ಪ್ರತ್ಯೇಕ ಘಟನೆ: ನೀರಲ್ಲಿ ಮುಳುಗಿ ಮೂವರು ಮಕ್ಕಳ ಸಾವು!

By Ravi Janekal  |  First Published Mar 20, 2023, 9:27 AM IST

) ನದಿಯಲ್ಲಿ ಈಜಾಡಲು ಹೋಗಿದ್ದ ವೇಳೆ ಬಾಲಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡಿನಲ್ಲಿ ನಡೆದಿದೆ. 


ಮೈಸೂರು (ಮಾ.20) ನದಿಯಲ್ಲಿ ಈಜಾಡಲು ಹೋಗಿದ್ದ ವೇಳೆ ಬಾಲಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡಿನಲ್ಲಿ ನಡೆದಿದೆ.

ತಲಕಾಡು ಗ್ರಾಮದ ದೀಕ್ಷಿತ್ (16)ವರ್ಷ ಮೃತ ಬಾಲಕ. 10ನೇ ತರಗತಿ ಓದುತ್ತಿದ್ದ ದೀಕ್ಷಿತ್. ವೈಕುಂಠ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ಹಿನ್ನಲೆ. ಗೆಳೆಯರೊಂದಿಗೆ ಮಾಧವ ಮಂತ್ರಿ ಅಣೆಕಟ್ಟೆ ಬಳಿ ತೆರಳಿದ್ದ. ಈ ವೇಳೆ ಈಜು ಬಾರದಿದ್ದರೂ ಗೆಳೆಯರ ಜತೆಗೆ ನದಿಗೆ ಈಜಾಡಲು ನದಿಗೆ ಇಳಿದಾಗ ನಡೆದ ದುರ್ಘಟನೆ.

Latest Videos

undefined

Tumakuru: ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ- ಸೊಸೆ ನೀರಲ್ಲಿ ಮುಳುಗಿ ಸಾವು

ದೀಕ್ಷಿತ್ ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದ್ದ ಅಗ್ನಿಶಾಮಕ ದಳ ಸಿಬ್ಬಂದಿ. ನಿರಂತರ ಕಾರ್ಯಾಚರಣೆಯಿಂದ ತಡರಾತ್ರಿ ದೀಕ್ಷಿತ್ ಮೃತ ದೇಹ ಪತ್ತೆ.
ಈ ಸಂಬಂಧ ತಲಕಾಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಕೃಷಿ ಹೊಂಡದಲ್ಲಿ ಮುಳುಗಿ ಬಾಲಕರಿಬ್ಬರ ದುರ್ಮರಣ

ಹುಕ್ಕೇರಿ: ತಾಲೂಕಿನ ಯಾದಗೂಡ ಗ್ರಾಮ(Yadagooda village)ದಲ್ಲಿ ಭಾನುವಾರ ಸಂಜೆ ಕೃಷಿ ಹೊಂಡದಲ್ಲಿ ಮುಳುಗಿ ಬಾಲಕರಿಬ್ಬರು ಮೃತಪಟ್ಟಘಟನೆ ವರದಿಯಾಗಿದೆ.

ಯಾದಗೂಡದ ಯಶವಂತ (ಯೇಶು) ಬಸಪ್ಪಾ ವಗ್ಗರ(Yashavanth basappa vaggar) (14), ಗೋಕಾಕ ತಾಲೂಕಿನ ಬಡಿಗವಾಡದ ಯಮನಪ್ಪಾ ಪ್ರಕಾಶ ರಡ್ಡರಟ್ಟಿ(Yamanappa prakash reddy)(10) ಮೃತಪಟ್ಟದುರ್ದೈವಿಗಳು. ಸಂಜೆ 4.45ರ ಹೊತ್ತಿಗೆ ಈ ಬಾಲಕರಿಬ್ಬರು ಮನೆಯ ಸಮೀಪ ಸ್ನೇಹಿತರ ಜತೆಗೂಡಿ ಕ್ರಿಕೆಚ್‌ ಆಟ ಆಡುತ್ತಿದ್ದರು.

Uttara Kannada: ಈಜಲು ಹೋಗಿದ್ದ ಟಿಬೇಟಿಯನ್‌ ವಿದ್ಯಾರ್ಥಿಗಳು ನೀರುಪಾಲು

ಈ ಸಂದರ್ಭದಲ್ಲಿ ಪಕ್ಕದ ರಾಮಪ್ಪಾ ಜನ್ಮಟ್ಟಿಎಂಬುವರ ಹೊಲದಲ್ಲಿನ ಕೃಷಿ ಹೊಂಡಕ್ಕೆ ಚೆಂಡು ಬಿದ್ದಿದೆ. ಚೆಂಡು ತೆಗೆಯಲು ಕೃಷಿ ಹೊಂಡಕ್ಕೆ ಇಳಿದ ಯಮನಪ್ಪ ಮುಳುಗತೊಡಗಿದ್ದು, ಈತನನ್ನು ರಕ್ಷಿಸಲು ಯಶವಂತ ಮುಂದಾಗಿದ್ದಾನೆ. ಆದರೆ, ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಎಂ.ಎ.ತಹಸೀಲ್ದಾರ್‌, ಎಎಸ್‌ಐ ಸಿ.ಎಲ….ಗಸ್ತಿ, ಮುಖ್ಯಪೇದೆ ಆರ್‌.ಎಸ್‌.ಢಂಗ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಕುರಿತು ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

click me!