ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆಯ ಬಗ್ಗೆ ಹಿಂದೆ ಸರಿದಿದ್ದಾರೆಂದು ಕೋಲಾರದಲ್ಲಿ ವಿವಿಧ ಸಮುದಯಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಮಾ.21ರಂದು ವಿವಿಧ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ಸಿದ್ದರಾಮಯ್ಯನವರ ಮನೆಗೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದಾರೆ.
ಕೋಲಾರ : ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆಯ ಬಗ್ಗೆ ಹಿಂದೆ ಸರಿದಿದ್ದಾರೆಂದು ಕೋಲಾರದಲ್ಲಿ ವಿವಿಧ ಸಮುದಯಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಮಾ.21ರಂದು ವಿವಿಧ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ಸಿದ್ದರಾಮಯ್ಯನವರ ಮನೆಗೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಕೋಲಾರದಲ್ಲಿ ಭಾನುವಾರ ಪರಿಶಿಷ್ಠ ಜಾತಿ ಮತ್ತು ಪಂಗಡದ ಸಮುದಾಯದವರು ಮತ್ತು ಹಿಂದುಳಿದ ವರ್ಗ ಮತ್ತು ದಲಿತ ಮುಖಂಡರು ಪ್ರತ್ಯೇಕ ಸಭೆಗಳನ್ನು ನಡೆಸಿ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆಂದು ನಾವು 6 ತಿಂಗಳಿನಿಂದ ಪಕ್ಷವನ್ನು ಸಂಘಟನೆ ಮಾಡಿದ್ದೇವೆ, ವಿವಿದ ಪಕ್ಷಗಳಿಂದ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ, ಏಕಾ ಏಕಿ ಸ್ಪರ್ಧೆಯ ತೀರ್ಮಾನ ಬದಲಾವಣೆ ಮಾಡಿರುವುದರಿಂದ ನಮಗೆ ನೋವಾಗಿದೆ. ನಮ್ಮಿಂದ ತೊಂದೆಯಾಗಿದೆಯೆ ಎಂದು ತಿಳಿಸಲಿ ಅಲ್ಲಿಯ ತನಕ ನಾವು ಸಿದ್ದರಾಮಯ್ಯರ ಮನೆಯ ಮುಂದೆಯಿಂದ ಕದಲುವುದಿಲ್ಲ ಎಂದು ತೀರ್ಮಾನಿಸಿ ಮಾ.21 ರಿಂದ ಸಿದ್ದರಾಮಯ್ಯರ ಮನೆಗೆ ವಿವಿದ ಸಂಘಟನೆಗಳ ಹಾಗೂ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ಸೇರಿದಂತೆ ಸುಮಾರು 10 ಸಾವಿರ ಜನರು ಮುತ್ತಿಗೆ ಹಾಕಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
undefined
ಸೋಮವಾರ ಅಲ್ಪಸಂಖ್ಯಾತರ ಮುಖಂಡರು ಮತ್ತು ಒಕ್ಕಲಿಗ ಮುಖಂಡರು ಪ್ರತ್ಯೆಕವಾಗಿ ಪತ್ರಿಕಾ ಗೋಷ್ಠಿಗಳನ್ನು ನಡೆಸಿ ಮಾ.21 ರಂದು ಅಧಿಕ ಸಂಖ್ಯೆಯಲ್ಲಿ ಸಿದ್ದರಾಮಯ್ಯರ ಮನೆಗೆ ಮುತ್ತಿಗೆ ಹಾಕಲು ಕರೆ ನೀಡುತ್ತಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಆಕಾಂಕ್ಷಿಗಳ ಭರಾಟೆ ಹೆಚ್ಚಾಗತೊಡಗಿದೆ, ಬ್ಯಾಲಹಳ್ಳಿ ಗೋವಿಂದಗೌಡ ಸಿದ್ದರಾಮಯ್ಯ ಬರದಿದ್ದರೆ ನಾನೂ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ, ಬೆಂಗಳೂರಿನ ಶ್ರೀನಿವಾಸ್ ಸಹ ಭಾನುವಾರ ಕೋಲಾರ ಕ್ಷೆತ್ರದಲ್ಲಿ ಸುತ್ತಾಡಿ ಕೆಲವು ಮುಖಂಡರನ್ನು ಭೇಟಿ ಮಾಡಿ ನನಗೆ ಸ್ಪರ್ಧೆ ಮಾಡಲು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹಾಗು ಹೈಕಮಾಂಡ್ ತಿಳಿಸಿದೆ ಎಂದು ದಲಿತ ಮುಖಂಡರನ್ನು ಭೇಟಿ ಮಾಡಿ ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿ ಹೋಗಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿರುವುದು ನೋಡಿದರೆ ಇನ್ನೂ ಆಕಾಂಕ್ಷಿಗಳ ಪಟ್ಟಿಬೆಳೆಯುವ ಸಾಧ್ಯತೆ ಇದೆ.
ವರುಣಾದಿಂದ ಸಿದ್ದು ಸ್ಪರ್ಧೆ
ಮೈಸೂರು (ಮಾ.19): ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಸ್ಪರ್ಧೆ ಮಾಡುವುದು ಬೇಡವೆಂದು ಹೈಕಮಾಂಡ್ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂಬ ಸುಳಿವನ್ನು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಟಿ. ನರಸೀಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ 2-3 ದಿನಗಳಲ್ಲಿ ನಮ್ಮ ತಂದೆ (ಸಿದ್ದರಾಮಯ್ಯ) ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ತಮ್ಮ ನಿರ್ಧಾರ ತಿಳಿಸಿಲಿದ್ದಾರೆ. ಹೈ ಕಮಾಂಡ್ ಕೋಲಾರದಿಂದ ಕ್ಷೇತ್ರದಿಂದ ಸ್ಪರ್ಧೇ ಮಾಡದಂತೆ ಸಲಹೆ ನೀಡಿದ್ದಾರೆ. ಹೀಗಾಗಿ, ಹೈಕಮಾಂಡ್ ಮಾತು ಕೇಳಬೇಕಾಗುತ್ತದೆ ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಹೈಕಮಾಂಡ್ ಯಾಕೆ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಇದರ ಬಗ್ಗೆ ತಂದೆ ಅವರೇ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ವರುಣಾ ಬಿಟ್ಟು, ಪಾಕಿಸ್ತಾನ, ಅಪಘಾನಿಸ್ಥಾನಕ್ಕೆ ಹೋಗಿ ಸ್ಪರ್ಧಿಸಲಿ: ಆರ್. ಅಶೋಕ್
ಸಿದ್ದರಾಮಯ್ಯ ವರುಣ ಕ್ಷೇತ್ರಕ್ಕೆ ಬಂದರೆ ಬಿಟ್ಟುಕೊಡುವೆ: ಕೋಲಾರದಲ್ಲಿ ನಾನು ಸಹ 2 ಬಾರಿ ಆತಂರಿಕ ಸರ್ವೆ ಮಾಡಿಸಿದ್ದೇನೆ. ಸಿದ್ದರಾಮಯ್ಯ ಪರವಾಗಿ ಸರ್ವೆ ರಿಸಲ್ಟ್ ಬಂದಿದೆ. ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ. ಅವರಿಗೆ ಬಹು ಕ್ಷೇತ್ರ ಆಯ್ಕೆಗೆ ಅವಕಾಶ ಇರುವುದೇ ತೊಂದರೆ ಆಗಿರೋದು. ಒಂದು ವೇಳೆ ಸಿದ್ದರಾಮಯ್ಯ ವರುಣ ಕ್ಷೇತ್ರಕ್ಕೆ ಬಂದರೆ ನಾನು ಬಿಟ್ಟು ಕೊಡುವೆ. ನಾನು ಬೇರೆ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಲ್ಲ. ಬೇರೆ ಕ್ಷೇತ್ರವಾದರೂ ಅಲ್ಲಿನ ಸ್ಥಳೀಯ ಅಭ್ಯರ್ಥಿಗಳೇ ಕೆಲಸ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.
ವರುಣಾ ಕ್ಷೇತ್ರದ ಶಿಷ್ಟಾಚಾರ ಉಲ್ಲಂಘನೆ: ವರುಣ ಕ್ಷೇತ್ರದಲ್ಲಿ ಕಾಮಗಾರಿಗೆ ಕೆ.ಆರ್.ಕ್ಷೇತ್ರದಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಶಿಷ್ಟಾಚಾರ ಉಲ್ಲಂಘನೆ ಮಾಡಿ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಲಲಿತಾದ್ರಿಪುರ ಸರ್ವೇ ನಂ.15, 16, 17 ಮತ್ತು 18ರಲ್ಲಿ 163 ಕೋಟಿ ರೂ.ವೆಚ್ಚದಲ್ಲಿ 1,450 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಲಲಿತಾದ್ರಿಪುರದ ಕಾಮಗಾರಿಗೆ ದಸರಾ ವಸ್ತು ಪ್ರದರ್ಶನದಲ್ಲಿ ಶಂಕುಸ್ಥಾಪನೆ ಮಾಡಲಾಗುತ್ತಿದೆ. ವರುಣದಲ್ಲಿ ಮನೆ ನಿರ್ಮಾಣ ಆಗುವುದರಿಂದ ನನ್ನ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕಿತ್ತು. ಆದರೆ ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್ ಆತುರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
Suvarna special: ಸಿಎಂ ಬೊಮ್ಮಾಯಿಗೆ ಕೈ ಖೆಡ್ಡಾ..! ಹೇಗಿದೆ ಕಾಂಗ್ರೆಸ್ ಟಿಕೆಟ್ ವಾರ್..?
ಚುನಾವಣೆಗಾಗಿ ಬಿಜೆಪಿ ಸುಳ್ಳು ಹೇಳಿಕೆ: ಬಿಜೆಪಿ ನಾಯಕರು ಎಲೆಕ್ಷನ್‌ಗಾಗಿ ಜನರಿಗೆ ಸುಳ್ಳು ಭರವಸೆ ನೀಡಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. 2021-22ರಲ್ಲಿ ಭೂ ಸ್ವಾಧೀನ ಆಗಿತ್ತು. ಭೂ ಪರಿಹಾರದ ವಿಚಾರದಲ್ಲಿ ತಕರಾರುಗಳು ಇವೆ. ನ್ಯಾಯಾಲಯ ತಡೆಯಾಜ್ಞೆ ಕೊಟ್ಟಿದೆ. 22ರ ಜೂನ್‌ನಲ್ಲಿ ನಡೆದ ಮುಡಾ ಸಭೆಯಲ್ಲಿ ಸದರಿ ಜಾಗವನ್ನು ಪಾಲಿಕೆಗೆ ಹಸ್ತಾಂತರ ಮಾಡಲು ತೀರ್ಮಾನಿಸಲಾಗಿತ್ತು. ತಕರಾರು ತೆಗೆದವರಿಗೆ ಭೂ ಪರಿಹಾರ ಕೊಟ್ಟು ಮುಂದುವರಿಯಬೇಕಿತ್ತು. ಕೆ.ಆರ್.ಕ್ಷೇತ್ರದ ಫಲಾನುಭವಿಗಳಿಗೆ ಮಾತ್ರ ಆಯ್ಕೆ ಮಾಡಲಾಗಿದೆ. ವರುಣದವರನ್ನೂ ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ನಾನು ಪ್ರತಿಭಟನೆ ಮಾಡಿದ ಕಾರಣಕ್ಕೆ ಶಂಕುಸ್ಥಾಪನೆ ಜಾಗ ಬದಲಾವಣೆ ಮಾಡಿಕೊಂಡಿದ್ದಾರೆ.