ಯಲಹಂಕದಲ್ಲಿ ಹೃದಯ ವಿದ್ರಾವಕ ಘಟನೆ.. ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವತಿಯರು ಪತ್ತೆ

Published : Aug 06, 2026, 11:02 AM IST
two girls died at yalahanka

ಸಾರಾಂಶ

ಬೆಂಗಳೂರಿನ ಯಲಹಂಕ ಬಳಿ ಮರವೊಂದಕ್ಕೆ ಇಬ್ಬರು ಯುವತಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೇಪಾಳ ಮೂಲದವರೆಂದು ಗುರುತಿಸಲಾದ ಯುವತಿಯರ ಈ ಅಸಹಜ ಸಾವಿನ ಕುರಿತು ಯಲಹಂಕ ಪೊಲೀಸರು ತನಿಖೆ ನಡೆಸುತ್ತಿದ್ದು, ಸಾವಿನ ನಿಖರ ಕಾರಣ ಇನ್ನೂ ನಿಗೂಢವಾಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಯಲಹಂಕ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಜಕ್ಕೂರು ಬಳಿಯ ಕೃಷ್ಣ ರೆಸ್ಟೋರೆಂಟ್ ಹತ್ತಿರವಿರುವ ಮರವೊಂದಕ್ಕೆ ಇಬ್ಬರು ಯುವತಿಯರು ಅಸಹಜ ಸ್ಥಿತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇಂದು ಬೆಳಗ್ಗೆ ಸಾರ್ವಜನಿಕರು ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮರವೊಂದಕ್ಕೆ ಇಬ್ಬರು ಯುವತಿಯರ ಮೃತದೇಹಗಳು ನೇತಾಡುತ್ತಿರುವುದು ಕಂಡುಬಂದಿದೆ. ಇದನ್ನು ಕಂಡು ಆತಂಕಕ್ಕೊಳಗಾದ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಂದೇ ಮರಕ್ಕೆ ಇಬ್ಬರು ಯುವತಿಯರು ಅಸಹಜ ಸ್ಥಿತಿಯಲ್ಲಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಮೃತರ ಗುರುತು ಪತ್ತೆ

ಮೃತ ಯುವತಿಯರನ್ನು ನೇಪಾಳ ಮೂಲದ ಸಿರ್ಜನಾ (22) ಹಾಗೂ ರಿತಾ (23) ಎಂದು ಗುರುತಿಸಲಾಗಿದೆ. ಇವರಿಬ್ಬರು ಅಸ್ಸಾಂ ಮೂಲದವರು ಎಂದು ಮೊದಲು ಶಂಕಿಸಲಾಗಿತ್ತಾದರೂ, ನಂತರ ಇಬ್ಬರು ನೇಪಾಳದವರು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯಕ್ಕೆ ಇವರಿಬ್ಬರು ಬೆಂಗಳೂರಿನಲ್ಲಿ ಏನು ಮಾಡುತ್ತಿದ್ದರು ಮತ್ತು ಎಲ್ಲಿ ವಾಸವಾಗಿದ್ದರು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ತನಿಖೆ ಕೈಗೆತ್ತಿಕೊಂಡ ಯಲಹಂಕ ಪೊಲೀಸರು

ಘಟನೆ ತಿಳಿಯುತ್ತಿದ್ದಂತೆಯೇ ಯಲಹಂಕ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿಯರ ಸಾವಿಗೆ ನಿಖರವಾದ ಕಾರಣ ಏನು ಎಂಬುದು ಸದ್ಯಕ್ಕೆ ನಿಗೂಢವಾಗಿದ್ದು, ಪೊಲೀಸರು ಮೃತರ ಸಂಬಂಧಿಕರಿಗೆ ಮಾಹಿತಿ ರವಾನಿಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿದೆಯೇ ಅಥವಾ ಬೇರೆನಾದರೂ ಸುಳಿವು ಲಭ್ಯವಾಗಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಸದ್ಯಕ್ಕೆ ಯಲಹಂಕ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿನ ಹಿಂದಿನ ಸತ್ಯಾಸತ್ಯತೆ ಹೊರಬರಬೇಕಿದೆ.

PREV
Read more Articles on
click me!

Recommended Stories

​ಪೀಣ್ಯದಲ್ಲಿ ಪುಂಡರ ಅಟ್ಟಹಾಸ: ಪ್ರಶ್ನಿಸಿದ ಸ್ಥಳೀಯರ ಕಾರು ಧ್ವಂಸ! ಕ್ರಮ ಕೈಗೊಳ್ಳದೆ ಕೈತೊಳೆದುಕೊಂಡ ಪೋಲಿಸರು!
ಮೊಬೈಲ್​ನಲ್ಲಿ ಈ ಸೆಟ್ಟಿಂಗ್ಸ್​ ಆಫ್​ ಮಾಡಿದ್ರೆ ಸೈಬರ್​ ದಾಳಿಯಿಂದ ನೀವು ಸೇಫ್​: ಬೆಂಗಳೂರು ಪೊಲೀಸರ ಮಾಹಿತಿ