ಬಿಜೆಪಿ ಸರ್ಕಾರದಲ್ಲಿ ಬರೀ ಗೂಂಡಾಗಳೇ ತುಂಬಿದ್ದಾರೆ| ಕೋಡಿಹಳ್ಳಿ ಚಂದ್ರಶೇಖರ್ ರೈತರ ಮಕ್ಕಳ ಪರವಾಗಿ ನಿಂತಿದ್ದಾರೆ| ರೇಣುಕಾಚಾರ್ಯ ಎಷ್ಟು ಲುಚ್ಚಾ ಅಂತಾ ಎಲ್ಲರಿಗೂ ಗೊತ್ತಿದೆ| ಈ ಕೂಡಲೇ ರೇಣುಕಾಚಾರ್ಯ ಕೋಡಿಹಳ್ಳಿ ಚಂದ್ರಶೇಖರ್ ಕ್ಷಮೆಯಾಚಿಸಬೇಕು: ಶರಣಪ್ಪ ಮರಳಿ|
ರಾಯಚೂರು(ಡಿ.19): ಶಾಸಕ ರೇಣುಕಾಚಾರ್ಯ ಒಬ್ಬ ಪರಮ ನೀಚ, ಲುಚ್ಚಾ, ಈತನ ಕೈನೂ ಶುದ್ಧವಿಲ್ಲ, ಬಾಯಿಯೂ ಶುದ್ಧವಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಚ್ಚೆ ಬಿಗಿ ಇಲ್ಲದ ವ್ಯಕ್ತಿ ನಮ್ಮ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರ ಬಗ್ಗೆ ಮಾತನಾಡುತ್ತಾರೆ. ನರ್ಸ್ ಜೊತೆ ಏನೇನು ಮಾಡಿದ್ದಾರೆ ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯವಾಗಿದೆ ಎಂದು ರೇಣುಕಾಚಾರ್ಯ ವಿರುದ್ಧ ಕಿರಿಕಾರಿದ್ದಾರೆ.
ರೇಣುಕಾಚಾರ್ಯಗೆ ದುರ್ಗುಟ್ಟಿದ್ದ ಕೋತಿ ಕೊನೆಗೂ ಅರೆಸ್ಟ್
ಬಿಜೆಪಿ ಸರ್ಕಾರದಲ್ಲಿ ಬರೀ ಗೂಂಡಾಗಳೇ ತುಂಬಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ರೈತರ ಮಕ್ಕಳ ಪರವಾಗಿ ನಿಂತಿದ್ದಾರೆ. ಸಾರಿಗೆ ನೌಕರರು ರೈತರ ಮಕ್ಕಳು ಹಾಗಾಗಿ ಕೋಡಿಹಳ್ಳಿ ಚಂದ್ರಶೇಖರ ಹೋರಾಟಗಾರರ ಪರವಾಗಿ ನಿಂತಿದ್ದಾರೆ. ರೇಣುಕಾಚಾರ್ಯ ಎಷ್ಟು ಲುಚ್ಚಾ ಅಂತಾ ಎಲ್ಲರಿಗೂ ಗೊತ್ತಿದೆ. ಈ ಕೂಡಲೇ ರೇಣುಕಾಚಾರ್ಯ ಕೋಡಿಹಳ್ಳಿ ಚಂದ್ರಶೇಖರ್ ಕ್ಷಮೆಯಾಚಿಸಬೇಕು ಎಂದು ಶರಣಪ್ಪ ಮರಳಿ ಒತ್ತಾಯಿಸಿದ್ದಾರೆ.