* ಭರತನಹಳ್ಳಿಯ ಸ.ಹಿ.ಪ್ರಾ ಶಾಲೆಯ ಅಡುಗೆ ಕೋಣೆಯ ಮೇಲ್ಚಾವಣಿ ಕುಸಿದಿದೆ
* ಸುಮಾರು 5 ಲಕ್ಷ ಹಾನಿಯಾಗಿದೆ. ಸ್ಥಳೀಯ ದರ್ಗಾವೊಂದಕ್ಕೂ ಹಾನಿ
* ಶಿರಸಿಯಲ್ಲಿ ಗುಡುಗು ಸಿಡಿಲು ಸಹಿತ ಮಳೆ
ಯಲ್ಲಾಪುರ(ಮಾ.29): ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಅಕಾಲಿಕವಾಗಿ ಬೀಸಿದ ವಿಪರೀತ ಗಾಳಿ-ಮಳೆಯಿಂದಾಗಿ(Rain) ಲಕ್ಷಾಂತರ ರು. ಹಾನಿ ಸಂಭವಿಸಿದೆ. ಭರತನಹಳ್ಳಿಯ ಸ.ಹಿ.ಪ್ರಾ ಶಾಲೆಯ ಅಡುಗೆ ಕೋಣೆಯ ಮೇಲ್ಚಾವಣಿ ಕುಸಿದಿದೆ. ಇದರಿಂದ ಸುಮಾರು . 5 ಲಕ್ಷ ಹಾನಿಯಾಗಿದೆ. ಸ್ಥಳೀಯ ದರ್ಗಾವೊಂದಕ್ಕೂ ಹಾನಿಯಾಗಿದೆ. ಅಂತೆಯೇ ಕುಂದರಗಿಯ ಸುಮನಾ ಮಂಜುನಾಥ ಗೌಡ, ಭರತನಹಳ್ಳಿಯ ಸುರೇಶ ಎಂ. ಶೇಟ್, ಮಾವಿನಕಟ್ಟಾದ ಸುಶೀಲಾ ಸಿದ್ದಿ, ಲಕ್ಷ್ಮಿ ಸಿದ್ದಿ, ಲಕ್ಷ್ಮಿವಡ್ಡರ್, ಸರಿತಾ ಜೋಗೇರ್, ನರಸಿಂಹ ಬೋವಿವಡ್ಡರ್ಅವರ ಮನೆಗಳಿಗೆ ಧಕ್ಕೆಯಾಗಿದೆ.
ಮಾವಿನಕಟ್ಟಾದ ಆರ್.ಎಂ. ಹೆಗಡೆಯವರ ಟೈಲರಿಂಗ್ಮತ್ತು ಇಲೆಕ್ಟ್ರಿಕ್ಅಂಗಡಿಗೂ ಹಾನಿ ಸಂಭವಿಸಿದೆ. ತಹಶೀಲ್ದಾರ್ ರ್ಶ್ರೀಕೃಷ್ಣ, ಸಿಬ್ಬಂದಿ ಜೊತೆಗೂಡಿ ಸ್ಥಳಕ್ಕೆ ತೆರಳಿ ಹಾನಿಯ ಪರಿಶೀಲನೆ ನಡೆಸಿದರು.
undefined
Summer Rains: ಬೆಂಗ್ಳೂರಲ್ಲಿ ಸತತ 2ನೇ ದಿನವೂ ವರುಣನ ಅಬ್ಬರ: ಇನ್ನೂ 2 ದಿನ ಮಳೆ
ಶಿರಸಿಯಲ್ಲಿ ಗುಡುಗು ಸಿಡಿಲು ಸಹಿತ ಮಳೆ
ಶಿರಸಿ(Sirsi) :ನಗರದಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಜಾತ್ರೆಯ ನಂತರ ಸಾರ್ವಜನಿಕರ ಖರೀದಿ ಪ್ರಕ್ರಿಯೆಗೆ ತೊಂದರೆ ಉಂಟಾಗಿದೆ.
ಮಾರಿಕಾಂಬಾ ದೇವಿ ಜಾತ್ರೆ(Marikamba Devi Fair) ಮುಗಿದು ವಾರಗಳ ಕಾಲ ಅಂಗಡಿಗಳು ಹಾಗೇ ಇರುತ್ತವೆ. ವ್ಯಾಪಾರಸ್ಥರೂ ಅಂಗಡಿ ಖಾಲಿ ಮಾಡುವ ಸಿದ್ಧತೆಯಲ್ಲಿರುವುದರಿಂದ ವಸ್ತುಗಳನ್ನೂ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಾರೆ. ಹೀಗಾಗಿ ಖರೀದಿಯ ಪ್ರಮಾಣವೂ ಜೋರಾಗಿದೆ.
ಸೋಮವಾರ ಸಂಜೆ ನಾಲ್ಕು ಗಂಟೆಯ ವೇಳೆ ಒಮ್ಮೆಲೇ ಮಳೆ ಗುಡುಗು ಸಿಡಿಲಿನೊಂದಿಗೆ ಆರಂಭಗೊಂಡಿದೆ. ಇದರಿಂದಾಗಿ ಪೂರ್ವ ಸಿದ್ಧತೆ ಇಲ್ಲದೇ ನಗರದೆಡೆ ಆಗಮಿಸಿದ್ದವರು ಗೊಂದಲಕ್ಕೀಡಾದರು. ಸುಮಾರು ಮುಕ್ಕಾಲು ತಾಸು ಮಳೆ ಸುರಿದಿದೆ.
ಮುಂಡಗೋಡದಲ್ಲಿ ಭಾರೀ ಗಾಳಿ-ಮಳೆ
ಮುಂಡಗೋಡ(Mundgod): ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಸೋಮವಾರ ಮಧ್ಯಾಹ್ನ ಸಿಡಿಲು, ಗುಡುಗು ಸಹಿತ ಭಾರಿ ಗಾಳಿ-ಮಳೆಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಪಟ್ಟಣದ ವಾರದ ಸಂತೆಯಾಗಿರುವುದರಿಂದ ಭಾರಿ ಮಳೆಯಿಂದಾಗಿ ಸಂತೆ ವ್ಯಾಪಾರಸ್ಥರು ಹಾಗೂ ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಾಯಿತು. ಅಲ್ಲಲ್ಲಿ ಗಿಡಗಳು ಉರುಳಿದ್ದು, ಸಣ್ಣ ಪುಟ್ಟಹಾನಿ ಸಂಭವಿಸಿದೆ. ಕೆಲ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಸಂಜೆವರೆಗೂ ವಿದ್ಯುತ್ ಕಣ್ಣಾ ಮುಚ್ಚಾಲೆಯಾಗುತ್ತಿತ್ತು. ಇದರಿಂದ ಸಂತೆ ನಿಮಿತ್ತ ಹಿಟ್ಟಿನ ಗಿರಣಿ, ರೈಸ್ ಮಿಲ್‌ಗಳಿಗೆ ಬಂದ ಗ್ರಾಹಕರು ವಿದ್ಯುತ್ ಬರುವವರೆಗೆ ಕಾಯಬೇಕಾಯಿತು.
ಅಸಾನಿ ಚಂಡಮಾರುತ ಅಬ್ಬರ: ಅಂಡಮಾನ್‌ನಲ್ಲಿ ಭಾರೀ ಗಾಳಿ ಮಳೆ
ಫ್ಲೋರ್ಟ್‌ಬ್ಲೇರ್: ಅಸಾನಿ ಚಂಡಮಾರುತ ಬೀಸಿರುವ ಹಿನ್ನೆಲೆಯಲ್ಲಿ ಮಾ.21 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕರಾವಳಿ ಪ್ರದೇಶಗಳಲ್ಲಿ ಭಾರೀ ಗಾಳಿ ಮತ್ತು ಮಳೆಯಾಗಿತ್ತು. ಆ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ದ್ವೀಪಗಳ ನಡುವಿನ ಹಡಗು ಸೇವೆಗಳು ಮತ್ತು ಚೆನ್ನೈ-ವಿಶಾಖಪಟ್ಟಣ ನಡುವಿನ ಹಡಗು ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಚಂಡಮಾರುತದ ಹಿನ್ನೆಲೆಯಲ್ಲಿ 150 ಎನ್‌ಡಿಆರ್‌ಎಫ್ ಸಿಬ್ಬಂದಿಗಳನ್ನು ನೇವಿಸಲಾಗಿದ್ದು, 6 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಫ್ಲೋರ್ಟ್‌ಬ್ಲೇರ್ ಉತ್ತರ, ಮಧ್ಯ ಮತ್ತು ದಕ್ಷಿಣ ಅಂಡಮಾನಗಳಲ್ಲಿ ಭಾರೀ ಗಾಳಿ, ಮಳೆಯಾಗುತ್ತಿದೆ. ಆದ್ದರಿಂದ ಮಾ. 22ರ ವರೆಗೆ ಎಲ್ಲಾ ಅಂತರ ದ್ವೀಪ ಸೇವೆಗಳನ್ನು ರದ್ದುಗೊಳಿಸುವಂತೆ ಶಿಪ್ಪಿಂಗ್ ಸೇವೆಗಳ ನಿರ್ದೇಶನಾಲಯವು ತಿಳಿಸಿತ್ತು.
Bengaluru Record Rainfall: ಸಿಲಿಕಾನ್ ಸಿಟಿಯಲ್ಲಿ ದಶಕದ ದಾಖಲೆಯ ಬೇಸಿಗೆ ಮಳೆ!
ಅಸಾನಿ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, 2022ರ ಮೊದಲ ಚಂಡಮಾರುತ ‘ಅಸಾನಿ’ ಸೃಷ್ಟಿಯಾಗುತ್ತಿದೆ. ಈ ಚಂಡಮಾರುತ ಗಂಟೆಗೆ 90 ಕಿ.ಮೀ ವೇಗದಲ್ಲಿ ಮಾ.21ರಂದು ಅಂಡಮಾನ್ ನಿಕೋಬಾರ್‌ಗೆ ಅಪ್ಪಳಿಸುವ ಸಾಧ್ಯತೆ ಇದೆ. ನಂತರ ಈ ಚಂಡ ಮಾರುತ ಬಾಂಗ್ಲಾದೇಶ ಮತ್ತು ಮಯನ್ಮಾರ್‌ನತ್ತ ಚಲಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು.
ಅಂಡಮಾನ್‌ನಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಭಾರತೀಯ ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡವನ್ನು ಸಿದ್ಧವಾಗಿರುವಂತೆ ಸೂಚಿಸಲಾಗಿದೆ. ಭಾರತದ ತೀರ ಪ್ರದೇಶದವರೆಗೂ ಈ ಚಂಡ ಮಾರುತ ತಲುಪುವುದಿಲ್ಲ. ಅಸಾನಿ ಎಂಬ ಹೆಸರನ್ನು ಈ ಚಂಡ ಮಾರುತಕ್ಕೆ ಶ್ರೀಲಂಕಾ ಸೂಚಿಸಿತ್ತು.