ಶಿವಮೊಗ್ಗ ಆದಿಚುಂಚನಗಿರಿ ಕಾಲೇಜಿನ ವಿದ್ಯಾರ್ಥಿನಿ ಕಟ್ಟಡದಿಂದ ಬಿದ್ದು ಸಾವು: ಪೋಷಕರಿಂದ ಪ್ರತಿಭಟನೆ

By Sathish Kumar KH  |  First Published Dec 5, 2023, 7:31 PM IST

ಶಿವಮೊಗ್ಗ ನಗರದ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯ ಪಿಯು ಕಾಲೇಜಿನ ವಿದ್ಯಾರ್ಥಿನಿ ಪರೀಕ್ಷೆ ಬರೆಯುವಾಗಲೇ ಕೋಣೆಯಿಂದ ಹೊರಬಂದು ಕಟ್ಟಡದಿಂದ ಹಾರಿ ಸಾವಿಗೀಡಾಗಿದ್ದಾಳೆ.


ಶಿವಮೊಗ್ಗ (ಡಿ.05): ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನ ಕಟ್ಟಡದಿಂದ ಬಿದ್ದು ಪಿಯು ವಿದ್ಯಾರ್ಥಿನಿ ದಾರುಣ ಸಾವನ್ನಪ್ಪಿರುವ ದುರ್ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಆದಿಚುಂಚನಗಿರಿ ಕಾಲೇಜಿನಲ್ಲಿ ಎಂದಿನಂತೆ ಮಂಗಳವಾರವೂ ತರಗತಿಗಳು ಆರಂಭವಾಗಿವೆ. ಆದರೆ, ಕೆಲವೇ ಕ್ಷಣಗಳಲ್ಲಿ ಕಾಲೇಜು ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ. ಮೃತ ವಿದ್ಯಾರ್ಥಿನಿ ದ್ವೀತಿಯ ಪಿಯು ಓದುತ್ತಿದ್ದ ಜಿ.ಒ.ಮೇಘಶ್ರೀ ಎನ್ನುವವಳಾಗಿದ್ದಾಳೆ. ಈಕೆ ದಾವಣಗೆರೆಯ ಚೆನ್ನಗಿರಿ ತಾಲೂಕಿನ ಚೆನ್ನಾಪುರ ಮೂಲದವಳಾಗಿದ್ದಳು. ಇದೇ ಕಾಲೇಜು ಹಾಸ್ಟೆಲ್‌ನಲ್ಲಿದ್ದು ಅಭ್ಯಾಸ ಮಾಡುತ್ತಿರುವ ಮೇಘಶ್ರೀ ಇಂದು ಕಾಲೇಜಿಗೆ ಬಯಾಲಜಿ ಪರೀಕ್ಷೆ ಬರೆಯಲು ಬಂದಿದ್ದಳು. ಆದರೆ, ಪರೀಕ್ಷೆ ನಡುವೆಯೇ ವಾಶ್ ರೂಂ ಹೋಗುವುದಾಗಿ ಹೇಳಿದ್ದಾಳೆ.

Latest Videos

undefined

ಅರ್ಜುನನ ಸಾವು ಅನ್ಯಾಯ, ಅಂತ್ಯಕ್ರಿಯೆಯಲ್ಲಾದ್ರೂ ನ್ಯಾಯ ಕೊಡಿಸಿ ಎಂದವರ ಮೇಲೆ ಲಾಠಿ ಬೀಸಿದ ಪೊಲೀಸರು

ಆಗ, ನಕಲು ಮಾಡುವುದರ ಮೇಲೆ ನಿಗಾವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಒಬ್ಬರು ಕಾಲೇಜು ಸಿಬ್ಬಂದಿಯನ್ನು ಆಕೆಯೊಂದಿಗೆ ಕಳುಹಿಸಿದೆ. ಆದರೆ, ಪರೀಕ್ಷಾ ಕೊಠಡಿಯಿಂದ ಹೊರಬಂದ ಮೇಘಶ್ರೀ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕಾಲೇಜು ಸಿಬ್ಬಂದಿ ಹೇಳಿದ್ದಾರೆ. ಇನ್ನು ತೀವ್ರ ಗಾಯಗೊಂಡಿದ್ದ ಮೇಘಶ್ರೀ ಆಂಬುಲೆನ್ಸ್ ಬರುವ ಮೊದಲೇ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ. ಇನ್ನು ಘಟನೆ ಕುರಿತು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಪ್ರಿಯಕರನ ಜೊತೆ ಸೇರಿ ಪತ್ನಿಯ ಜೂಟಾಟ, 'ಬಾಂಬ್‌' ಮೆಸೇಜ್‌ ಕಳಿಸಿ ಗಂಡನಿಗೆ ಕೊಟ್ಲು ಜೈಲೂಟ!

ಕಾಲೇಜು  ಕಟ್ಟಡದ ಮೇಲಿನಿಂದ ಬಿದ್ದು ಸಾವನ್ನಪ್ಪಿದ ವಿದ್ಯಾರ್ಥಿನಿಯ ಪೋಷಕರಿಂದ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಕಾಲೇಜಿನ ಮುಂದೆ ಪ್ರತಿಭಟನೆ ಆರಂಭಿಸಿದ್ದು, ಇದಕ್ಕೆ ಹಲವಿ ವಿದ್ಯಾರ್ಥಿಗಳ ಪೋಷಕರು ಕೂಡ ಕೈಜೋಡಿಸಿದ್ದಾರೆ. ಮೇಘಶ್ರೀ ಪೋಷಕರಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಲೇಜಿನ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವ ಸ್ಥೆ ಮಾಡಿದ್ದರು. ಸದ್ಯ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮೇಘಶ್ರೀ ಪೋಷಕರು ಮತ್ತು ಕಾಲೇಜಿನ ಆಡಳಿತ ಮಂಡಳಿ ಜೊತೆ ಮಾತುಕತೆ ಮಾಡಲಾಗಿದೆ.

click me!