Chitradurga: ರಾಹುಲ್ ಗಾಂಧಿಗೆ ಸಲಹೆ ನೀಡಿದ ಹಿರಿಯೂರಿನ ಷಡಕ್ಷರಮುನಿ ಸ್ವಾಮೀಜಿ

Published : Aug 03, 2022, 04:14 PM IST
Chitradurga: ರಾಹುಲ್ ಗಾಂಧಿಗೆ ಸಲಹೆ ನೀಡಿದ  ಹಿರಿಯೂರಿನ ಷಡಕ್ಷರಮುನಿ ಸ್ವಾಮೀಜಿ

ಸಾರಾಂಶ

ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳ ಕಲ್ಯಾಣಕ್ಕಾಗಿ ಮುಂದಿನ ದಿನಗಳಲ್ಲಿ ತಮ್ಮ ಪಕ್ಷದ ನೀತಿ ಸಿದ್ಧಾಂತಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಹಿರಿಯೂರು ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಸಲಹೆ ನೀಡಿದರು.

ಚಿತ್ರದುರ್ಗ (ಆ.03): ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳ ಕಲ್ಯಾಣಕ್ಕಾಗಿ ಮುಂದಿನ ದಿನಗಳಲ್ಲಿ ತಮ್ಮ ಪಕ್ಷದ ನೀತಿ ಸಿದ್ಧಾಂತಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಹಿರಿಯೂರು ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಸಲಹೆ ನೀಡಿದರು. ಚಿತ್ರದುರ್ಗದ ಮುರುಘಾ ಮಠದಲ್ಲಿ ರಾಜ್ಯದ ವಿವಿಧ ಮಠಾಧೀಶರನ್ನು ರಾಹುಲ್ ಗಾಂಧಿ ಅವರು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಶ್ರೀಗಳು ರಾಹುಲ್ ಗಾಂಧಿ ಅವರಿಗೆ ಸಲಹಾ ಪತ್ರವನ್ನು ನೀಡಿದರು.

ಈ ವೇಳೆ ಷಡಕ್ಷರಮುನಿ ಸ್ವಾಮೀಜಿ, ರಾಹುಲ್ ಗಾಂಧಿಯವರಿಗೆ ನೀಡಿದ  ಪತ್ರದಲ್ಲಿ, ಪರಿಶಿಷ್ಟ ಜಾತಿಯಲ್ಲೇ ಅಂತ್ಯಂತ ಹೆಚ್ಚಿನ ಜನಸಂಖ್ಯೆಯುಳ್ಳ ಮಾದಿಗ ಮತ್ತು ಸಂಬಂಧಿತ ಸಮುದಾಯ ಕರ್ನಾಟಕದಲ್ಲಿ ಸುಮಾರು 90 ಲಕ್ಷಕ್ಕೂ ಹೆಚ್ಚಿದೆ. ಈ ಸಮುದಾಯದಲ್ಲಿ ಬಹುಪಾಲು ಈ ಸಮುದಾಯದ ಜನರು ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯ ಚರ್ಮೋದ್ಯೋಗಿಗಳು. ಅವರು ಇಂದಿಗೂ ಆ ಕಾಯಕವನ್ನೇ ಮುಂದುವರೆಸಿಕೊಂಡು ಬಂದಿರುತ್ತಾರೆ. ಮಾದಿಗ ಸಮುದಾಯದ ಮೂಲ ಪುರುಷ ಆದಿಜಾಂಬವ ಮುನಿ ತರುವಾಯ ಅರುಂಧತಿ, ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ಡೋಹಾರ ಕಕ್ಕಯ್ಯ, ಸಂತ ರವಿದಾಸ್ ಮುಂತಾದ ಮಹನೀಯರು ಈ ಸಮುದಾಯದಲ್ಲಿ ಜನಿಸಿದ್ದು, ಈ ಜಾತಿಯ ಹೆಗ್ಗಳಿಕೆಯಾಗಿದೆ. 

Chitradurga ಪಟ ಪಟ ಹಾರೋ ಗಾಳಿಪಟ ಹಬ್ಬ ಆಚರಣೆ, ಕುಣಿದು ಕುಪ್ಪಳಿಸಿದ ಮಕ್ಕಳು

ಉತ್ತರ ಭಾರತದಲ್ಲಿ ರೂಢಿಯಲ್ಲಿರುವ ದಿವಂಗತ ಬಾಬು ಜಗಜೀವನ ರಾಮ್ ಅವರ ಚಮ್ಮಾರ್ ಕುಲದ ಈ ಮಾದಿಗ ಸಮುದಾಯ ಎಲ್ಲ ರೀತಿಯಿಂದ ವಂಚನೆಗೆ ಒಳಗಾಗಿದೆ. ಇಡೀ ದೇಶದಲ್ಲಿ ಈ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದಲ್ಲದೆ, ದೇಶದ ಯುವಜನರಿಗೆ ಉದ್ಯೋಗ,ಬಡತನ ನಿವಾರಣೆ, ಮಹಿಳಾ ಸಶಕ್ತೀಕರಣ, ಸ್ವಾವಲಂಬನೆ ಮುಂತಾದ ಅಭಿವೃದ್ಧಿಪರ ಚಿಂತನೆ ತಮ್ಮ ಪಕ್ಷದ್ದಾಗಬೇಕೆಂದರು.

ರೈತರಿಗೆ ಭರ್ಜರಿ ಗಿಫ್ಟ್ ನೀಡಿದ ಬೊಮ್ಮಾಯಿ ಸರ್ಕಾರ..!

ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪ್ರಧಾನಿಗಳಾಗಿ ಜಾತ್ಯತೀತ ನಿಲುವನ್ನು ತಳೆದು, ದೇಶದ ಪ್ರಗತಿಗಾಗಿ ದುಡಿದವರು, ಈ ಹಿನ್ನಲೆ ಕುಟುಂಬದ ತಾವು, ದೇಶವ್ಯಾಪಿ, ತಮ್ಮ ಪಕ್ಷಕ್ಕೂ ಸಹ, ಸಲಹೆ ನೀಡುವ ಸ್ವಾಮಿಗಳವರ,ಸಮಾನ ಮನಸ್ಕ ಚಿಂತಕರ, ಬರಹಗಾರರ, ಭೋಧಕರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳ ರಾಜಕೀಯೇತರ ಸಲಹಾ ಸಮಿತಿಯನ್ನು ರಚಿಸಿಕೊಳ್ಳಲು ತಮಗೆ ಅವಕಾಶವಿದ್ದು, ದೇಶ ನಡೆಸುವಲ್ಲಿ ಅದು ಸಹಕಾರಿಯಾಗಲಿದೆ ಎಂದು ಸ್ವಾಮೀಜಿ ತಮ್ಮ ಪತ್ರದಲ್ಲಿ ಸಲಹೆ ನೀಡಿದ್ದಾರೆ.

PREV
Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ