ಅನರ್ಹರು ಸುಳ್ಳು ಹೇಳುತ್ತಾ ಡ್ರಾಮಾ ಮಾಡ್ತಿದ್ದಾರೆ: ಸಿದ್ದು

By Web DeskFirst Published Nov 20, 2019, 12:49 PM IST
Highlights

ಅನರ್ಹ ಶಾಸಕರು ಸುಳ್ಳು ಹೇಳ್ಕೊಂಡು ಡ್ರಾಮಾ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹುಣಸೂರಿನಲ್ಲಿ ಮಾತನಾಡಿದ ಅವರು, ಹುಣಸೂರು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು(ನ.20): ಅನರ್ಹ ಶಾಸಕರು ಸುಳ್ಳು ಹೇಳ್ಕೊಂಡು ಡ್ರಾಮಾ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹುಣಸೂರಿನಲ್ಲಿ ಮಾತನಾಡಿದ ಅವರು, ಹುಣಸೂರು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚನ್ನಸೋಗೆಯಲ್ಲಿ ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಬಿ. ಚಂದ್ರಶೇಖರ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, 5ನೇ ತಾರೀಕು ಉಪ ಚುನಾವಣೆ ಇದೆ. ಈ ಚುನಾವಣೆ ಯಾಕೆ ಬಂತು..? ವಿಶ್ವನಾಥ್ ಜೆಡಿಎಸ್‌ನಿಂದ ಗೆದ್ದಿದ್ರು. ಆದರೆ ನಿಮಗೆ ದ್ರೋಹ ಮಾಡಿ ಬಿಜೆಪಿ ಸೇರಿದ್ದಾರೆ ಎಂದಿದ್ದಾರೆ.

ಹುಣಸೂರು: ನಾಲ್ಕನೇ ಬಾರಿಗೆ ಉಪಚುನಾವಣೆ

ವಿಶ್ವನಾಥ್ ದ್ರೋಹ ಮಾಡಿರುವುದರಿಂದ ಒಂದೂವರೆ ವರ್ಷದೊಳಗೆ ಚುನಾವಣೆ ಬಂದಿದೆ. ಬಿಜೆಪಿಯಿಂದ ಗೆದ್ದರೆ ಹುಣಸೂರನ್ನ ಜಿಲ್ಲೆ ಮಾಡ್ತಿನಿ ಅಂತಿದ್ದಾರೆ. ನೀವೇನಾದರು ಜಿಲ್ಲೆ ಮಾಡಿ ಎಂದು ಕೇಳಿದ್ದೀರಾ..? ಇದೆಲ್ಲಾ ಕೇವಲ ಚುನಾವಣೆಗಷ್ಟೇ ಹೇಳುತ್ತಿರೋದು ಎಂದು ವ್ಯಂಗ್ಯ ಮಾಡಿದ್ದಾರೆ.

ನಾನು ದೇವರಾಜ ಅರಸು ಶಿಷ್ಯ ಎನ್ನುತ್ತಾನೆ ವಿಶ್ವನಾಥ್. ಯಾವ ಶಿಷ್ಯನಪ್ಪಾ ನೀನು ಎಂದು ಪ್ರಶ್ನೆ ಮಾಡಿದ ಸಿದ್ದು, ಪಕ್ಷ ಯಾಕೆ ಬಿಟ್ಟು ಹೋದೆ ? ಕುದುರೆ ವ್ಯಾಪಾರ ಆಗಿದ್ದಾನೆ. ಬಿಜೆಪಿಯಲ್ಲಿ ಗೆದ್ದರೆ ಅಲ್ಲೇ ಇರುತ್ತಾನೆ ಅಂತಾ ಗ್ಯಾರಂಟಿ ಏನು? ಎಂದು ಪ್ರಶ್ನಿಸಿದ್ದಾರೆ.

ಜಿಟಿಡಿ ಭೇಟಿಯಾಗಿ ಬೆಂಬಲ ಕೋರಿದ ವಿಶ್ವನಾಥ್‌

ಕಾಂಗ್ರೆಸ್ ನಿಂದ ಸಿದ್ದರಾಮಯ್ಯ ಓಡಿಸಿಬಿಟ್ಟ ಅಂತಾ ಸುಳ್ಳು ಹೇಳುತ್ತಾನೆ. ಬರೀ ಸುಳ್ಳನ್ನೇ ಹೇಳಿಕೊಂಡು ಡ್ರಾಮಾ ಮಾಡ್ಕೊಂಡಿದ್ದಾರೆ.‌ ಸುಪ್ರೀಂ ಕೋರ್ಟ್ ಅನರ್ಹ ಎಂದು ಹೇಳಿದೆ. ಅನರ್ಹರನ್ನು ಗೆಲ್ಲಿಸುತ್ತಿರಾ ಎಂದು ಜನರನ್ನು ಕೇಳಿದ್ದಾರೆ.

'ಸಿದ್ದು ಸಿಎಂ ಆದಾಗ ಉತ್ತರ ಕರ್ನಾಟಕದ ಕುರಿಗಳೆಲ್ಲಾ ಬ್ಯಾ ಅಂತ ಕುಣಿದವು'..!

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

click me!