ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜನ್ಮ ದಿನದ ಪ್ರಯುಕ್ತ ನಡೆಯುತ್ತಿರುವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಜ್ಯಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಅವರು ಇಂದು ಮುರುಘಾ ಮಠಕ್ಕೆ ಭೇಟಿ ನೀಡಿದರು.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಆ.03): ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜನ್ಮ ದಿನದ ಪ್ರಯುಕ್ತ ನಡೆಯುತ್ತಿರುವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಜ್ಯಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಅವರು ಇಂದು ಮುರುಘಾ ಮಠಕ್ಕೆ ಭೇಟಿ ನೀಡಿದರು. ಬೆಳಗ್ಗೆ 12ಗಂಟೆ ಸುಮಾರಿಗೆ ಹುಬ್ಬಳ್ಳಿಯಿಂದ ರಸ್ತೆ ಮೂಲಕ ಮುರುಘಾ ಮಠಕ್ಕೆ ಆಗಮಿಸಿದರು. ಇವರಿಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗೂ ಉಸ್ತುವಾರಿಗಳಾದ ವೇಣುಗೋಪಾಲ್, ಮತ್ತು ಬಿ.ಕೆ ಹರಿಪ್ರಸಾದ್ ಸಾಥ್ ನೀಡಿದರು. ಮುರುಘಾ ಮಠಕ್ಕೆ ಆಗಮಿಸಿದ ಕೂಡಲೇ ಎಲ್ಲಾ ಕೈ ನಾಯಕರು ಹಾಗೂ ಅಭಿಮಾನಿಗಳನ್ನು ರಾಹುಲ್ ಗಾಂಧಿ ಮಾತನಾಡಿಸಿದರು.
ನಂತರ ಮುರುಘಾ ಮಠದ ದರ್ಬಾರ್ ಹಾಲ್‌ನಲ್ಲಿ ಕುಳಿತಿದ್ದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹಾಗೂ ವಿವಿಧ ಮಠಾಧೀಶರನ್ನು ಭೇಟಿ ಮಾಡಿದರು. ಈ ವೇಳೆ ಪ್ರಮುಖ ಮಠಾಧೀಶರಾದ ಮಾದಾರಾ ಚನ್ನಯ್ಯ ಶ್ರೀ, ಭೋವಿ ಗುರುಪೀಠಧ ಸಿದ್ದರಾಮೇಶ್ವರ ಶ್ರೀ, ಮತ್ತು ಇನ್ನಿತರ 20ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮುರುಘಾ ಶರಣರು ರಾಹುಲ್ ಗಾಂಧಿ ಅವರ ಹಣೆಗೆ ವಿಭೂತಿ ಹಚ್ಚುವ ಮೂಲಕ ಲಿಂಗ ದೀಕ್ಷೆ ಕೊಟ್ಟಿರು. ಈ ವೇಳೆ ಅನೇಕ ವಿಚಾರಗಳ ಕುರಿತು ಮುರುಘಾ ಶರಣರು ಹಾಗು ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ. ಇನ್ನೂ ಲಿಂಗಧಾರಣೆ ಪಡೆದಂತಹ ರಾಹುಲ್ ಗಾಂಧಿ ಅವರು ಅದರ ಬಗ್ಗೆ ಸಂಪೂರ್ಣವಾಗಿ ವಿವರ ಕೇಳಿದ್ದಾರೆ.
ಚಿತ್ರದುರ್ಗ: ಅಜ್ಜಯ್ಯನ ಕೆರೆಯಲ್ಲಿ ಎಗ್ಗಿಲ್ಲದೇ ನಡೀತಿದೆ ಅಕ್ರಮ ಮಣ್ಣು ಗಣಿಗಾರಿಕೆ
ಲಿಂಗ ಪೂಜೆಯ ಕುರಿತು ಮಾಹಿತಿ ಪಡೆದಿದ್ದಾರೆ. ನಂತರ ಲಿಂಗ ಪೂಜೆಯನ್ನು ನಾನು ಕೂಡ ಪಾಲಿಸುತ್ತೇನೆ ಎಂದು ಮುರುಘಾ ಶರಣರಿಗೆ ರಾಹುಲ್ ಹೇಳಿದ್ದಾರೆ. ಇದರ ಜೊತೆಗೆ ಇಷ್ಟ ಲಿಂಗ ಪೂಜೆ ಬಗ್ಗೆ ಹೇಳಿಕೊಡಲು ದೆಹಲಿಗೆ ಬನ್ನಿ ಎಂದು ಮುರುಘಾ ಶರಣರಿಗೆ ಅಹ್ವಾನ ನೀಡಿದ್ದಾರೆ. ರಾಹುಲ್ ಗಾಂಧಿ ಮುರುಘಾ ಮಠಕ್ಕೆ ಭೇಟಿ ನೀಡಿದ್ದು, ಹಾಗೂ ಅವರಿಗೆ ಶರಣರು ಲಿಂಗಧಾರಣೆ ಮಾಡಿದ್ದರ ಕುರಿತು ಅವರನ್ನೇ ಕೇಳಿದಾಗ, ರಾಹುಲ್ ಗಾಂಧಿ ಭೇಟಿ, ಇದೊಂದು ಸೌಜನ್ಯದ ಭೇಟಿ ಅಷ್ಟೆಯಾಗಿದೆ. ನಮ್ಮೊಂದಿಗೆ ಸಂವಾದ ವೇಳೆ ರಾಹುಲ್ ಕೆಲವು ಪ್ರಶ್ನೆಗಳನ್ನು ಕೇಳಿದರು. ಜೊತೆಗೆ ನೀವು ಯಾವ ಸಿದ್ಧಾಂತ ಪ್ರಚಾರ ಮಾಡುತ್ತೀರಿ ಎಂದು ಕೇಳಿದರು.
ನಾವು ಬಸವ ತತ್ವ ಪ್ರಚಾರ ಮಾಡುತ್ತೇವೆ ಎಂದೆವು. ಬಸವಣ್ಣ ಅವರು ಜಗತ್ತಿಗೆ ಏನು ಬೋಧನೆ ಮಾಡಿದ್ದರೆಂದು ಕೇಳಿದರು. ಕಾಯಕ, ದಾಸೋಹ, ಸಾಮಾಜಿಕ ಸಮಾನತೆ ಎಂದೆವು. ಯಾವ ರೀತಿಯ ಪೂಜೆ, ಪ್ರಾರ್ಥನೆ ಮಾಡುತ್ತೀರೆಂದು ಕೇಳಿದರು. ಇಷ್ಟಲಿಂಗ ಪೂಜೆ ಬಗ್ಗೆ ನಾವು ಹೇಳಿದೆವು. ಆಗ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಲು ಮನವಿ ಮಾಡಿದರು. ನಾವು ಇಪ್ಪತ್ತು ನಿಮಿಷ ಕಾಲ ಇಷ್ಟಲಿಂಗದ ಪ್ರಾತ್ಯಕ್ಷಿಕೆ ಮಾಡಿದೆವು. ಬಳಿಕ ಇಷ್ಟ ಲಿಂಗ ಧರಿಸುವಿರಾ ಎಂದು ನಾವು ಕೇಳಿದೆವು. ಆಗ ಸಂತೋಷದಿಂದ ರಾಹುಲ್ ಗಾಂಧಿ ಇಷ್ಟಲಿಂಗ ಧಾರಣೆ ಮಾಡಿಕೊಂಡರು. ರಾಹುಲ್‌ಗೆ ಇಷ್ಟಲಿಂಗ ಧಾರಣೆ, ದೀಕ್ಷೆ ನೀಡಿ ಹಣೆಗೆ ವಿಭೂತಿ ಧರಿಸಿದೆವು.
ಈಗ ನೀವು ಬಸವ ಭಕ್ತರಾದಿರಿ ಎಂದು ಹೇಳಿದಾಗ ಖುಷಿ ಪಟ್ಟರು. ಇದೊಂದು ನೆನಪಿನಲ್ಲಿ ಉಳಿಯುವಂಥ ಸಂದರ್ಭವಾಗಿದೆ. ಇಷ್ಟಲಿಂಗ ಪೂಜೆ ಬಗ್ಗೆ ಹೇಳಿಕೊಡಲು ದೆಹಲಿಗೆ ಬರಲು ಹೇಳಿದ್ದಾರೆ. ಯಾರಾದರೂ ಸ್ವಾಮಿಗಳನ್ನು ಕಳಿಸುತ್ತೇವೆ, ಅಥವಾ ನಮ್ಮಿಂದಾದರೆ ನಾವೇ ಹೋಗುತ್ತೇವೆ. ಚರ್ಚೆ ಮಾಡಿ, ಪ್ರಾತ್ಯಕ್ಷಿಕೆ ನೋಡಿದ ಬಳಿಕ ಲಿಂಗಧಾರಣೆ ಮಾಡಲಾಗಿದೆ ಎಂದು ಮುರುಘಾ ಶರಣರು ತಿಳಿಸಿದರು. ಮುರಘಾ ಮಠಕ್ಕೆ ರಾಹುಲ್ ಗಾಂಧಿ ಭೇಟಿಗೂ ಮುನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಏನು ಮಾತನಾಡಿದ್ರು ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ. ಮುರುಘಾ ಮಠಕ್ಕೆ ರಾಹುಲ್ ಗಾಂಧಿ ಆಗಮನ ಹಿನ್ನೆಲೆ.
ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮುರುಘಾ ಶರಣರ ಮಾತು. ಸೌಹಾರ್ದಯುತವಾಗಿ ಬರ್ತಿದ್ದಾರೆ ಬರಲಿ. ಚುನಾವಣೆ ಸಂದರ್ಭದಲ್ಲಿ ಮಠಕ್ಕೆ ಬರ್ತಾರೆ ಅನ್ನೋದಕ್ಕಿಂತ ಸದಾ ಕಾಲ ಜನ ಸಂಪರ್ಕ ಇಟ್ಕೊಳೋದಾದ್ರೆ ಆ ಆರೋಪ ಬರೋದಿಲ್ಲ. ಆ ಆರೋಪ ಸರಿಪಡಿಸಿಕೊಳ್ಳಲು ಪಕ್ಷಗಳು ಜನನಾಯಕರು ಪ್ರಯತ್ನ ಮಾಡಲಿ. ಸದ್ಯ ಭಾರತ ಎಲ್ಲಾ ಹಂತದಲ್ಲಿಯೂ ಬಲಿಷ್ಠವಾಗಿದೆ. ಪ್ರಗತಿಯಲ್ಲಿ ಸಾಗ್ತಿರೋ ಭಾರತದ ಅಭಿವೃದ್ಧಿ ಕುಂಠಿತಗೊಳಿಸಬೇಕು. ಭಾರತದಲ್ಲಿ ಅಶಾಂತಿ ನಿರ್ಮಾಣ ಮಾಡಬೇಕು ಎಂದು ಶಕ್ತಿಗಳು ಭಾರತದ ಸುತ್ತ ಇವೆ. ಅಂತಹ ಶತೃಗಳಿಂದ ಭಾರತ ಸುತ್ತುವರಿದಿದೆ.
ಮೊಬೈಲ್ ಬದಲಿಗೆ ಸೋನ್ ಪಾಪಡಿ ಕಳುಹಿಸಿ ರೈತನಿಗೆ ಮೋಸ
ಶತೃಗಳಿಂದ ನಾವು ಸುರಕ್ಷಿತ ಆಗಬೇಕು ಅನ್ನೋದಾದ್ರೆ ಸರ್ಕಾರ ಹಾಗೂ ಆಳುವ ನಾಯಕರು ಸಮರ್ಥರಾಗಿರಬೇಕು.ಇವತ್ತು ನಮ್ಮ ರಾಷ್ಟ್ರ ಆ ರೀತಿಯ ನಾಯಕತ್ವ ಪಡೆದುಕೊಂಡಿದೆ. ಪ್ರಧಾನಿ ಮೋದಿ ಬಗ್ಗೆ ಗುಣಗಾನ ಮಾಡಿದ ಮುರುಘಾ ಶರಣರು,ಎಲ್ಲಾ ಹಂತದಲ್ಲಿಯೂ ಅಂತಹ ಶತೃಗಳನ್ನು ಹಿಮ್ಮೆಟ್ಟಿಸುವಂತಹ ಕೆಲಸ ಮಾಡ್ತಿರೋದಕ್ಕೆ ಖುಷಿ ಆಗ್ತಿದೆ. ಮೋದಿ ಅವರು ಸಮರ್ಥವಾಗಿ ಅದನ್ನು ನಿಭಾಹಿಸುತ್ತಿದ್ದಾರೆ. ಕೊರೋನಾ ಕಾಲದಲ್ಲಿ ಜನರ ಆರೋಗ್ಯವನ್ನು ಮೋದಿಜೀ ಅವರು ರಕ್ಷಣೆ ಮಾಡಿದ್ದಾರೆ. ಅವರಿಗೆ ನಮ್ಮಿದೊಂದು ಥ್ಯಾಂಕ್ಸ್ ಎಂದ ಮುರುಘಾ ಶರಣರು, ರಾಹುಲ್ ಗಾಂಧಿ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಲಿದ್ದಾರೆ ಎಂಬ ಭಾವನೆಯಿದೆ ನೋಡಬೇಕು ಎಂದರು.