ಯಕ್ಷ ಸೊಪ್ಪುಗಣೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಿರಣ್‌, ಪೌರಾಯುಕ್ತ ಉಮಾಕಾಂತ್‌, ಕೋಟೆ ಪ್ರಭು, ಪ್ರಕಾಶ್‌, ಸಂಗಮೇಶ್‌, ಸದಸ್ಯ ಯೋಗೀಶ್‌, ಮಹೇಶ್‌ ಸೇರಿದಂತೆ ಹಲವಾರು ಸದಸ್ಯರು, ಅಧಿಕಾರಿಗಳು ಹಾಜರಿದ್ದು ಚರ್ಚೆಯಲ್ಲಿ ಭಾಗವಹಿಸಿದ್ದರು. ಸಾಕಷ್ಟುವಿಷಯಗಳ ಚರ್ಚೆ ನಡೆಸಲು ಸಮಯದ ಅಭಾವವಿದ್ದರಿಂದ ಸಭೆಯನ್ನು 16ರ ಬುಧವಾರಕ್ಕೆ ಮುಂದೂಡಲಾಯಿತು.

ಕಣ್ಮರೆಯಾಗುತ್ತಿರುವ ನಗರಸಭೆ ಆಸ್ತಿಗಳು

ನಗರದ ಹಾಸನ ಸರ್ಕಲ್‌ ಬಳಿ ಬಹಳ ಹಿಂದಿನಿಂದ ಒಂದು ಟೋಲ್‌ ಹಾಗೂ ಒಂದು ಕಟ್ಟಡ ಇದ್ದು ಅದರಲ್ಲಿ ವಾಟರ್‌ಮನ್‌ ಇರುತ್ತಿದ್ದರು. ಆ ಕಟ್ಟಡವನ್ನು ಖಾಸಗಿಯವರು ನೆಲಸಮ ಮಾಡಿದ್ದು ನಗರಸಭೆಯ ಕಟ್ಟಡವೇ ಕಣ್ಮರೆಯಾಗಿದೆ. ಇದೇ ರೀತಿ ಅನೇಕ ಆಸ್ತಿಗಳು ಕಣ್ಮರೆಯಾಗುತ್ತಿದ್ದು ನಗರಸಭೆ ಆಸ್ತಿಗಳಿಗೇ ಈ ಗತಿ ಆದರೆ ಸಾಮಾನ್ಯರ ಪಾಡೇನು ಎಂದು ದೂರಿದರು. ನಗರಸಭೆ ಆಸ್ತಿಯನ್ನು ನೆಲಸಮ ಮಾಡಿದವರ ಮೇಲೆ ಕೇಸ್‌ ಹಾಕಿ ಎಫ್‌ಐಆರ್‌ ದಾಖಲಿಸಿ ಆ ಜಾಗಕ್ಕೆ ಫೆನ್ಸಿಂಗ್‌ ಹಾಕಿ ನಗರಸಭೆ ಆಸ್ತಿ ಎಂದು ಬರೆಸಲಾಗುತ್ತದೆ ಎಂಬ ಉತ್ತರ ಅಧ್ಯಕ್ಷರಿಂದ ಬಂತು

click me!