ಶಿವಮೊಗ್ಗ: ತಂಗಿಯನ್ನು ಪ್ರೀತಿಸಿದ ಭಾವನನ್ನೇ ಇನ್ನೋವಾ ಕಾರಿನಲ್ಲಿ ಸುಟ್ಟು ಹಾಕಿದ ಭಾವಮೈದುನರು!

By Sathish Kumar KH  |  First Published Mar 16, 2024, 1:13 PM IST

ತಂಗಿಯನ್ನು ಪ್ರೇತಿ ಮಾಡಿದ ಯುವಕನನ್ನು ಸ್ವತಃ ಸಂಬಂಧಿಕರೇ ಇನ್ನೋವಾ ಕಾರಿನಲ್ಲಿ ಕರೆದೊಯ್ದು, ಬೆಂಕಿ ಹಚ್ಚಿ ಕೊಮೆ ಮಾಡಿರುವ ದುರ್ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 


ಶಿವಮೊಗ್ಗ (ಮಾ.16): ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಯುವಕನನ್ನು ಸಂಬಂಧಿಕರೇ ಇನ್ನೋವಾ ಕಾರಿನಲ್ಲಿ ಕರೆದೊಯ್ದು, ಕಾರಿನ ಸಮೇತವೇ ಸುಟ್ಟು ಹಾಕಿರುವ ಸುಟ್ಟು ಕೊಂದು ಹಾಕಿರುವ ದುರ್ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪ ಯುವಕ ವೀರೇಶ್ ಎಂಬಾತ ಕೊಲೆಯಾದ ಯುವಕವಾಗಿದ್ದಾನೆ. ಶಿಕಾರಿಪುರ ತಾಲೂಕಿನ ತೊಗರ್ಸಿ ಬಳಿ ಇನ್ನೋವಾ ಕಾರಿನಲ್ಲಿ ಕೂಡಿಹಾಕಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಇನ್ನು ಯುವತಿಯನ್ನು ನೋಡಲು ಯುವಕ ಬಂದಿದ್ದ ಇನೋವಾ ಕಾರಿನಲ್ಲೇ ಕೊಲೆಗೈದು ಸುಟ್ಟು ಹಾಕಿದ್ದು, ಯುವಕನ ದೇಹ ಸಂಪೂರ್ಣ ಸುಟ್ಟು ಕರಕಲಾಗಿ ಹೋಗಿದೆ. ಮೃತಪಟ್ಟ ಯುವಕನ ಮನೆಯವರು ನಾಪತ್ತೆ ಪ್ರಕರಣದ ದಾಖಲಿಸಿದ ನಂತರ ಈ ಪ್ರಕರಣ ಬಯಲಿಗೆ ಬಂದಿದೆ.

Tap to resize

Latest Videos

undefined

ಕೊಲೆಯ ಪ್ರಕರಣವು ಪ್ರೇಮ ಪ್ರಕರಣವೆಂದು ಹೇಳಲಾಗುತ್ತಿದೆ. ಶಿಕಾರಿಪುರ ತಾಲೂಕಿನ ಯುವತಿ ಅಂಕಿತ ಎಂಬವರನ್ನು ವೀರೇಶ್ ಪ್ರೀತಿಸುತ್ತಿದ್ದನು. ಇಬ್ಬರು ಒಂದೇ ಜಾತಿಯವರಾಗಿದ್ದು ಹತ್ತಿರದ ಸಂಬಂಧಿಕರು ಆಗಿದ್ದರು. ಯುವತಿ ಶಿವಮೊಗ್ಗದ ಪೇಯಿಂಗ್ ಗೆಸ್ಟ್(ಪಿಜಿ)ಯಲ್ಲಿದ್ದು ಫಾರ್ಮಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ವಿಚಾರ ಮನೆಯವರಿಗೆ ಗೊತ್ತಾಗಿದ್ದು, ವಿರೋಧ ಮಾಡಿದ್ದಾರೆ. ಆದರೂ, ವಿರೇಶ್ ಮತ್ತು ಅಂಕಿತಾ ಸಂಬಂಧಿಕರಲ್ಲವಾ ಮೊದಲು, ವಿರೋಧಿಸಿ ಮದುವೆಯಾದ ನಂತರ ಒಪ್ಪಿಕೊಳ್ಳುತ್ತಾರೆಂದು ಭಾವಿಸಿದ್ದರು.

ಬೇರೊಬ್ಬನ ಜೊತೆ ಗರ್ಲ್‌ಫ್ರೆಂಡ್‌ ಮದುವೆ, ಆಕೆಯ ಕೈಯನ್ನೇ ಕತ್ತರಿಸಿದ ಪಾಗಲ್‌ ಪ್ರೇಮಿ!

ಆದರೆ, ಯುವತಿ ಅಂಕಿತಾಳ ಸಹೋದರ ಪ್ರವೀಣ್ ಹಾಗೂ ಆತನ ಸಹಚರರು ನಿನ್ನೆ ಶಿವಮೊಗ್ಗದ ಗಾಡಿ ಕೊಪ್ಪದಲ್ಲಿರುವ ವೀರೇಶ್ ಮನೆಗೆ ಬಂದಿದ್ದರು. ನಂತರ ಯುವತಿಯನ್ನು ಮದುವೆ ಮದುವೆ ಮಾಡಿಕೊಡುವುದಾಗಿ ತಿಳಿಸಿ ಭರವಸೆ ನೀಡಿದ್ದರು. ಇದಾದ ನಂತರ, ತನ್ನ ತಂಗಿ ಇನ್ನೂ ಓದುವ ವಿದ್ಯಾರ್ಥಿನಿಯಾಗಿದ್ದಾಳೆ. ಹಾಗಾಗಿ, ನೀನು ಮತ್ತು ಅಂಕಿತಾ ಜೊತೆಯಲ್ಲಿರುವ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಿಬಿಡು. ಒಂದು ವೇಳೆ ಎಲ್ಲಾದರೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಕಾಲೇಜಿನಲ್ಲಿ ಅವಳ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿ, ವೀರೇಶ್‌ನ ಮೊಬೈಲ್‌ನಲ್ಲಿದ್ದ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಹೇಳಿದ್ದರು.

ತಾನು ಪ್ರೀತಿ ಮಾಡುವ ಯುವತಿ ಅಂಕಿತಾಳನ್ನು ಮದುವೆ ಮಾಡಿಕೊಡುವುದಾಗಿ ಅವರ ಮನೆಯವರೇ ಹೇಳಿದ್ದನ್ನು ನಂಬಿದ ವೀರೇಶ್, ತನ್ನ ಪ್ರೇಯಸಿಯೊಂದಿಗೆ ಇದ್ದ ಎಲ್ಲ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಿದ್ದನು. ನಂತರ, ತಡರಾತ್ರಿ 10 ಗಂಟೆಗೆ ಅಂಕಿತಾ ಅಳುತ್ತಿದ್ದಾಳೆ, ನಿನ್ನನ್ನು ನೋಡಬೇಕು ಎನ್ನುತ್ತಿದ್ದಾಳೆ. ಈಗಲೇ ನೀನು ಮನೆಗೆ ಬಾ ಎಂದು ಕರೆ ಮಾಡಿದ್ದಾರೆ. ಇನ್ನು ಯುವತಿ ಮನೆಯವರು ಕರೆದಿದ್ದರಿಂದ ಯುವಕ ವೀರೇಶ್ ಇನ್ನೋವಾ ಕಾರನ್ನು ತೆಗೆದುಕೊಂಡು ತೊಗರ್ಸಿ ಬಳಿ ಹೋಗಿದ್ದಾನೆ. ಆಗ ಯುವಕ ವೀರೇಶನನ್ನು ರಸ್ತೆಯ ಬದಿಗೆ ಕರೆದೊಯ್ದು ಕಾರಿನಲ್ಲಿಯೇ ಕೂರಿಸಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.

ಒಂದೂವರೆ ತಿಂಗಳ ಹಿಂದೆ ತಾಯಿ-ಮಗಳು ಭೇಟಿಗೆ ಬಂದಿದ್ದರು: ಲೈಂಗಿಕ ಕಿರುಕುಳ ಆರೋಪಕ್ಕೆ ಬಿಎಸ್‌ವೈ ಪ್ರತಿಕ್ರಿಯೆ

ಇನ್ನು ವೀರೇಶ್ ತಾಯಿ ಮಹದೇವಿ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಕೊನೆಯದಾಗಿ ಮಗ ವೀರೇಶ್ ಯುವತಿಯ ಸಂಬಂಧಿಕರು ಕರೆ ಮಾಡಿದ್ದರಿಂದ ಅವರ ಮನೆಗೆ ಹೋಗುವುದಾಗಿ ಕಾರಿನಲ್ಲಿ ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ತೊಗರ್ಸಿ ಬಳಿ ಕಾರು ಸುಟ್ಟಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆ, ವಿರೇಶ್‌ನ ತಾಯಿಯನ್ನು ಕರೆಸಿ ಕಾರಿನ ನಂಬರ್ ಪ್ಲೇಟ್ ತೋರಿಸಿ ಕೇಳಿದ್ದಾರೆ. ಆಗ, ಇದು ತನ್ನ ಮಗ ತೆಗೆದುಕೊಂಡು ಹೋಗಿದ್ದ ಕಾರು ಎಂದು ಗುರುತಿಸಿದ್ದಾರೆ. ಇನ್ನು ಕಾರಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಯುವಕ ವಿರೇಶನದ್ದೇ ಎಂದು ಗುರುತಿಸಲಾಗಿದೆ. ಇನ್ನು ಪ್ರಕರಣವನ್ನು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

click me!