: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದತ್ತ ಮಾಲಾಧಾರಣೆ ಮಾಡಿದ್ದು, ಅಧಿಕೃತವಾಗಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ
ಚಿಕ್ಕಮಗಳೂರು (ಡಿ.19) : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದತ್ತ ಮಾಲಾಧಾರಣೆ ಮಾಡಿದ್ದು, 23ನೇ ವರ್ಷದ ದತ್ತ ಜಯಂತಿಗೆ ಚಾಲನೆ ನೀಡಲಾಗಿದೆ.
11 ದಿನದ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಭಜರಂಗದಳ, ವಿ.ಎಚ್.ಪಿ. ನೇತೃತ್ವದಲ್ಲಿ ನಡೆಯುವ ದತ್ತ ಜಯಂತಿಗೆ ಚಾಲನೆ ನೀಡಲಾಗಿದೆ.
ಚಾಮುಂಡೇಶ್ವರಿಯಲ್ಲಿ ಬಿಜೆಪಿ-ಜೆಡಿಎಸ್ ಒಪ್ಪಂದ: ಸಿದ್ದು ಹೇಳಿಕೆಗೆ ಸಿಟಿ ರವಿ ಖಡಕ್ ಸ್ಪಷ್ಟನೆ ...
ನೂರಾರು ಭಕ್ತರೊಂದಿಗೆ ಮಾಲೆ ಧರಿಸಿದ ಬಿಜೆಪಿ ಮುಖಂಡ ಸಿ.ಟಿ.ರವಿ ಡಿ. 27ರಂದು ನಡೆಯುವ ಅನಸೂಯ ಜಯಂತಿ, 28 ರಂದು ನಡೆಯುವ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
29ರಂದು ದತ್ತ ಪಾದುಕೆ ದರ್ಶನದ ಮೂಲಕ ಕಾರ್ಯಕ್ರಮ ಮುಕ್ತಾಯವಾಗಲಿದೆ. ಚಿಕ್ಕಮಗಳೂರಿನ ದತ್ತಪೀಠದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರಿಂದ 11 ದಿನಗಳ ಕಾಲ ಕಾಫಿನಾಡು ಸಂಪೂರ್ಣ ಕೇಸರಿಮಯವಾಗಲಿದೆ.