ವೈದ್ಯನಿಂದ ಲೈಂಗಿಕ ಕಿರುಕುಳ: ಆಸ್ಪತ್ರೆ ಮಹಿಳೆ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

By Kannadaprabha News  |  First Published Nov 17, 2021, 9:15 AM IST
  • ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ದುರ್ವತನೆಯಿಂದ ಬೇಸತ್ತ ‘ಡಿ’ ದರ್ಜೆ ನೌಕರರಾಗಿ ಕೆಲಸ ನಿರ್ಹಿಸುತ್ತಿರುವ 31 ವರ್ಷದ ಮಹಿಳೆ
  • ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ

 ಹೊಳೆಹೊನ್ನೂರು (ನ.17):  ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (Primary health centre) ವೈದ್ಯರ (Doctor) ದುರ್ವತನೆಯಿಂದ ಬೇಸತ್ತ ‘ಡಿ’ ದರ್ಜೆ ನೌಕರರಾಗಿ (D Group Employee) ಕೆಲಸ ನಿರ್ಹಿಸುತ್ತಿರುವ 31 ವರ್ಷದ ಮಹಿಳೆ ನಿದ್ದೆ (Sleeping pills) ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ (Suicide) ಪ್ರಯತ್ನಿಸಿದ ಘಟನೆ ನಡೆದಿದೆ.

ಆರೋಗ್ಯ ಕೇಂದ್ರದ ದಂತ ವ್ಯೆದ್ಯ ಡಾ.ಮೋಹನ್‌ (Dr mohan) ಮಹಿಳೆ ಮೇಲೆ ಲೈಂಗಿಕ ಕಿರುಕುಳ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತನಗೆ ಇಷ್ಟವಾದ ರೀತಿಯಲ್ಲಿ ಮಹಿಳೆಯನ್ನು ಕೆಸಲಕ್ಕೆ ನೇಮಿಸಿಕೊಂಡಿದ್ದಲ್ಲದೇ, ಲೈಂಗಿಕ ಕಿರುಕುಳ (Sexual harassment) ನೀಡುವ ಸಲುವಾಗಿಯೇ ತನ್ನ ಛೇಂಬರ್‌ಗೆ ಕರೆಸಿಕೊಳ್ಳುತ್ತಿದ್ದರು. ಕೆಲಸದ ಸಮಯದಲ್ಲಿ (working time) ಮಹಿಳೆ ಹತ್ತಿರ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

Tap to resize

Latest Videos

undefined

ದಂತ ವೈದ್ಯರು (Dental Doctor) ಕಚೇರಿಯ ಎಲ್ಲ ಸ್ಟಾಪ್‌ಗಳನ್ನು ಮಹಿಳೆಯ ವಿರುದ್ಧ ಎತ್ತಿಕಟ್ಟಿ, ಇದಕ್ಕೆ ಪೂರಕವೆಂಬಂತೆ ಆರೋಗ್ಯ ಸಮಿತಿಯ ಸುಮ ಅವರನ್ನು ಬಳಸಿಕೊಂಡು, ವೈದ್ಯರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನ.12ರಂದು ಮಹಿಳೆ ಹಾಗೂ ವೈದ್ಯ ಸಿಬ್ಬಂದಿ ನಾಗರಾಜ್‌ (Nagaraj) ಛೇಂಬರ್‌ನಲ್ಲಿದ್ದಾಗ, ವೈದ್ಯರು ಹೊರಗಡೆ ಬಂದು ಮಹಿಳೆಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಬೇಸತ್ತ ಮಹಿಳೆ ಆರೋಗ್ಯ ಕೇಂದ್ರದ ಸ್ಟೋರ್‌ನಲ್ಲಿ ಇದ್ದ ಸುಮಾರು 30 ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಅದರಲ್ಲಿ 25 ಮಾತ್ರೆಗಳನ್ನು ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವಿಷಯ ತಿಳಿದ ನಾಗರಾಜ್‌ ಮಹಿಳೆಯನ್ನು ಪೋಷಕರ ಸಹಾಯದಿಂದ 108 ಆ್ಯಂಬುಲೆನ್ಸ್‌ (Ambulance) ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯ ಡಾ.ಮೋಹನ್‌ ಹಾಗೂ ಆರೋಗ್ಯ ಸಮಿತಿಯ ಸುಮ ವಿರುದ್ಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪತಿ ಮಲ್ಲಿಕಾರ್ಜುನಯ್ಯ ದೂರು ನೀಡಿದ್ದಾರೆ. ಪೊಲೀಸರು (Police) ಎಫ್‌ಐಆರ್‌ (FIR) ದಾಖಲಿಸಿದ್ದಾರೆ. ನ.13ರಂದು ಏಜೆಸ್ಸಿಯವರು ವೈದ್ಯ ಹಾಗೂ ಸುಮ ಅವರ ನಿರ್ದೇಶನದಂತೆ ದೌರ್ಜನ್ಯಕ್ಕೀಡಾದ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ.

ಸಹೋದ್ಯೋಗಿಗೆ ಲೈಂಗಿಕ ಕಿರುಕುಳ :  ಕಚೇರಿಯಲ್ಲಿ ಸಹೋದ್ಯೋಗಿ (Colleague) ಯುವತಿ ಮೇಲೆ ಲೈಂಗಿಕ ಕಿರುಕುಳ (Sexual harassment) ನೀಡುತ್ತಿದ್ದ ಆರೋಪದಲ್ಲಿ ದ.ಕ. ಜಿಲ್ಲಾ (Dakshina kannada) ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ (Minorities Development Corporation ) ಜಿಲ್ಲಾ ವ್ಯವಸ್ಥಾಪಕ ಮೊಹಮ್ಮದ್‌ ಫಾರೂಕ್‌(45) ಎಂಬಾತನನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.

19 ವರ್ಷದ ಯುವತಿ ಪಾಂಡೇಶ್ವರದ (Pandeshwara) ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ (Office) ಕೆಲಸಕ್ಕಿದ್ದಳು. ಆಕೆಯನ್ನು ಆರೋಪಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ, ವಾಟ್ಸಪ್‌ನಲ್ಲಿ(Whatsapp) ನಗ್ನ ಚಿತ್ರಗಳನ್ನು ಕಳುಹಿಸಿ, ತನ್ನೊಂದಿಗೆ ಸಹಕರಿಸುವಂತೆ ಒತ್ತಾಯ ಪಡಿಸುತ್ತಿದ್ದ. ಅಲ್ಲದೆ, ನಿನ್ನ ನಗ್ನ ಚಿತ್ರವನ್ನು ಕಳುಹಿಸುವಂತೆ ಆರೋಪಿ ಒತ್ತಾಯಿಸುತ್ತಿದ್ದ. ಇದಕ್ಕೆ ಸೊಪ್ಪು ಹಾಕದ ಯುವತಿ, ಆತನಿಂದ ದೂರವಿದ್ದಳು. ಈ ನಡುವೆ ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಆರೋಪಿ ಆಕೆಯ ಮೈಗೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಳಿಕ ಕೆಲಸವನ್ನೇ (Work) ಬಿಟ್ಟು ತೆರಳಿದ್ದ ಯುವತಿ ಎರಡು ದಿನಗಳ ಹಿಂದೆ ಅಧಿಕಾರಿ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಗೆ ದೂರು (Complaint) ನೀಡಿದ್ದಾಳೆ.

ಯಾವುದು ಲೈಂಗಿಕ ಕಿರುಕುಳ? : ಯಾವಾಗ ದೂರು ನೀಡಬಹುದು..?

ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಬುಧವಾರ ರಾತ್ರಿ ಮೊಹಮ್ಮದ್‌ ಫಾರೂಕ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ 354 ಎ, 364 ಡಿ ಮತ್ತು 506 ಸೆಕ್ಷನ್‌ ಪ್ರಕಾರ ಕೇಸು ದಾಖಲಾಗಿದೆ. ಕಿರುಕುಳಕ್ಕೆ ಒಳಗಾದ ಸಂತ್ರಸ್ತೆ ಹೊರಗುತ್ತಿಗೆ ನೆಲೆಯಲ್ಲಿ ಪಾಂಡೇಶ್ವರದ ನಿಗಮದ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದಳು.

click me!