ಮುಸ್ಲಿಂ ಗುರುಗಳನ್ನು ಬಿಡುಗಡೆ ಮಾಡಿ, ಜ್ಞಾನವ್ಯಾಪಿ ಮಸೀದಿಗೆ ತೊಂದರೆ ಮಾಡಬೇಡಿ; ಮುಸ್ಲಿಮರ ಪ್ರತಿಭಟನೆ

By Sathish Kumar KH  |  First Published Feb 8, 2024, 12:46 PM IST

ದೇಶದಲ್ಲಿ ಬಂಧನವಾಗಿರುವ ಇಬ್ಬರು ಪ್ರಮುಖ ಮುಸ್ಲಿಂ ಗುರುಗಳನ್ನು ಕೂಡಲೇ ಬಿಡುಗಡೆ ಮಾಡಿ. ಜೊತೆಗೆ, ಜ್ಞಾನವ್ಯಾಪಿ ಮಸೀದಿಗಳಂತಹ ವಿಚಾರಗಳನ್ನು ಎಲ್ಲಿಯೂ ಮುನ್ನೆಲೆಗೆ ತರಬೇಡಿ ಎಂದು ಶಿವಮೊಗ್ಗ ಮುಸ್ಲಿಂ ಮುಖಂಡರು ಪ್ರತಿಭಟಿಸಿದರು.


ಶಿವಮೊಗ್ಗ (ಫೆ.08): ದೇಶದಲ್ಲಿ ಬಂಧನವಾಗಿರುವ ಇಬ್ಬರು ಪ್ರಮುಖ ಮುಸ್ಲಿಂ ಗುರುಗಳನ್ನು ಕೂಡಲೇ ಬಿಡುಗಡೆ ಮಾಡಿ. ಜೊತೆಗೆ, ಜ್ಞಾನವ್ಯಾಪಿ ಮಸೀದಿಗಳಂತಹ ವಿಚಾರಗಳನ್ನು ಎಲ್ಲಿಯೂ ಮುನ್ನೆಲೆಗೆ ತರಬೇಡಿ ಎಂದು ಆಗ್ರಹಿಸಿ ಶಿವಮೊಗ್ಗದಲ್ಲಿ ಮಕರ್ಜಿ ಸುನ್ನಿ ಜಾಮಿಯಾ ಮಸೀದ್ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗದ ಡಿಸಿ ಕಚೇರಿ ಎದುರು ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಮುಸ್ಲಿಂ ಧಾರ್ಮಿಕ ಗುರುಗಳಾದ ಮುಪ್ತಿ ಸಲ್ಮಾನ್ ಅಜ್ಜರಿ ಹಾಗೂ ಹಜರತ್ ಖಮರ್ ಉಸ್ಮಾನಿ ಇವರ ಪ್ರಕರಣಗಳನ್ನು ವಾಪಾಸ್ ಪಡೆಯುವಂತೆ ಆಗ್ರಹ ಮಾಡಿದ್ದಾರೆ. ಜೊತೆಗೆ, ಜ್ಞಾನವ್ಯಾಪಿ ಮಸೀದಿಯಂತಹ ವಿಷಯಗಳನ್ನು ಮುನ್ನಲೆಗೆ ತರದಂತೆ ಅಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಭಾರತದ ಮುಸ್ಲಿಂ ಧಾರ್ಮಿಕ ಗುರು ಮುಫ್ತಿ ಸಲ್ಮಾನ್ ಅಜ್ಜರಿ ತಮ್ಮ ವಿಚಾರವನ್ನು ಘಝಲಿನ ರೂಪದಲ್ಲಿ ಮಂಡಿಸಿದಾಗ ಅದರಲ್ಲಿ ಧರ್ಮವನ್ನು ದ್ವೇಷಿಸುವ ಅಂಶಗಳು ಇರುತ್ತವೆ ಎಂದು ಬಂಧಿಸಲಾಗಿದೆ.

Tap to resize

Latest Videos

ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದ ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆ: ಶಾಸಕ ಜಿ.ಟಿ.ದೇವೇಗೌಡ

ಮುಸ್ಲಿಂ ಧಾರ್ಮಿಕ ಗುರು ಮುಫ್ತಿ ಸಲ್ಮಾನ್ ಅಜ್ಜರಿ ಮೇಲೆ ಸುಳ್ಳು ಕ್ರಿಮಿನಲ್‌ ಪ್ರಕರಣವನ್ನು ದಾಖಲಿಸಿರುವುದು ಖಂಡನೀಯ. ಅವರು ಗಜ್ಜಲಿನ ರೂಪದಲ್ಲಿ ಮಂಡಿಸಿರುವ ವಿಚಾರಗಳಲ್ಲಿ ಯಾವುದೇ ಧರ್ಮಗಳನ್ನು ದ್ವೇಷಿಸುವ ಅಂಶಗಳು ಇರುವುದಿಲ್ಲ. ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿರುವುದರಲ್ಲಿ ಯಾವುದೇ ಸತ್ಯಾಂಶಗಳು ಇರುವುದಿಲ್ಲ. ಇವರು ಬಂಧಿಸಿರುವ ವಿಚಾರವು ಸಂವಿಧಾನದ ಅನುಚ್ಛೇದ 19ರ ಅಡಿಯಲ್ಲಿ ಎಲ್ಲರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿರುವ ಅಡಿಯಲ್ಲಿಯೆ ಇರುತ್ತದೆ. ಇವರ ಮೇಲಿರುವ ಪ್ರಕರಣವನ್ನು ವಾಪಾಸ್ ಪಡೆಯುವಂತೆ ಗುಜರಾತ್ ರಾಜ್ಯ ಸರ್ಕಾರಕ್ಕೆ ಅಗ್ರಹಿಸುತ್ತೇವೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವೀಲ್‌ಚೇರ್‌ನಲ್ಲೂ ದೇಶಕ್ಕಾಗಿ ಸೇವೆ ಸಲ್ಲಿಸಿದ ನಾಯಕ, ಮನ್‌ಮೋಹನ್ ಸಿಂಗ್ ಶ್ಲಾಘಿಸಿದ ಮೋದಿ!

ಇದೇ ರೀತಿ ಇನ್ನೋರ್ವ ಮುಸ್ಲಿಂ ಧಾರ್ಮಿಕ ಗುರು ಹಜರತ್ ಖಮರ್ ಉಸ್ಮಾನಿ ಇವರನ್ನು ಸಹ ಇಂತಹದೆ ಪ್ರಕರಣದಲ್ಲಿ 7 ತಿಂಗಳ ಹಿಂದೆ ಬಂಧಿಸಿದ್ದು, ಅವರು ಇನ್ನೂ ಜೈಲಿನಲ್ಲಿದ್ದಾರೆ. ಇವರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ವಾಪಾಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿಕೊಳ್ಳುತ್ತೇವೆ. ಮುಸ್ಲಿಂ ಜನಾಂಗದವರಿಗೆ ಬೇರೆಯವರ ಸ್ಥಳ ಅಥವಾ ಜಾಗದಲ್ಲಿ ಮಸೀದಿಗಳನ್ನು ಕಟ್ಟಲು ಅವಕಾಶವಿರುವುದಿಲ್ಲ. ಇಂತಹ ಕೃತ್ಯಗಳಿಗೆ ಇಸ್ಲಾಂ ಧರ್ಮವು ಅವಕಾಶ ನೀಡುವುದಿಲ್ಲ. ಅದಾಗ್ಯೂ ಕೋಮುವಾದಿ ಶಕ್ತಿಗಳು ಬಹು ಸಂಖ್ಯಾತರ ಮತಗಳ ದೃವೀಕರಣಕ್ಕೆ ಬಾಬರಿ ಮಸೀದಿಯ ಧ್ವಂಸದ ನಂತರ ಜ್ಞಾನ ವ್ಯಾಪಿ ಮಸೀದಿ ಪ್ರಕರಣವನ್ನು ಮುನ್ನಲೆಗೆ ತಂದಿದ್ದಾರೆ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಮುನಾವರ ಪಾಷಾ , ಸತ್ತಾರ್ ಬೇಗ್,  ಇಕ್ಬಾಲ್ ಶೆಟ್, ಮೊದಲಾದ ಮುಸ್ಲಿಂ ಮುಖಂಡರು ಪಾಲ್ಗೊಂಡಿದ್ದರು.

click me!