ನಾಮಪತ್ರ ವಾಪಸ್ಸು ಪಡೆಯುವ ನಿರ್ಧಾರಕ್ಕೆ ಬಂದ ಜೆಡಿಎಸ್ ಅಭ್ಯರ್ಥಿ ಕಬ್ಬಿಣ ಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು | ಬಾಳೇಹೊನ್ನೂರು ರಂಭಾಪುರಿ ಶ್ರೀಗಳ ಸಂಧಾನದ ಬಳಿಕ ಕಬ್ಬಿಣ ಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ನಾಮಪತ್ರ ವಾಪಸ್ಸು ಪಡೆಯಲು ನಿರ್ಧಾರ| ಬಾಳೇಹೊನ್ನೂರು ಶ್ರೀ ಹಾಗೂ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ|
ಹಾವೇರಿ(ನ.20): ಜಿಲ್ಲೆಯ ಹಿರೇಕರೂರು ಉಪಚುನಾವಣೆಯ ರಂಗು ದಿನದಿದ ದಿನಕ್ಕೆ ಗಂಗೇರುತ್ತಿದೆ. ಏತನ್ಮಧ್ಯೆ ಜೆಡಿಎಸ್ ಅಭ್ಯರ್ಥಿ ಕಬ್ಬಿಣ ಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ನಾಮಪತ್ರ ವಾಪಸ್ಸು ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಬಾಳೇಹೊನ್ನೂರು ರಂಭಾಪುರಿ ಶ್ರೀಗಳ ಸಂಧಾನದ ಬಳಿಕ ಕಬ್ಬಿಣ ಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ನಾಮಪತ್ರ ವಾಪಸ್ಸು ಪಡೆಯಲು ನಿರ್ಧಾರಕ್ಕೆ ಬಂದಿದ್ದಾರೆ. ಬಾಳೇಹೊನ್ನೂರು ಶ್ರೀ ಹಾಗೂ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪುತ್ರ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಕಲಾಗಿದೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾಂಗ್ರೆಸ್ ನಿಂದ ಶಾಸಕರಾಗಿದ್ದ ಹಿರೇಕೆರೂರು ಕ್ಷೇತ್ರದ ಶಾಸಕರಾಗಿದ್ದ ಬಿ. ಸಿ. ಪಾಟೀಲ ಅವರು ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ಈ ಉಪಚುನಾವಣೆ ನಡೆಯುತ್ತಿದೆ. ಜೆಡಿಎಸ್ ನಿಂದ ಕಬ್ಬಿಣ ಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ಸ್ಪರ್ಧಿಸಿದ್ದೇ ಆದಲ್ಲಿ ಮತಗಳು ವಿಭಜನಯಾಗು ಸಾಧ್ಯತೆ ಇರುವುದರಿಂದ ಬಿಜೆಪಿ ಸಂಧಾನ ನಡೆಸಿ ನಾಮಪತ್ರ ವಾಪಾಸ್ ಪಡೆಯುವಲ್ಲಿ ಸಫಲರಾಗಿದ್ದಾರೆ ಎನ್ನಲಾಗುತ್ತಿದೆ.
ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9 ರಂದು ಮತ ಎಣಿಕೆ ನಡೆಯಲಿದೆ.