ಸರ್ಕಾರಿ ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಇರಬೇಕಿತ್ತು: ಸಚಿವ ಬಿ.ಸಿ.ಪಾಟೀಲ್‌

By Kannadaprabha NewsFirst Published Aug 16, 2022, 12:11 PM IST
Highlights

ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಕಾಂಗ್ರೆಸ್‌ ಬೇರೆ. ಈಗಿನ ಕಾಂಗ್ರೆಸ್‌ ಕುಟುಂಬಕ್ಕಾಗಿ ಉಳಿದ ಪಕ್ಷ. ಸ್ವಾತಂತ್ರಕ್ಕಾಗಿ ಸಿದ್ದರಾಮಯ್ಯ ಆಗಲೀ, ನಾನಾಗಲಿ ಹೋರಾಡಿಲ್ಲವೆಂದು ಹೇಳಿದ ಪಾಟೀಲ್‌

ಚಿತ್ರದುರ್ಗ(ಆ.16):  ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ರಾಜ್ಯ ಸರ್ಕಾರ ಆ.14ರಂದು ನೀಡಿದ ಜಾಹೀರಾತಿನಲ್ಲಿ ದೇಶದ ಮೊದಲ ಪ್ರಧಾನಿ ಜವಹರಲಾಲ್‌ ನೆಹರು ಭಾವಚಿತ್ರ ಹಾಕಬೇಕಿತ್ತೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದರಾಮಯ್ಯ ನೀಡಿದ ಇದು ಸರ್ಕಾರದ ಜಾಹೀರಾತೋ ಅಥವಾ ಆರ್‌ಎಸ್‌ಎಸ್‌ನದೋ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಸಿಪಾಟೀಲ್‌, ಆರಂಭದಲ್ಲಿ ನಾನು ಸರ್ಕಾರದ ಜಾಹೀರಾತು ನೋಡಿಲ್ಲವೆಂದು ಜಾರಿಕೊಳ್ಳಲು ಯತ್ನಿಸಿದರು. ನಂತರ ನೆಹರು ಭಾವಚಿತ್ರ ಹಾಕಬೇಕಿತ್ತೆಂದರು. ಸರ್ಕಾರ ನಡೀತಿಲ್ಲ, ಮ್ಯಾನೇಜ್‌ ಮಾಡ್ತಿದೀವಿ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ನಿರಾಕರಿಸಿದ ಅವರು ನಾವು ಸರ್ಕಾರದ ನಡೆಸುತ್ತಿದ್ದೇವೆ. ಸಚಿವ ಮಾಧುಸ್ವಾಮಿ ನಾಲಗೆ ನಾನಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆಂದು ಸಮರ್ಥಿಸಿದರು.

CHITRADURGA: ಸರ್ವರ ಪ್ರಯತ್ನ, ಸರ್ವರ ಅಭಿವೃದ್ಧಿಯ ಸಂದೇಶ ಸಾರಿದ ಕೃಷಿ ಸಚಿವ ಬಿ.ಸಿ.ಪಾಟೀಲ್

ಸಿಎಂ ಬೊಮ್ಮಾಯಿ ನಾಲಾಯಕ್‌ ಎಂದ ಸಿದ್ದರಾಮಯ್ಯ ಹೇಳಿಕೆಗೆ ಸಿದ್ದರಾಮಯ್ಯ ಕೇಳಿ ಬೊಮ್ಮಾಯಿ ಆಡಳಿತ ನಡೆಸಬೇಕಿಲ್ಲವೆಂದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಕಾಂಗ್ರೆಸ್‌ ಬೇರೆ. ಈಗಿನ ಕಾಂಗ್ರೆಸ್‌ ಕುಟುಂಬಕ್ಕಾಗಿ ಉಳಿದ ಪಕ್ಷ. ಸ್ವಾತಂತ್ರಕ್ಕಾಗಿ ಸಿದ್ದರಾಮಯ್ಯ ಆಗಲೀ, ನಾನಾಗಲಿ ಹೋರಾಡಿಲ್ಲವೆಂದು ಹೇಳಿದರು.
 

click me!