ಏ.30 ರೊಳಗೆ ಆಸ್ತಿ ತೆರಿಗೆ ಪಾವತಿಸಿ, ಶೇ. 5 ರಿಯಾಯಿತಿ ಪಡೆಯಿರಿ

By Kannadaprabha News  |  First Published Mar 16, 2024, 11:10 AM IST

ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪರಿಷ್ಕರಿಸಿದ್ದು, ಅದರಂತೆ ಏ. 1 ರಿಂದ 30ರೊಳಗೆ ಪಾವತಿಸಿದ್ದಲ್ಲಿ ಶೇ. 5 ರಿಯಾಯಿತಿ ನೀಡಲಾಗುವುದು.


ಮೈಸೂರು :  ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪರಿಷ್ಕರಿಸಿದ್ದು, ಅದರಂತೆ ಏ. 1 ರಿಂದ 30ರೊಳಗೆ ಪಾವತಿಸಿದ್ದಲ್ಲಿ ಶೇ. 5 ರಿಯಾಯಿತಿ ನೀಡಲಾಗುವುದು.

ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ, ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯದ ನಿರ್ದೇಶನದಂತೆ ಮಾರುಕಟ್ಟೆ ಬೆಲೆಗಳಿಗೆ ಅನುಗುಣವಾಗಿ ತೆರಿಗೆ ಪರಿಷ್ಕರಿಸಲಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಡಾ.ಎನ್.ಎನ್. ಮಧು ತಿಳಿಸಿದ್ದಾರೆ.

Latest Videos

undefined

ಆಸ್ತಿ ತೆರಿಗೆ ಹೆಚ್ಚಳ

ಬೆಂಗಳೂರು (ಮಾ.13): ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ತಂದಿರುವ ಹೊಸ ಆಸ್ತಿ ತೆರಿಗೆ ವ್ಯವಸ್ಥೆಯಿಂದಾಗಿ ಬರುವ ಏಪ್ರಿಲ್‌ನಿಂದ ನಗರದ ಎಲ್ಲಾ ಮಾದರಿ ಆಸ್ತಿಗಳ ತೆರಿಗೆ ಪ್ರಮಾಣ ಕನಿಷ್ಠ ಶೇಕಡ 5.3ರಿಂದ ಗರಿಷ್ಠ ಶೇ.8.2ರವರೆಗೆ ಹೆಚ್ಚಳವಾಗಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೋಮವಾರ ವಿಧಾನಸೌಧದಲ್ಲಿ ಈ ಹೊಸ ತೆರಿಗೆ ಪದ್ಧತಿ ಬಗ್ಗೆ ಮಾಹಿತಿ ನೀಡಿದರು. ಕಳೆದ ಬಾರಿ 2016ರಲ್ಲಿ ಆಸ್ತಿ ತೆರಿಗೆ ದರಗಳನ್ನು ಪರಿಷ್ಕರಣೆ ಮಾಡಲಾಗಿತ್ತು. ಅಂದರೆ ಎಂಟು ವರ್ಷಗಳಿಂದ ತೆರಿಗೆ ಹೆಚ್ಚಳ ಮಾಡಿರಲಿಲ್ಲ. ಆಗ ವಸತಿ ಆಸ್ತಿಗಳಿಗೆ ಶೇ.20ರಷ್ಟು, ವಸತಿಯೇತರ ಉದ್ದೇಶದ ಆಸ್ತಿಗಳಿಗೆ ಶೇ.25ರಷ್ಟು ಏರಿಕೆಯಾಗಿತ್ತು. 

ಈಗ ನಾವು ವಾರ್ಷಿಕ ತೆರಿಗೆ ಹೆಚ್ಚಳಕ್ಕೆ ಇದ್ದ ಮಿತಿಯನ್ನು ಶೇ.10ಕ್ಕೆ ನಿಗದಿಪಡಿಸಿದ್ದೇವೆ. ಬೆಂಗಳೂರಿನಲ್ಲಿ 18 ಲಕ್ಷ ಆಸ್ತಿ ಮಾಲಿಕರು ತೆರಿಗೆ ವ್ಯಾಪ್ತಿಯಲ್ಲಿ ಒಳಪಡುತ್ತಿಲ್ಲ. ಇವರೆಲ್ಲರೂ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯೊಳಗೆ ಬರಬೇಕು ಎಂದರು. ನಗರದ ಆಸ್ತಿಗಳನ್ನು ತೆರಿಗೆ ಕಾರಣಕ್ಕೆ ಇದುವರೆಗೆ 18 ಮಾದರಿಗಳಲ್ಲಿ ಗುರುತಿಸಲಾಗಿತ್ತು. ಆದರೆ, ಈಗಿನ ಹೊಸತೆರಿಗೆ ವ್ಯವಸ್ಥೆಯಲ್ಲಿ ವಸತಿ (ವೈಯಕ್ತಿಕ ವಾಸ ಮತ್ತು ಬಾಡಿಗೆ), ವಸತಿ ಯೇತರ, ವಾಣಿಜ್ಯ, ಕೈಗಾರಿಕೆ, ತಾರಾ ಹೋಟೆಲ್‌, ಖಾಲಿ ನಿವೇಶನ ಮತ್ತು ತೆರಿಗೆ ವಿನಾಯಿತಿ ಎಂಬ 6 ವರ್ಗೀಕರಣ ಮಾಡಲಾಗಿದೆ. ಈ ಆರೂ ಮಾದರಿ ಆಸ್ತಿಗಳ ತೆರಿಗೆಯನ್ನು ಪ್ರತೀ ವರ್ಷ ಶೇ.10ರ ವರೆಗೆ ಹೆಚ್ಚಿಸಲು ಹೊಸ ವ್ಯವಸ್ಥೆಯಲ್ಲಿ ಅವಕಾಶವಿದೆ. 

ಆದರೆ, ಈಗ ಆಗಲಿರುವ ತೆರಿಗೆ ಹೆಚ್ಚಳ ಕನಿಷ್ಠ ಶೇ.5.3ಯಿಂದ ಗರಿಷ್ಠ 8.2ವರೆಗೆ ಹೆಚ್ಚಳವಾಗಲಿದೆ. ಒಟ್ಟಾರೆ ಸರಾಸರಿ ಬಿಬಿಎಂಪಿಗೆ ಶೇ.6.5ರಷ್ಟು ಆಸ್ತಿ ತೆರಿಗೆ ಹೆಚ್ಚಳವಾಗಲಿದೆ ಎಂದು ಹೇಳಿದರು. ಹೊಸ ಆಸ್ತಿ ತೆರಿಗೆ ವ್ಯವಸ್ಥೆಯ ಗುರಿಯು ತೆರಿಗೆ ಹೊರೆಯನ್ನು ಹೆಚ್ಚಿಸುವುದಲ್ಲ. ಆಸ್ತಿ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸುವುದು ಮತ್ತು ತರ್ಕಬದ್ಧಗೊಳಿಸುವುದು. 2016ರ ಆಸ್ತಿ ತೆರಿಗೆ ಹೆಚ್ಚಳಕ್ಕೆ ಹೋಲಿಸಿದರೆ ಈಗ ಕೇವಲ ಶೇ.6.5ರಷ್ಟು ಮಾತ್ರ ಹೆಚ್ಚಳವಾಗಿದೆ. ಅಂದರೆ ವಾರ್ಷಿಕ ಶೇ.1ಕ್ಕಿಂತ ಕಡಿಮೆ ಹೆಚ್ಚಳವಾದಂತಾಗಿದೆ ಎಂದು ತಿಳಿಸಿದರು.

ಬೇಡವೆಂದರೂ ಕರೆತಂದು ಈಗ ಟಿಕೆಟ್‌ ಕೊಡದಿದ್ರೆ ಅಪಮಾನ: ಡಿ.ವಿ.ಸದಾನಂದಗೌಡ

click me!