Shivamogga: 27ಕ್ಕೆ ಏರ್‌​ಪೋರ್ಟ್ ಉದ್ಘಾ​ಟ​ನೆ: 1 ಲಕ್ಷ ಆಸನಗಳ ವ್ಯವಸ್ಥೆ- ಡಿಸಿ

By Kannadaprabha News  |  First Published Feb 25, 2023, 4:44 AM IST
  • 27ಕ್ಕೆ ಏರ್‌​ಏರ್‌​ಪೋರ್ಟ್ ಉದ್ಘಾ​ಟ​ನೆ: 1 ಲಕ್ಷ ಆಸನಗಳ ವ್ಯವಸ್ಥೆ
  •  ಕಾರ್ಯಕ್ರಮದ ವೀಕ್ಷಣೆಗೆ 4 ಕಡೆ ವಿಶಾಲವಾದ ಪ್ರೊಜೆಕ್ಟರ್‌ ವ್ಯವಸ್ಥೆ
  • 2 ಕಡೆ ಊಟದ ವ್ಯವಸ್ಥೆ, ಒಂದೊಂದು ಕಡೆ 100 ಕೌಂಟರ್‌
  • - ಬೆಳಗ್ಗೆ 10 ಗಂಟೆ​ಯೊ​ಳಗೆ ಜನರು ಆವರಣದೊಳಗೆ ಬರಬೇಕು, ನಿಗ​ದಿತ ಸ್ಥಳ​ಗಳಲ್ಲೇ ಪಾರ್ಕಿಂಗ್‌ ಮಾಡ​ಬೇ​ಕು

ಶಿವಮೊಗ್ಗ (ಫೆ.25) : ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದ್ದು, ಫೆ.27ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಅಗತ್ಯವಾದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವ​ರು, ವಿಮಾನ ನಿಲ್ದಾಣ ಉದ್ಘಾಟನೆ(kuvempu airport inauguratin) ಕಾರ್ಯಕ್ರಮಕ್ಕೆ 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 2 ಕಡೆ ಊಟದ ವ್ಯವಸ್ಥೆ ಇದ್ದು ಒಂದೊಂದು ಕಡೆ 100 ಕೌಂಟರ್‌ಗಳನ್ನು ತೆರೆಯಲಾಗುವುದು. ಕಾರ್ಯಕ್ರಮದ ವೀಕ್ಷಣೆಗೆ 4 ಕಡೆ ವಿಶಾಲವಾದ ಪ್ರೊಜೆಕ್ಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳೊಂದಿಗೆ ಸೂಕ್ತ ಪೊಲೀಸ್‌ ಬಂದೋಬಸ್‌್ತ ಇರಲಿದೆ ಎಂದು ಮಾಹಿತಿ ನೀಡಿದರು.

Tap to resize

Latest Videos

Karnataka Election 2023: ಅಮಿತ್‌ ಶಾ ಭಾಷಣ 8ನೇ ಅದ್ಭುತ: ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್‌(District Superintendent of Police G.K. Mithunkumar) ಮಾತನಾಡಿ, ಕಾರ್ಯಕ್ರಮದಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌್ತ ಏರ್ಪಡಿಸಲಾಗಿದೆ. ಎಲ್ಲ ಕಡೆ ಸಿಸಿ ಕ್ಯಾಮೆಗಳನ್ನು ಅಳವಡಿಸಲಾಗಿದೆ. ಎಲ್ಲ ಸಾರ್ವಜನಿಕರು ಬೆಳಗ್ಗೆ 10ರೊಳಗೆ ಕಾರ್ಯಕ್ರಮದ ಆವರಣದೊಳಗೆ ಬರಬೇಕು. ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇದ್ದು, ನಿಗದಿಪಡಿಸಿದ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು ಎಂದು ಸೂಚನೆ ನೀಡಿದರು.

ಯಾರೂ ಕೂಡ ಕಪ್ಪು ಬಣ್ಣದ ಬಟ್ಟೆ, ಕರ್ಚೀಫ್‌ಗಳನ್ನು ಧರಿಸಿ ಬರುವಂತಿಲ್ಲ. ನೀರಿನ ಬಾಟಲ…, ಹ್ಯಾಂಡ್‌ ಬ್ಯಾಗ್‌ ಮತ್ತು ಕಪ್ಪು ಕರ್ಚೀಫ್‌ಗಳನ್ನು ತರುವಂತಿಲ್ಲ. ಮೊಬೈಲ್‌ ಮತ್ತು ಪರ್ಸ್‌ ಮಾತ್ರ ಅವಕಾಶ ಇರುತ್ತದೆ. ಎರಡು ಹಂತದ ತಪಾಸಣೆ ಇರುತ್ತದೆ ಎಂದು ತಿಳಿಸಿದರು.

ಶೂನ್ಯ ಸಂಚಾರ, ಪರ್ಯಾಯ ಮಾರ್ಗ ಅಧಿಸೂಚನೆ

ಶಿವಮೊಗ್ಗ: ತಾಲೂ​ಕಿ​ನ ಸೋಗಾನೆಯ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮ ಫೆ.27ರಂದು ಇರುವ ಹಿನ್ನೆಲೆ ಸುಗಮ ಸಂಚಾರದ ದೃಷ್ಟಿಯಿಂದ ಶೂನ್ಯ ಸಂಚಾರ ರಸ್ತೆ ಮಾರ್ಗ ಮತ್ತು ವಾಹನ ಸಂಚಾರಕ್ಕೆ ಬದಲಿ ಮಾರ್ಗಗಳ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಹೊರಡಿಸಿದ್ದಾರೆ.

ಶೂನ್ಯ ಸಂಚಾರ ರಸ್ತೆ ಮಾರ್ಗ:

ಫೆ.26 ಮತ್ತು 27ರವರೆಗೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಎಂ.ಆರ್‌.ಎಸ್‌. ಸರ್ಕಲ್‌ನಿಂದ ಎನ್‌.ಆರ್‌.ಪುರ ರಸ್ತೆ ಲಕ್ಕಿನಕೊಪ್ಪ ಸರ್ಕಲ್‌ವರೆಗೆ, ಮತ್ತೂರು- ಮಂಡೇನಕೊಪ್ಪ- ಸೋಗಾನೆ ವಿಮಾನ ನಿಲ್ದಾಣದವರೆಗೆ ಶೂನ್ಯ ಸಂಚಾರ ರಸ್ತೆ ಎಂದು ಅಧಿಸೂಚಿಸಲಾಗಿದೆ.

ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ:

ಎನ್‌.ಆರ್‌.ಪುರದಿಂದ- ಭದ್ರಾವತಿ ಕಡೆಗೆ ಹೋಗುವ ವಾಹನಗಳು ಉಂಬ್ಳೆಬೈಲ…- ಹುಣಸೆಕಟ್ಟೆ- ಜಂಕ್ಷನ್‌ ಮೂಲಕ ಭದ್ರಾವತಿಗೆ ಹೋಗುವುದು. ಶಿಕಾರಿಪುರ-ಹೊನ್ನಾಳಿ- ದಾವಣಗೆರೆ ಕಡೆಯಿಂದ ಎನ್‌.ಆರ್‌.ಪುರಕ್ಕೆ ಹೋಗುವ ವಾಹನಗಳು ಶಿವಮೊಗ್ಗ ನಗರಕ್ಕೆ ಬಂದು ತೀರ್ಥಹಳ್ಳಿ ರಸ್ತೆ (ಎನ್‌.ಟಿ.ರಸ್ತೆ) ಮೂಲಕ ಎನ್‌.ಆರ್‌.ಪುರಕ್ಕೆ ಹೋಗುವುದು.

ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ನ್ಯೂ ಮಂಡ್ಲಿ ಸರ್ಕಲ…- ಗೋಪಾಳ ಸರ್ಕಲ…- ಆಲ್ಕೊಳ ಸರ್ಕಲ್‌ ಮಾರ್ಗವಾಗಿ ಸಾಗರ ರಸ್ತೆಗೆ ಬಂದು ಸೇರುವುದು.

ಸಾಗರ ರಸ್ತೆ ಕಡೆಯಿಂದ ತೀರ್ಥಹಳ್ಳಿ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ಆಲ್ಕೊಳ ಸರ್ಕಲ…- ಗೋಪಾಳ ಸರ್ಕಲ…- ನ್ಯೂ ಮಂಡ್ಲಿ ಸರ್ಕಲ್‌ ಮಾರ್ಗವಾಗಿ ತೀರ್ಥಹಳ್ಳಿ ರಸ್ತೆಗೆ ಸೇರುವುದು.

ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಮಾರ್ಗ:

ಕಾರ್ಯಕ್ರಮಕ್ಕೆ ಆಗಮಿಸುವ ವಿವಿಐಪಿ ಪಾಸ್‌(VVIP Pass) ಹೊಂದಿರುವ ಗಣ್ಯರು ಶಿವಮೊಗ್ಗ ನಗರದಿಂದ ಬೈಪಾಸ್‌- ಊರಗಡೂರು ಸರ್ಕಲ…- ಸೂಳೆಬೈಲು- ಮತ್ತೂರು ರಸ್ತೆ ಎಡಭಾಗಕ್ಕೆ ತಿರುವು ಪಡೆದುಕೊಂಡು ಮಂಡೇನಕೊಪ್ಪ ಮುಖಾಂತರ ಸೋಗಾನೆ ವಿಮಾನ ನಿಲ್ದಾಣಕ್ಕೆ ತಲುಪುವುದು.

ತೀರ್ಥಹಳ್ಳಿ ಕೊಪ್ಪ, ಶೃಂಗೇರಿ, ಎನ್‌.ಆರ್‌.ಪುರ ಭಾಗದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ತೀರ್ಥಹಳ್ಳಿ ರಸ್ತೆ- ಮುಡುಬ ಬಲಕ್ಕೆ ತಿರುಗಿ ಶಂಕರಪುರ- ಉಂಬ್ಳೇಬೈಲು ಮುಖಾಂತರ ಲಕ್ಕಿನಕೊಪ್ಪ ಸರ್ಕಲ್‌ಗೆ ಬಂದು ಸೇರುವುದರಿಂದ ನಂತರ ಲಕ್ಕಿನಕೊಪ್ಪ ಮತ್ತು ಸೋಗಾನೆ ಏರ್‌ಪೋ​ರ್ಚ್‌ ನಡುವೆ ಗುರುತಿಸಿದ ಪಾರ್ಕಿಂಗ್‌ ಸ್ಥಳದಲ್ಲಿ ಪಾರ್ಕಿಂಗ್‌ ಮಾಡುವುದು.

ಸಾಗರ, ಶಿಕಾರಿಪುರ, ಸೊರಬ, ಹೊಸನಗರದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಶಿವಮೊಗ್ಗ ನಗರದಿಂದ ಅಶೋಕ ಸರ್ಕಲ…- ಬಿ.ಎಚ್‌. ರಸ್ತೆ- ಎ.ಎ. ಸರ್ಕಲ…- ಶಂಕರಮಠ ಸರ್ಕಲ…- ಹೊಳೆಹೊನ್ನೂರು ಸರ್ಕಲ್‌- ಎಂ.ಆರ್‌.ಎಸ್‌. ಸರ್ಕಲ್‌ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನೆ ಏರ್‌ಪೋರ್ಚ್‌ ನಡುವೆ ಗುರುತಿಸಿದ ಪಾರ್ಕಿಂಗ್‌ ಸ್ಥಳದಲ್ಲಿ ಪಾರ್ಕಿಂಗ್‌ ಮಾಡುವುದು.

ಶಿಕಾರಿಪುರ, ಹೊನ್ನಾಳಿ, ದಾವಣಗೆರೆ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಎಂ.ಆರ್‌.ಎಸ್‌ ಸರ್ಕಲ್‌ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನೆ ಏರ್‌ಪೋರ್ಚ್‌ ನಡುವೆ ಗುರುತಿಸಿದ ಪಾರ್ಕಿಂಗ್‌ ಸ್ಥಳದಲ್ಲಿ ಪಾರ್ಕಿಂಗ್‌ ಮಾಡುವುದು.

ಶಿವಮೊಗ್ಗ ನಗರದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಎಂಆರ್‌ಎಸ್‌ ಸರ್ಕಲ್‌ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನೆ ಏರ್‌ಪೋರ್ಚ್‌ ನಡುವೆ ಗುರುತಿಸಿದ ಪಾರ್ಕಿಂಗ್‌ ಸ್ಥಳದಲ್ಲಿ ಪಾರ್ಕಿಂಗ್‌ ಮಾಡುವುದು.

ತರೀಕೆರೆ, ಭದ್ರಾವತಿ, ಕಡೂರು, ಚಿಕ್ಕಮಗಳೂರು ಭಾಗಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ಭದ್ರಾವತಿ ನಗರದ ಕೃಷ್ಣಪ್ಪ ನಗರದ ಕೃಷ್ಣಪ್ಪ ಸರ್ಕಲ್‌ನಿಂದ ಎಡಕ್ಕೆ ತಿರುಗಿ- ಹಿರಿಯೂರು ಸರ್ಕಲ…- ತಾರೀಕಟ್ಟೆಸರ್ಕಲ…- ಎಚ್‌.ಕೆ.ಜಂಕ್ಷನ್‌- ಲಕ್ಕಿನಕೊಪ್ಪ ಸರ್ಕಲ್‌ಗೆ ಬಂದು ಸೇರುವುದು. ಅನಂತರ ಲಕ್ಕಿನಕೊಪ್ಪ ಮತ್ತು ಸೋಗಾನೆ ಏರ್‌ಪೋರ್ಚ್‌ ನಡುವಿನ ಗುರುತಿಸಿದ ಪಾರ್ಕಿಂಗ್‌ ಸ್ಥಳದಲ್ಲಿ ಪಾರ್ಕಿಂಗ್‌ ಮಾಡುವುದು.

ಕಟ್ಟಡಗಳ ಲೋಕಾರ್ಪಣೆ, ಕಾಮಗಾರಿಗೆ ಶಂಕು

ಒಟ್ಟು 775 ಎಕರೆ ವಿಸ್ತೀರ್ಣದಲ್ಲಿ .449.22 ಕೋಟಿ ವೆಚ್ಚದಲ್ಲಿ 3.2 ಕಿ.ಮೀ. ರನ್‌ ವೇ ಹಾಗೂ 4320 ಚದರ ಅಡಿ ವಿಸ್ತೀರ್ಣದ ಸುಸಜ್ಜಿತ ಪ್ಯಾಸೆಂಜರ್‌ ಟರ್ಮಿನಲ…, ಏರ್‌ ಟ್ರಾಫಿಕಿಂಗ್‌ ಸೆಂಟರ್‌ ಇತರೆ ಸೌಲಭ್ಯಗಳೊಂದಿಗೆ ನಿರ್ಮಿಸಿರುವ ವಿಮಾನ ನಿಲ್ದಾಣ.

.995 ಕೋಟಿ ವೆಚ್ಚದಲ್ಲಿ 103 ಕಿ.ಮೀ. ಉದ್ದದ ಶಿವಮೊಗ್ಗ- ಶಿಕಾರಿಪುರ- ರಾಣೇಬೆನ್ನೂರು ರೈಲು ಮಾರ್ಗದ ಶಂಕುಸ್ಥಾಪನೆ. .97.18 ಕೋಟಿ ವೆಚ್ಚದಲ್ಲಿ ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್‌ ಡಿಪೋ, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ .862 ಕೋಟಿ ಮೊತ್ತದ ಕಾಮಗಾರಿ ಶಂಕುಸ್ಥಾಪನೆ, .91.50 ಕೋಟಿ ಮೊತ್ತದ ಕಾಮಗಾರಿ ಲೋಕಾರ್ಪಣೆ.

.66.44 ಕೋಟಿ ವೆಚ್ಚದಲ್ಲಿ .14.77 ಕಿಮೀ ಉದ್ದದ ಶಿಕಾರಿಪುರ ಬೈಪಾಸ್‌ ನಿರ್ಮಾಣ, .96.20 ಕೋಟಿ ವೆಚ್ಚ​ದ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಮೇಗರವಳ್ಳಿಯಿಂದ ಆಗುಂಬೆವರೆಗೆ 17.77 ಕಿ.ಮೀ ದ್ವಿಪಥ ರಸ್ತೆ ಅಗಲೀಕರಣ ಕಾಮಗಾರಿ, .56.56 ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಬಳಿ 1.29 ಕಿ.ಮೀ ರಸ್ತೆ ನಿರ್ಮಾಣ ಮತ್ತು ತಿರುವಿನ ಅಭಿವೃದ್ಧಿ.

ಶಿವಮೊಗ್ಗ ಏರ್‌ಪೋರ್ಟ್ ಉದ್ಘಾಟನೆ ಹಿನ್ನೆಲೆ; ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ಒಟ್ಟು .896.16 ಕೋಟಿ ವೆಚ್ಚದಲ್ಲಿ ಸ್ಮಾರ್ಚ್‌ಸಿಟಿ ಯೋಜನೆಯಡಿ ನಿರ್ಮಾಣಗೊಂಡಿರುವ 44 ಯೋಜನೆಗಳ ಕಾಮಗಾರಿಗಳ ಲೋಕಾರ್ಪಣೆ, ಶಿಮುಲ್‌ ಶಿವಮೊಗ್ಗ ಕೇಂದ್ರ ಡೇರಿ ಆವರಣದಲ್ಲಿ .45 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಆಗಿರುವ 2 ಲಕ್ಷ ಲೀಟರ್‌ ಸಾಮರ್ಥ್ಯದ ಹಾಲು, ಮೊಸಲು ಮತ್ತು ಮಜ್ಜಿಗೆ ಪ್ಯಾಕಿಂಗ್‌ ಘಟಕ ಕಟ್ಟಡ ಉದ್ಘಾಟನೆ ಹಾಗೂ ನಗರದ ಎಪಿಎಂಸಿ ಆವರಣದಲ್ಲಿ .8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಾಮ್ಕೋಸ್‌ನ 4 ಅಂತಸ್ತುಗಳ ಆಡಳಿತ ಕಚೇರಿ ಕಟ್ಟಡದ ಉದ್ಘಾಟನೆಯನ್ನು ಪ್ರಧಾನಿ ಮೋದಿ ನೆರವೇರಿಸುವರು ಎಂದು ಮಾಹಿತಿ ನೀಡಿದರು.

click me!