ಲಾಕ್‌ಡೌನ್‌ ಎಫೆಕ್ಟ್‌: ಮಾನವೀಯ ಮನಸ್ಸುಗಳಿಂದ ಹರಿದು ಬರುತ್ತಿದೆ ನೆರ​ವು

By Kannadaprabha NewsFirst Published Apr 23, 2020, 7:28 AM IST
Highlights

ಅಲೆ​ಮಾರಿ, ಕುರಿ​ಗಾ​ರರು, ದಿನ​ಗೂ​ಲಿ​ಗ​ಳಿಗೆ ಆಹಾರ ಧಾನ್ಯದ ಕಿಟ್‌ ವಿತ​ರ​ಣೆ| ಅನೇಕ ಸಂಸ್ಥೆಗಳು ನೇರವಾಗಿ ಜಿಲ್ಲಾಡಳಿತಕ್ಕೆ ಆಹಾರ ಧಾನ್ಯಗಳನ್ನು ನೀಡಿದರೆ, ಮತ್ತೆ ಕೆಲವರು ನೇರವಾಗಿ ತಾವೇ ಸಂಕಷ್ಟದಲ್ಲಿರುವವರನ್ನು ಹುಡುಕಿಕೊಂಡು ಹೋಗಿ ನಿತ್ಯ ಬಳಕೆಯ ಆಹಾರ ಧಾನ್ಯಗಳನ್ನು ವಿತರಣೆ ಮಾಡುತ್ತಿದ್ದಾರೆ| 

ಬಳ್ಳಾರಿ(ಏ.23): ಕೊರೋನಾ ವೈರಸ್‌ ಭೀತಿಯಿಂದ ಲಾಕ್‌ಡೌನ್‌ ಆದ ಬಳಿಕ ತೀವ್ರ ಸಂಕಷ್ಟ ಎದುರಿಸುತ್ತಿರುವ ಸಮುದಾಯಗಳಿಗೆ ನೆರವಾಗಲು ಜಿಲ್ಲೆಯ ಅನೇಕ ಸಂಘ-ಸಂಸ್ಥೆಗಳು, ದಾನಿಗಳು ಮುಂದೆ ಬಂದಿದ್ದು, ಕಳೆದ 20 ದಿನಗಳಿಂದಲೂ ನಗರ ಸೇರಿಂತೆ ಜಿಲ್ಲೆಯ ನಾನಾ ಭಾಗಗಳಲ್ಲಿ ಆಹಾರ ಧಾನ್ಯಗಳ ಪೂರೈಕೆ ಮುಂದುವರಿದಿದೆ. 

ಅನೇಕ ಸಂಸ್ಥೆಗಳು ನೇರವಾಗಿ ಜಿಲ್ಲಾಡಳಿತಕ್ಕೆ ಆಹಾರ ಧಾನ್ಯಗಳನ್ನು ನೀಡಿದರೆ, ಮತ್ತೆ ಕೆಲವರು ನೇರವಾಗಿ ತಾವೇ ಸಂಕಷ್ಟದಲ್ಲಿರುವವರನ್ನು ಹುಡುಕಿಕೊಂಡು ಹೋಗಿ ನಿತ್ಯ ಬಳಕೆಯ ಆಹಾರ ಧಾನ್ಯಗಳನ್ನು ವಿತರಣೆ ಮಾಡುತ್ತಿದ್ದಾರೆ. ಅಲೆಮಾರಿಗಳು, ಕುರಿಗಾಯಿಗಳು, ದನಗಾಯಿಗಳು, ದಿನಗೂಲಿಯನ್ನೆ ಆಶ್ರಯಿಸಿ ಬದುಕು ದೂಡುತ್ತಿದ್ದವರನ್ನು ಸಹ ಹುಡುಕಾಡಿ ಆಹಾರ ಧಾನ್ಯಗಳನ್ನು ಪೂರೈಕೆ ಮಾಡುತ್ತಿರುವ ಅನೇಕ ಸಂಘ-ಸಂಸ್ಥೆಗಳು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.

ಇಡೀ ಜಗತ್ತಿಗೆ ಕೊರೋನಾ ಆತಂಕವಾದ್ರೆ ಬಳ್ಳಾರಿಗೆ ಡೆಂಗ್ಯೂ ಕಾಟ: ಆತಂಕದಲ್ಲಿ ಜನತೆ

ನೆರವಿಗೆ ಬಂದವರು ಯಾರ‌್ಯಾರು?

ಜಗದ್ಗುರು ಕೊಟ್ಟೂರುಸ್ವಾಮಿ ಮಠದಿಂದ 5 ಸಾವಿರ ಆಹಾರದ ಪ್ಯಾಕೆಟ್‌ಗಳು, ಜಿಲ್ಲಾ ಪತ್ರ ಬರಹಗಾರರು 5250, ಇಂಪೇರಿಯಲ್‌ ಎಜ್ಯುಕೇಷನ್‌ ಟ್ರಸ್ಟ್‌ 4200, ರೌಂಡ್‌ ಟೇಬಲ್‌ ಬಳ್ಳಾರಿ 8400, ಕಾಶ್‌ಪುಲ್‌ ಉಲೂಮ್‌ ಎಜ್ಯುಕೇಷನ್‌ ಸೊಸೈಟಿ ಕೌಲ್‌ಬಜಾರ್‌ 14700, ಪ್ರೀತಿ ರಾಮಕೃಷ್ಣ 5250, ಸಾಗರ್‌ ಟ್ರಸ್ಟ್‌ 5250, ಮಾಜಿ ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು 25,000, ಜಿಲ್ಲಾ ವಾಣಿಜ್ಯ ಕೈಗಾರಿಕೆ ಸಂಸ್ಥೆ 4,000, ಜಿಐಟಿಒ 5250, ಸಾಯಿಬಾಬಾ ಟ್ರಸ್ಟ್‌ (ಎಗ್‌ಕುಮಾರಸ್ವಾಮಿ) 3150, ಲಯನ್ಸ್‌ ಕ್ಲಬ್‌ 3,000, ಜೈನ್‌ ಸಂಘ 5250, ಎಸ್‌ಎಲ್‌ಆರ್‌ ಮೆಟಲ್ಸ್‌ 11,700 ನೀಡಿದ್ದು, ಹೊಸಪೇಟೆಯ ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಿಂದ 2 ಸಾವಿರ ಆಹಾರ ಧಾನ್ಯಗಳ ಕಿಟ್‌ ಸೇರಿದಂತೆ ಆಹಾರದ ಪ್ಯಾಕೆಟ್‌ಗಳನ್ನು ನೀಡಿದವರು ಆಹಾರಧಾನ್ಯಗಳನ್ನು ಸಹ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇವರಲ್ಲದೆ, ಸನ್ಮಾರ್ಗ, ಸೂರ್ಯಕಲಾ ಟ್ರಸ್ಟ್‌ ಸೇರಿದಂತೆ ನೂರಾರು ಜನರು ಸ್ವಯಂ ಪ್ರೇರಣೆಯಿಂದ ಸಂಕಷ್ಟದಲ್ಲಿರುವವರನ್ನು ಹುಡುಕಾಡಿ ಆಹಾರಧಾನ್ಯಗಳನ್ನು ವಿತರಣೆ ಮಾಡುತ್ತಿದ್ದಾರೆ.
ಬಳ್ಳಾರಿ ಜಿಲ್ಲೆಯ ಜನರು ನಿಜಕ್ಕೂ ಮಾನವೀಯ ನೆಲೆಯವರು. ಸಾಕಷ್ಟುಜನರು ಸ್ವಯಂ ಪ್ರೇರಣೆಯಿಂದ ಜಿಲ್ಲಾಡಳಿತಕ್ಕೆ ಆಹಾರಧಾನ್ಯಗಳನ್ನು ವಿತರಣೆ ಮಾಡಿದ್ದಾರೆ. ಅನೇಕರು ತಾವೇ ತೆರಳಿ ಸಂಕಷ್ಟದಲ್ಲಿದ್ದವರಿಗೆ ನೆರವಾಗಿದ್ದಾರೆ. ಜಿಲ್ಲೆಯ ದಾನಿಗಳು ನಿಜಕ್ಕೂ ಅಭಿನಂದನಾರ್ಹರು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರು ಹೇಳಿದ್ದಾರೆ. 
 

click me!