8 ಕಾಲು, 3 ಕಿವಿಗಳಿರೋ ವಿಚಿತ್ರ ಆಡಿನ ಮರಿ ಜನನ; ಸೊರಬ ತಾಲೂಕಿನಲ್ಲಿ ಅಪರೂಪದ ಘಟನೆ

Published : Aug 06, 2026, 12:19 PM IST
Goat

ಸಾರಾಂಶ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉದ್ರಿ ವಡ್ಡಿಗೆರೆ ಗ್ರಾಮದಲ್ಲಿ ಎಂಟು ಕಾಲು, ಮೂರು ಕಿವಿ, ಎರಡು ಬಾಲ ಮತ್ತು ಎರಡು ನಾಲಿಗೆಗಳಿದ್ದ ವಿಚಿತ್ರ ಆಡಿನ ಮರಿಯೊಂದು ಜನಿಸಿದೆ. ಕಾಳಿಂಗಪ್ಪ ಭಾವಿಕಟ್ಟೇರ್ ಅವರ ಮನೆಯಲ್ಲಿ ಜನಿಸಿದ ಈ ಮರಿಯು, ಕೆಲ ಗಂಟೆಗಳ ಕಾಲ ಬದುಕುಳಿದು ನಂತರ ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಉದ್ರಿ ವಡ್ಡಿಗೆರೆ ಗ್ರಾಮದಲ್ಲಿ ವಿಚಿತ್ರವಾದ ಆಡಿನ ಮರಿಯೊಂದು ಜನಿಸಿದ್ದು, ಇದು ಗ್ರಾಮಸ್ಥರಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ಈ ಘಟನೆಯು ಗ್ರಾಮದ ಕಾಳಿಂಗಪ್ಪ ಭಾವಿಕಟ್ಟೇರ್ ಹಾಗೂ ಪಟ್ಟಮ್ಮ ದಂಪತಿಯ ಮನೆಯಲ್ಲಿ ನಡೆದಿದೆ. ಇವರು ಕೃಷಿ ಚಟುವಟಿಕೆಯೊಂದಿಗೆ ಕುರಿ ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ.

8 ಕಾಲು, ಮೂರು ಕಿವಿ, ಎರಡು ಬಾಲ

ಕಾಳಿಂಗಪ್ಪ ಭಾವಿಕಟ್ಟೇರ್ ಅವರರ ಮನೆಯ ಆಡು ಮರಿಗೆ ಜನ್ಮ ನೀಡುವಾಗ, ಆರಂಭದಲ್ಲಿ ಅವಳಿ ಮರಿಗಳು ಜನಿಸಬಹುದು ಎಂದು ಭಾವಿಸಲಾಗಿತ್ತು. ಆದರೆ, ಆಡು ಜನ್ಮ ನೀಡಿದ ಒಂದೇ ಮರಿಗೆ 8 ಕಾಲು, ಮೂರು ಕಿವಿ, ಎರಡು ಬಾಲ ಮತ್ತು ಎರಡು ನಾಲಿಗೆಗಳಿದ್ದವು.

ಈ ವಿಚಿತ್ರ ಆಡಿನ ಮರಿಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಕುತೂಹಲದಿಂದ ಆಗಮಿಸಿದ್ದರು. ನಿನ್ನೆ ಮಧ್ಯಾಹ್ನದ ಸಮಯದಲ್ಲಿ ಜನಿಸಿದ ಈ ವಿಚಿತ್ರ ಆಡಿನ ಮರಿ, ಅಚ್ಚರಿಯೆಂಬಂತೆ ಸಂಜೆಯವರೆಗೂ ಬದುಕುಳಿದಿತ್ತು. ನಂತರ ಸಾವನ್ನಪ್ಪಿದೆ.

ಇದನ್ನೂ ಓದಿ: 2 ತಲೆ, 4 ಕಣ್ಣಿನ ಹಲ್ಲಿ; ಮನುಷ್ಯರ ಉಗುರಿಗಿಂತಲೂ ಚಿಕ್ಕದು, 10 ವರ್ಷ ಬದುಕುತ್ತಾ?

ಇದನ್ನೂ ಓದಿ: ಹುಲಿ-ಸಿಂಹ ನೋಡಿದ್ರೂ ಹೆದರದ ಹೆಣ್ಮಕ್ಳು… ಗೋಡೆ ಮೇಲಿನ ಹಲ್ಲಿ ಕಂಡ್ರೆ ಹಿಂಗ್ಯಾಕೆ ಆಡ್ತಾರೆ?

PREV
Read more Articles on
click me!

Recommended Stories

'ರೇಣುಕಾಸ್ವಾಮಿ ಕೇಸ್‌ ಬಗ್ಗೆ ಎಲ್ಲಾ ಸತ್ಯ ಹೇಳ್ತಿನಿ' ದರ್ಶನ್ ಆಪ್ತ ಸ್ನೇಹಿತ 14ನೇ ಆರೋಪಿ ನ್ಯಾಯಾಲಯದಲ್ಲಿ ಅರ್ಜಿ!
ಯಲಹಂಕದಲ್ಲಿ ಹೃದಯ ವಿದ್ರಾವಕ ಘಟನೆ.. ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವತಿಯರು ಪತ್ತೆ