ಪೋಲಿಸರ ಕರ್ತವ್ಯಕ್ಕೆ ಅಡ್ಡಿ: ಹುನಗುಂದ ಮಾಜಿ ಶಾಸಕ ಕಾಶಪ್ಪನವರ ವಿರುದ್ಧ FIR

By Suvarna News  |  First Published Dec 19, 2020, 12:46 PM IST

ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ| ಕಾಶಪ್ಪನವರ ಸೇರಿ ನಾಲ್ವರ ವಿರುದ್ಧ ಕೇಸ್| ಕಾಶಪ್ಪನವರ ವಿರುದ್ಧ ದೂರು ದಾಖಲಿಸಿದ ಹುನಗುಂದ ಸಿಪಿಐ ಅಯ್ಯನಗೌಡ ಪಾಟೀಲ್| 


ಬಾಗಲಕೋಟೆ(ಡಿ.19): ಜಿಲ್ಲೆಯ ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಇಳಕಲ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ಪ್ರಕರಣ ದಾಖಲಾಗಿದೆ. ಪೋಲಿಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ. 

ಕಾಶಪ್ಪನವರ ವಿರುದ್ಧ ಹುನಗುಂದ ಸಿಪಿಐ ಅಯ್ಯನಗೌಡ ಪಾಟೀಲ್ ಅವರು ದೂರು ದಾಖಲಿಸಿದ್ದಾರೆ. ಇಲಕಲ್ ಠಾಣೆಯಲ್ಲಿ 143, 147,353, 504,506 ಕಲಂ ಅಡಿಯಲ್ಲಿ ಕೇಸ್ ದಾಖಲಾಗಿದೆ. 

Tap to resize

Latest Videos

ಕೊಲೆ ಬೆದರಿಕೆ ಕರೆ: ಹುನಗುಂದ ಮಾಜಿ ಶಾಸಕ ಕಾಶಪ್ಪನವರ

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 9  ಜನರಿಗೆ ನಿರೀಕ್ಷಣಾ ಜಾಮೀನು ಆದೇಶ ನೀಡಲು ಹೋದ ವೇಳೆ ವಿಜಯಾನಂದ ಕಾಶಪ್ಪನವರ ಪೋಲಿಸರಿಗೆ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ್ದರು ಎಂದು ಆರೋಪಿಸಲಾಗಿದೆ.
ಜಾಮೀನು ಪಡೆದ 9 ಜನರಿಗೂ ನೋಟಿಸ್ ಪಡೆಯದಂತೆ ಹೇಳಿ ಸಹಕಾರ ನೀಡದಿರುವಂತೆ ಕಾಶಪ್ಪನವರ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಮಾಜಿ ಶಾಸಕ ಕಾಶಪ್ಪನವರ ಸೇರಿ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ. 
 

click me!