ಸಮುದ್ರ ಮಧ್ಯೆ ಅತಂತ್ರ ಸ್ಥಿತಿಯಲ್ಲಿ ಬಾಕಿಯಾಗಿದ್ದ ನೌಕೆ ಮುಂಬೈನಲ್ಲಿ ಲಂಗರು

By Kannadaprabha News  |  First Published Apr 23, 2020, 7:36 AM IST

ಯುರೋಪ್‌ ಪ್ರವಾಸಕ್ಕೆ ಹೊರಟು ಸಮುದ್ರ ಮಧ್ಯೆ ಅತಂತ್ರ ಸ್ಥಿತಿಯಲ್ಲಿರುವ ಮೆರೆಲ್ಲಾ ಡಿಸ್ಕವರಿ ಪ್ರವಾಸಿ ನೌಕೆಯಲ್ಲಿ ಇರುವ 146 ಮಂದಿ ಭಾರತೀಯರನ್ನು ಮುಂಬೈ ಬಂದರಿನಲ್ಲಿ ಇಳಿಸಿಕೊಳ್ಳಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ.


ಮಂಗಳೂರು(ಏ.23): ಯುರೋಪ್‌ ಪ್ರವಾಸಕ್ಕೆ ಹೊರಟು ಸಮುದ್ರ ಮಧ್ಯೆ ಅತಂತ್ರ ಸ್ಥಿತಿಯಲ್ಲಿರುವ ಮೆರೆಲ್ಲಾ ಡಿಸ್ಕವರಿ ಪ್ರವಾಸಿ ನೌಕೆಯಲ್ಲಿ ಇರುವ 146 ಮಂದಿ ಭಾರತೀಯರನ್ನು ಮುಂಬೈ ಬಂದರಿನಲ್ಲಿ ಇಳಿಸಿಕೊಳ್ಳಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ.

ಇದರಿಂದಾಗಿ ನೌಕೆಯಲ್ಲಿರುವ ಭಾರತೀಯರು ಏ.23ರಂದು ಮುಂಬೈ ಬಂದರಿನಲ್ಲಿ ಇಳಿಯಲಿದ್ದಾರೆ. ಈ ನೌಕೆಯಲ್ಲಿ ಭಾರತೀಯರು ಸೇರಿದಂತೆ ಒಟ್ಟು 636 ಮಂದಿ ಪ್ರಯಾಣಿಕರು ಮಾ.14ರಿಂದ ಸಮುದ್ರದಲ್ಲೇ ಇದ್ದಾರೆ. ಪ್ರಸಕ್ತ ಮುಂಬೈಗೆ 100 ಮೈಲ್‌ ದೂರದಲ್ಲಿದ್ದಾರೆ.

Latest Videos

undefined

ಲಾಕ್‌ಡೌನ್‌ ಸಂಕಷ್ಟ: 3000 ಕೋಳಿ ದಫನ ಮಾಡಿದ ಕುಕ್ಕುಟೋದ್ಯಮಿ ಆತ್ಮಹತ್ಯೆ

ಈ ಪ್ರಯಾಣಿಕರು ಥಾಯಿಲ್ಯಾಂಡ್‌ನಿಂದ ಯುರೋಪ್‌ಗೆ ತೆರಳುವವರಿದ್ದರು. ಯುರೋಪ್‌ನಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗಿ ಇರುವುದರಿಂದ ಭಾರತೀಯ ಪ್ರಯಾಣಿಕರು ಅಲ್ಲಿಗೆ ತೆರಳಲು ನಿರಾಕರಿಸಿದ್ದರು.

ನೌಕೆಯಲ್ಲಿರುವ ಎಲ್ಲ ಪ್ರಯಾಣಿಕರ ಕೋವಿಡ್‌-19 ತಪಾಸಣೆ ದಿನಕ್ಕೆ ಎರಡು ಬಾರಿ ನಡೆಸಲಾಗುತ್ತಿದೆ. ನೌಕೆಯ ಕ್ಯಾಪ್ಟನ್‌ ಕೂಡ ಎಲ್ಲ ಪ್ರಯಾಣಿಕರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಯುರೋಪ್‌ ಬದಲು ಮುಂಬೈಗೆ ಮರಳಿ ಹಿಂದಿರುಗುವಂತೆ

ಕೊರೋನಾ ವಾರಿಯರ್‌ಗೆ ಜೀವ ಬೆದರಿಕೆ..!

ನೌಕೆಯಲ್ಲಿನ ಪ್ರಯಾಣಿಕರು ಕೆಲವು ದಿನಗಳಿಂದ ಕೇಂದ್ರ ಸರ್ಕಾರಕ್ಕೆ ಟ್ವೀಟ್‌ ಮಾಡಿದ್ದರು. ಇದರ ಫಲವಾಗಿ ಕೇಂದ್ರ ಸರ್ಕಾರ ಮಂಗಳವಾರ ಸ್ಪಂದಿಸಿದ್ದು, ನೌಕೆಯನ್ನು ಮುಂಬೈ ಬಂದರಿನಲ್ಲಿ ಇಳಿಸಲು ಸಮ್ಮತಿ ನೀಡಿತ್ತು.

click me!