ಚಾಮರಾಜೇಶ್ವರ ಧರ್ಮ ಶಾಲೆ ಸರ್ಕಾರದ ವಶಕ್ಕೆ ಪಡೆಯಲು ಮತ್ತು ಅಕ್ರಮ ಟ್ರಸ್ಟ್ ವಜಾಕ್ಕೆ ಒತ್ತಾಯಿಸಲು ಸುವರ್ಣ ಕನ್ನಡ ರಕ್ಷಣಾ ವೇದಿಕೆ ತಹಸೀಲ್ದಾರ್ ಬಸವರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
ಚಾಮರಾಜನಗರ: (ನ.16): ಚಾಮರಾಜೇಶ್ವರ ಧರ್ಮ ಶಾಲೆ ಸರ್ಕಾರದ ವಶಕ್ಕೆ ಪಡೆಯಲು ಮತ್ತು ಅಕ್ರಮ ಟ್ರಸ್ಟ್ ವಜಾಕ್ಕೆ ಒತ್ತಾಯಿಸಲು ಸುವರ್ಣ ಕನ್ನಡ ರಕ್ಷಣಾ ವೇದಿಕೆ ತಹಸೀಲ್ದಾರ್ ಬಸವರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
ಚಾಮರಾಜೇಶ್ವರದ (Temple) ಅಧೀನಕ್ಕೆ ಒಳಪಡುವ ನಗರದ (city) ಹೃದಯ ಭಾಗದ ದೊಡ್ಡಂಗಡಿಬೀದಿಯಲ್ಲಿ ದಾಸಪ್ಪನ ಛತ್ರ ಜಾಗವು ಚಾಮರಾಜೇಶ್ವರಸ್ವಾಮಿ ದೇವಸ್ಥಾನಕ್ಕೆ ಒಳಪಡುವ ಚಾಮರಾಜೇಶ್ವರ ಧರ್ಮಶಾಲೆಯನ್ನು ನಗರದ ಅನಾಮಧೇಯ ವ್ಯಕ್ತಿಗಳು ಆಸ್ತಿಯನ್ನು ಚಾಮರಾಜೇಶ್ವರ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಎಂದು ನಾಮಕಾರಣ ಮಾಡಿದ್ದಾರೆ.
undefined
ಈ ಆಸ್ತಿಯು ತಮ್ಮ ಯ ಸರ್ವೆ ನಂಬರ್ 700/ಬಿ ಖರಾಬ್ ಜಾಗವಾಗಿರುತ್ತದೆ. ಈ ಜಾಗವನ್ನು ಅನಾಮಧೇಯ ವ್ಯಕ್ತಿಗಳು ನಗರಸಭೆಯ ಖಾತೆಯ ಅಸೆಸ್‌ಮೆಂಟ್ ನಂ.726/668 ಹೊಸ ನಂಬರ್ 726ರಲ್ಲಿ ಟ್ರಸ್ಟ್ ಹೆಸರಿಗೆ ಅಕ್ರಮ ಖಾತೆ ಮಾಡಿಸಿರುತ್ತಾರೆ, ಈ ಆಸ್ತಿಯು ಸಂಪೂರ್ಣ ವಾಣಿಜ್ಯಕಟ್ಟಡವಾಗಿರುತ್ತದೆ. ಈ ಕಟ್ಟಡ ಆಸ್ತಿ 50 ಕೋಟಿಗೂ ಹೆಚ್ಚು ಬೆಲೆ ಹೊಂದಿರುತ್ತದೆ.
ಈ ಆಸ್ತಿಯ ಕಟ್ಟಡ ಬಾಡಿಗೆಯನ್ನು ಸಹ ಟ್ರಸ್ಟ್ ನವರೇ ಪಡೆದುಕೊಳ್ಳುತ್ತಿದ್ದಾರೆ. ಈ ಆಸ್ತಿಯನ್ನು ತಾವು ಉನ್ನತಮಟ್ಟದಲ್ಲಿ ತನಿಖೆ ನಡೆಸಿ, ಟ್ರಸ್ಟ್ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.
ಟ್ರಸ್ಟ್ ವಜಾ ಮಾಡಬೇಕು. ಮುಜರಾಯಿ ಇಲಾಖೆಗೆ ಒಳಪಡುವ ಆಸ್ತಿಯನ್ನು ತಮ್ಮ ಇಲಾಖೆಯ ಸುಪರ್ದಿಗೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಉಗ್ರಹೋರಾಟ ಮಾಡುವುದಾಗಿ ಸುವರ್ಣ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ್ ವಾಜಪೇಯಿ ಹಾಗೂ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜ್ ಎಚ್ಚರಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ದ್ವಾರ್ಕಿ, ಅರುಣ್‌ಕುಮಾರ್ ಗೌಡ, ಚಿನ್ನಸ್ವಾಮಿ ಬಸವನಪುರ, ನಾಗಶೆಟ್ಟಿ, ಬಂಗಾರನಾಯಕ, ಸುನೀಲ್, ಲಿಂಗರಾಜು ಇತರರು ಹಾಜರಿದ್ದರು.
ಬಂಡಿಪುರಕ್ಕೆ 50ರ ಸಂಭ್ರಮ
ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ನ.09): ಅದು ದೇಶದ ಮೊದಲ ಹುಲಿ ರಕ್ಷಿತಾರಣ್ಯ.ಆ ಅರಣ್ಯಕ್ಕಿಗ 50 ವರ್ಷದ ಸಂಭ್ರಮ. ಹುಲಿಗಳು ಭಾರತದಲ್ಲಿ ಅಳಿವಿನಂಚಿನಲ್ಲಿದ್ದ ಪ್ರಾಣಿ. ಆದ್ರೀಗ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕೇವಲ 13 ಹುಲಿಗಳಿದ್ದ ಆ ಅರಣ್ಯದಲ್ಲಿಗ 140 ಕ್ಕೂ ಹೆಚ್ಚು ಹುಲಿಗಳ ಆವಾಸಸ್ಥಾನವಾಗಿದೆ. ಅತಿಹೆಚ್ಚು ಹುಲಿಗಳ ಪೋಷಿಸುತ್ತಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಅರಣ್ಯ, ಹುಲಿರಕ್ಷಿತಾರಣ್ಯವಾಗಿ 50 ನೇ ವಸಂತಕ್ಕೆ ಕಾಲಿಟ್ಟಿದೆ. ಹೌದು, 1973 ರಲ್ಲಿ ಭಾರತದ ಮೊಟ್ಟ ಮೊದಲ ಹುಲಿ ರಕ್ಷಿತಾರಣ್ಯಯಾಗಿ ಬಂಡೀಪುರವನ್ನ ಘೋಷಣೆ ಮಾಡಲಾಯಿತು. ಅಂದು ಹುಲಿ ರಕ್ಷಿತಾರಣ್ಯವಾಗುವ ಸಂದರ್ಭದಲ್ಲಿ ಇಡೀ 1200 ಚದರ ಕಿ.ಮೀ ವ್ಯಾಪ್ತಿಯ ಅರಣ್ಯದಲ್ಲಿದಿದ್ದು ಕೇವಲ 10 ರಿಂದ 13 ಹುಲಿಗಳಷ್ಟೆ ಎಂದು ಅಂದಾಜು ಮಾಡಲಾಗಿತ್ತು. ಇದಾದ ಬಳಿಕ ಉತ್ತಮವಾದ ಸಂರಕ್ಷಣೆಯಿಂದ ಇದೀಗ ಬಂಡೀಪುರದಲ್ಲಿ 140 ಕ್ಕೂ ಹೆಚ್ಚು ಹುಲಿಗಳಿದೆ ಅಂತ ಕಳೆದ ಹುಲಿಗಣತಿ ವೇಳೆ ಅಂದಾಜು ಮಾಡಲಾಗಿದೆ. ಈ ಹುಲಿಗಳ ಉಳಿಸುವುದೆ ಹಿಂದೆ ದೊಡ್ಡ ಸವಲಾಗಿತ್ತು. ಆದ್ರೀಗಾ ಹುಲಿಗಳ ಸಂರಕ್ಷಣೆ ಉತ್ತಮವಾಗಿದ್ದು, ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಅದ್ರಲ್ಲೂ ಗಡಿ ಜಿಲ್ಲೆ ಚಾಮರಾಜನಗರ ಹುಲಿಗಳ ನಾಡು ಎಂದೆ ಹೆಸರು ಗಳಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿ ರಕ್ಷಿತಾರಣ್ಯಗಳಿದೆ. ಹಾಗೆ ಮಲೈ ಮಹದೇಶ್ವರ ವನ್ಯಜೀವಿ ಧಾಮ ಕೆಲವೆ ದಿನಗಳಲ್ಲಿ ರಕ್ಷಿತಾರಣ್ಯ ಆಗುವ ನಿರೀಕ್ಷೆ ಕೂಡ ಇದೆ. ಅದಷ್ಟೆ ಅಲ್ಲದೆ ಉತ್ತಮವಾದ ಸಂರಕ್ಷಣೆಯಿಂದ ಕಾಡಿನಲ್ಲಿ ಪ್ರಾಣಿಗಳ ಭೇಟೆಯಾಗುತ್ತಿದ್ದ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆ ಕಂಡಿದೆ. ಇದೀಗ ಹುಲಿಗಳಂತ ಮಾಂಸಹಾರಿ ಪ್ರಾಣಿಗಳಿಗೆ ಬೇಕಾದ ಬೇಟೆ ಪ್ರಾಣಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಕಾರಣದಿಂದಲೇ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಇದರಿಂದಾಗಿಯೇ ಚಾಮರಾಜನಗರ ಜಿಲ್ಲೆಯನ್ನ ಹುಲಿಗಳ ನಾಡು ಎಂದು ಕರೆಯಲು ಕಾರಣವಾಗಿದೆ.
CHAMARAJANAGAR : ಅರೇಪುರ - ತೊಂಡವಾಡಿ ಗೇಟ್ ನಡುವೆ ರಸ್ತೆ ಕುಸಿತ
ಬಂಡೀಪುರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ
ಇನ್ನು ಹುಲಿಗಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ ಅಂದ್ರೆ ಸಂರಕ್ಷಣೆ ವಿಚಾರವಾಗಿ ಅರಣ್ಯ ಇಲಾಖೆ ತೆಗೆದುಕೊಂಡ ಹೆಜ್ಜೆಗಳ. ಈ ಹಿಂದೆ ಹುಲಿಗಳ ಹಾಗೂ ವನ್ಯಜೀವಿ ಬೇಟೆಗಾರರು ಮೇಲೆ ಇಲಾಖೆ ಸಾಕಷ್ಟು ನಿಗ ಇಟ್ಟಿತು. ಇದ್ರಿಂದ ಹುಲಿಗಳ ಸಂಖ್ಯೆ ಹೆಚ್ಚಾಯ್ತು. ಅದ್ರಲ್ಲೂ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಜಿಲ್ಲೆಗೆ ವಿಶೇಷ ಗರಿಮೂಡಿದಂತಾಗಿದೆ. ಈ ರೀತಿ ಹುಲಿಗಳ ಸಂಖ್ಯೆ ಹೆಚ್ಚಾದ ಕಾರಣದಿಂದಲೇ ಬಂಡೀಪುರಕ್ಕೆ ಬರುವಂತ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ. ದೇಶ ವಿದೇಶದಿಂದ ಬರುವಂತ ಪ್ರವಾಸಿಗರು ಬಂಡೀಪುರದಲ್ಲಿ ಸಫಾರಿ ಮಾಡಿ ಎಂಜಾಯ್ ಮಾಡಿ ಹೋಗುತ್ತಿದ್ದಾರೆ. ಆದ್ರೆ ಪರಿಸರವಾದಿಗಳು ಮಾತ್ರ ಅರಣ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ಇದೆ. ಬಂಡೀಪುರ ಹುಲಿ ರಕ್ಷಿತಾರಣ್ಯವಾಗಿ 50 ವರ್ಷ ಪೂರೈಕೆಯಾಗಿದೆ ಇದು ಖುಷಿಯ ವಿಚಾರ. ಆದ್ರೆ ಜನರಿಗೆ ಕಾಡಿನ ಮಾಹತ್ವ ಅಥವ ಸಂರಕ್ಷಣೆಯ ಮಹತ್ವ ಬಗ್ಗೆ ತಿಳಿಸಲು ವಿಫಲವಾಗಿದ್ದಾರೆ. ಕೇವಲ ಅಂಕಿಗಳಿಗಷ್ಟೆ ಮಹತ್ವಕೊಡಲಾಗುತ್ತಿದೆ. ಇದನ್ನು ಹೊರತು ಪಡಿಸಿ ಜನರಿಗೆ ಕಾಡಿನ ಪರಿಚಯ ಮಾಡುವತ್ತ ಕೆಲಸ ಮಾಡಲಿ ಎನ್ನುವ ಸಲಹೆ ನೀಡುತ್ತಿದ್ದಾರೆ.
ಒಟ್ಟಾರೆ, ದೇಶದ ಮೊದಲ ಹುಲಿರಕ್ಷಿತಾರಣ್ಯಕ್ಕೆ 50 ವರ್ಷ ಪೂರೈಕೆಯಾಗಿರೋದು ನಿಜಕ್ಕೂ ರಾಜ್ಯಕ್ಕೆ ಹೆಮ್ಮೆಯ ವಿಚಾರವೆ. ಹೀಗೆ ಪರಿಸರ ಸಂರಕ್ಷಣೆ ಕಾರ್ಯ ಮುಂದುವರೆದು ನಮ್ಮ ಸಂಪತ್ತನ್ನ ಮುಂದಿನ ಪೀಳಿಗೆಗು ಉಳಿಸುವ ಕೆಲಸವಾಗಲಿ ಎಂಬುದೆ ನಮ್ಮ ಆಶಯ.