ಮಾ. 23ರಂದು ಜರುಗುವ ಸಚಿವ ಸಂಪುಟದಲ್ಲಿ ಪಂಚಮಸಾಲಿ ಸಮಾಜದಕ್ಕೆ 2ಎ ಮೀಸಲಾತಿ ಸಿಗುವ ನಿರೀಕ್ಷೆ ಬಹುತೇಕವಾಗಿ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಕುಕನೂರು (ಮಾ.20) : ಮಾ. 23ರಂದು ಜರುಗುವ ಸಚಿವ ಸಂಪುಟದಲ್ಲಿ ಪಂಚಮಸಾಲಿ ಸಮಾಜದಕ್ಕೆ 2ಎ ಮೀಸಲಾತಿ ಸಿಗುವ ನಿರೀಕ್ಷೆ ಬಹುತೇಕವಾಗಿ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಇಟಗಿ ಯಲ್ಲಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ಅವರು, ರಾಣಿ ಚೆನ್ನಮ್ಮ ಮೂರ್ತಿ ಕರ್ನಾಟಕ ಪ್ರತಿ ಹಳ್ಳಿಗಳಲ್ಲಿ ನಿರ್ಮಾಣ ಆಗುತ್ತಿದೆ. ಭಾರತ ಭಾರತ ಆಗಿರುವಂತೆ ಮಾಡಿದವರ ಮೂರ್ತಿ ಅನಾವರಣ ಆಗುತ್ತಿವೆ. ಚೆನ್ನಮ್ಮ, ರಾಯಣ್ಣ, ಬಸವಣ್ಣ, ಛತ್ರಪತಿ ಶಿವಾಜಿ, ಬೆಳವಾಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಹೀಗೆ ಅನೇಕರ ಪ್ರೇರಣೆಯಿಂದ ಸಮಾಜ ಒಗ್ಗಟ್ಟಾಗಿದೆ. ನಮ್ಮ ಪಂಚಮಸಾಲಿ ಸಮಾಜ(Panchamasali community) ಎಲ್ಲಾ ಕಡೆಯಲ್ಲೂ ಇದೆ. ಪಂಚಮಸಾಲಿ ಸಮಾಜದ ಅನ್ನುವುದು 70% ಇದೆ. ಸಮಾಜದವರನ್ನು ಕೈ ಬಿಡಬಾರದು ಎಂದು ಶೋಭಾ ಕರಂದ್ಲಾಜೆ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದಾರೆ.
undefined
'ಸಾಬ್ರಿಗೆ ವೋಟ್ ಹಾಕ್ಬಾರ್ದು' ಎಂಬ ಯತ್ನಾಳ್ ಹೇಳಿಕೆಗೆ ತಿರುಗೇಟು ಕೊಟ್ಟ ಪ್ರಿಯಾಂಕ್ ಖರ್ಗೆ
ನಾನು ಸಹ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit shah)ಹಾಗು ಪ್ರಧಾನಿ ಮೋದಿ(PM Narendra Modi) ಹಾಗು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ(JP Nadda) ಅವರ ಗಮನಕ್ಕೆ ತಂದಿದ್ದೇನೆ. ಅಲ್ಲದೇ ಅವರನ್ನು ಭೇಟಿ ಸಹ ಮಾಡಿದ್ದೇನೆ. ಅಲ್ಲದೆ ಸಿಎಂ ಬೊಮ್ಮಾಯಿ(CM Basavaraj bommai) ಗೆ ಸುಳ್ಳು ಹೇಳಿದರೆ ಆಗುವುದಿಲ್ಲ. ಮೀಸಲಾತಿ ನೀಡಿ ಎಂದು ಹೇಳಿದ್ದೇನೆ. ಜಾತಿಗಳಿಗೆ ತೊಂದರೆ ಆಗುತ್ತದೆ ಅಂದರೆ ನಮಗೆ 2ಎ ಬೇಡ ಪ್ರತ್ಯೇಕ ಮೀಸಲಾತಿ ನೀಡಿ,ಮಾ. 23 ರವರೆಗೆ ಕಾಯುತ್ತೇವೆ. ಸಮಾಜದ ಹೆಸರು ಹೇಳಿಕೊಂಡು ಕೆಲವರು ಸಾವಿರಾರು ಕೋಟಿ ಮಾಡಿಕೊಳ್ಳುತ್ತಾರೆ. ಕೆಲವರಿದ್ದಾರೆ ಜನ ನನ್ನನ್ನು ಭಾವಿ ಸಿಎಂ ಅನ್ನೊದು ಅವರಿಗೆ ನುಂಗಲಾರದ ತುಪ್ಪ ಆಗಿದೆ. ಅವ್ರು ಮಕ್ಕಳನ್ನು ಬೆಳೆಸುತ್ತಿದ್ದಾರೆ. ಈಗ ನಮ್ಮ ಕೇಸ್ ಪ್ರಧಾನಿ ಅವರ ಟೆಬಲ್ ಮೇಲೆ ಇದೆ. ಅಲ್ಲಿಂದ ಸಿಎಂ ಬೊಮ್ಮಾಯಿ ಗೆ ಪೋನ್ ಬರುತ್ತೆ, ದೆಹಲಿಯಲ್ಲಿ ಪಂಚಮಸಾಲಿ ಬಗ್ಗೆ ಹಿರಿಯರು ಸಹ ಕಾಳಜಿ ವಹಿಸಿದ್ದಾರೆ ಎಂದರು.
ಹಾಲುಮತ ಸಮಾಜದ ಮೀಸಲಾತಿಗೆ ಧ್ವನಿ ಎತ್ತಿದೆ. ಎಸ್ಸಿ ಎಸ್ಟಿ ಅವರಿಗೆ ನಾವು ಧ್ವನಿ ಎತ್ತಿದ್ದರಿಂದ ಮೀಸಲಾತಿ ಹೆಚ್ಚಿತು. ಎಲ್ಲಾ ಸಮಾಜಕ್ಕೆ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದೇವೆ. ಒಕ್ಕಲಿಗರ ಒಬಿಸಿ ಹೋರಾಟಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಂದ ತಿಲಾಂಜಲಿ ಆಯಿತು. ಆದ್ರೆ ಜಯಮೃತ್ಯುಂಜಯ ಸ್ವಾಮೀಜಿ ಅವರಿಂದ ಪಂಚಮಸಾಲಿ ಗಟ್ಟಿ ನಿಲುವು ನಮ್ಮದಾಗಿದೆ. ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಇನ್ನೂ ಅಧ್ಯಯನ ದಲ್ಲೆ ಕಾಲಹರಣ ಮಾಡುತ್ತಿದ್ದಾರೆ. ನಮ್ಮಲ್ಲಿ ಕೆಲವರು ಚೆನ್ನಮ್ಮ ಗೆ ಮೋಸ ಮಾಡಿದ ಹಾಗೆ ಮೀಸಲಾತಿ ಹೋರಾಟಕ್ಕೆ ಮೋಸ ಮಾಡುತ್ತಿದ್ದಾರೆ. ಎಸಿ ಕಾರು, ಮನೆಯಲ್ಲಿ ಇದ್ದು ಕೆಲವರು ಡಾಂಬೀಕತೆ ಮಾಡುತ್ತಿದ್ದಾರೆ. ಉಳಿದ ಸಮಾಜಕ್ಕೂ ಮೀಸಲಾತಿ ಸಿಗಲಿ. 2ಎ ದಲ್ಲಿ 102 ಉಪಜಾತಿಗಳಲ್ಲಿ 9% ಮೀಸಲಾತಿ ಇದ್ದು, ನಮಗೆ 6% ಮೀಸಲಾತಿ ಕೊಡಿ ಸಾಕು ಅಷ್ಟೇ ಎಂದರು.
ಜಯಮೃತ್ಯುಂಜಯ ಸ್ವಾಮೀಜಿ(Jayamrityunjaya swamiji) ಗಟ್ಟಿಯಾಗಿ ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆ, ಉಪವಾಸ ಸತ್ಯಾಗ್ರಹ ಮೂಲಕ ಮೀಸಲಾತಿ ಹೋರಾಟ ಜರುಗುತ್ತಿದೆ. ಪಂಚಮಸಾಲಿ ಸಮಾಜದ ಮೊದಲ ಅಧಿವೇಶನ ಯಲಬುರ್ಗಾದಲ್ಲಿ ಜರುಗಿತು. ಮೀಸಲಾತಿ ಕೀರ್ತಿ ಯಲಬುರ್ಗಾಕ್ಕೆ ಸಲ್ಲುತ್ತದೆ. ಪ್ರಧಾನಿ ಮೋದಿ ಅವರು ಬಾ ಅಂದಿದ್ದಾರೆ. ರಾಜ್ಯದಲ್ಲಿ ಪ್ರತಿ ಕ್ರೇತ್ರದಲ್ಲಿ ಲಕ್ಷ ಮತದಾರರಿದ್ದಾರೆ. ನಮ್ಮ ಶಕ್ತಿ ತೋರಿಸುತ್ತೇವೆ. ಸಚಿವ ಸಂಪುಟದಲ್ಲಿ ಮೀಸಲಾತಿ ಸಿಗುವ ಬಹುತೇಕ ನಿರೀಕ್ಷೆ ಇದೆ ಎಂದರು.
ಸಂಸದ ಸಂಗಣ್ಣ ಕರಡಿ (MP Sanganna karadi)ಮಾತನಾಡಿ, ಬ್ರಿಟಿಷ್ ದಾಸ್ಯತ್ವ ಕಿತ್ತು ಎಸೆಯುವ ಕೆಲಸ ಚೆನ್ನಮ್ಮ ಮಾಡಿದರು. ಠಾಕ್ರೆ ರುಂಡ ಚಂಡಾಡಿದರು. ಇತಿಹಾಸ ತಿಳಿದು ಇತಿಹಾಸ ಸೃಷ್ಟಿಸಬೇಕು. ಆ ನಿಟ್ಟಿನಲ್ಲಿ ಇಟಗಿ ಯಲ್ಲಿ ರಾಣಿ ಚೆನ್ನಮ್ಮ ಮೂರ್ತಿ ಅನಾವರಣ ಆಗಿದೆ. ರೈತಾಪಿ ವರ್ಗದ ಸಮಾಜ ಪಂಚಮಸಾಲಿ. ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಬೇಕು. ಜಯಮೃತ್ಯುಂಜಯ ಸ್ವಾಮೀಜಿ 700 ಕಿ.ಮಿ ನಡಿಗೆ ಹಿಂದೆ ಗಾಂಧೀಜಿ ಕರೆಕೊಟ್ಟ ಆಂಧೋಲನದಂತೆ ಜನ ಹರಿದು ಬರುತ್ತದೆ. ಸರ್ ಸಿದ್ದಪ್ಪ ಕಂಬಳಿ, ರುದ್ರಗೌಡ ಅಂಬೇಡ್ಕರ್ ಅವರಿಗೆ ಪ್ರಾಧ್ಯಾಪಕ ಸ್ಥಾನ ನೀಡಿತು. ಹಾಗೆ ಬಸವಣ್ಣನವರ ವಚನಗಳನ್ನು ರಕ್ಷಣೆ ಮಾಡಿದ ಕೀರ್ತಿ ಪಂಚಮಸಾಲಿ ಸಮಾಜಕ್ಕೆ ಸಲ್ಲುತ್ತದೆ. ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ರಾಷ್ಟ್ರ ಅಭಿವೃದ್ಧಿ ಆಗುತ್ತಿದೆ. ಶ್ರೀಗಳು ಪ್ರೀಡಂ ಪಾರ್ಕಿನಲ್ಲಿ ಹೋರಾಡುತ್ತಿದ್ದಾರೆ. ಪಂಚಮಸಾಲಿ ಸಮಾಜವನ್ನು ಬಿಎಸ್ವೈ ಜಾತಿ ಪಟ್ಟಿಯಲ್ಲಿ ಸೇರಿಸಿದರು. 2ಎ ಮೀಸಲಾತಿಗೆ ಸಿಎಂ ಬೊಮ್ಮಾಯಿ ಶ್ರಮ ಪಡುತ್ತಿದ್ದಾರೆ. ಮಾ.23 ಕ್ಕೆ ನಡೆವ ಸಚಿವ ಸಂಪುಟದಲ್ಲಿ ಮೀಸಲಾತಿ ಸಿಗಲಿ ಎಂದರು.
ಸಮಾಜದ ರಾಜ್ಯದ ಮಾಜಿ ಅಧ್ಯಕ್ಷ ಬಸವರಾಜ ದಿಂಡೂರು ಮಾತನಾಡಿ, ಚೆನ್ನಮ್ಮ ಮೂರ್ತಿ ಅನಾವರಣ ಹೊಸ ಮೈಲಿಗಲ್ಲು. ಇಲ್ಲಿಯವರು ಸ್ಥಾಪಿಸಿದ ಪಂಚಮಸಾಲಿ ಸಮಾಜ ರಾಷ್ಟ್ರ ಮಟ್ಟದಲ್ಲಿ ಬೆಳೆದಿದೆ. ಮಠದ ಸುತ್ತ ಹಾವೊಂದು ಸುತ್ತುತ್ತಿತ್ತು. ಹಾವಿಗೆ ಕಚ್ಚ ಬೇಡ ಎಂದು ಸ್ವಾಮೀಜಿಯೊಬ್ಬರು ಹೇಳಿದರು. ಹಾವನ್ನು ಸಿಂಬೆ ಮಾಡಿಕೊಂಡು ಜನ ಕಟ್ಟಿಗೆ ಹೊತ್ತರು. ಹಾವು ಸೊರಗಿತ್ತು.ಹಾಗಾಗೀತ್ತು ನಮ್ಮ ಸ್ಥೀತಿ. ಎಲ್ಲಾ ಸಿಎಂಗೂ ಬೆಂಬಲ ನೀಡಿದೆವು. ಕಚ್ಚುವುದಿರಲಿ ನಾವು ಬುಸ್ ಅಂದಿದ್ದರೆ ಸಮಾಜಕ್ಕೆ ನ್ಯಾಯ ದೊರಕುತ್ತಿತ್ತು. ಈ ಬಾರಿ ಚುನಾವಣೆಯಲ್ಲಿ ಸಮುದಾಯದವರು ಶಕ್ತಿ ತೋರಿಸಿ. ವೋಟ್ ಕೇಳುವವರಿಗೆ 2ಎ ಮೀಸಲಾತಿಗೆ ನೀವು ಸಹಕಾರ ನೀಡಿದ್ದೀರಾ ಎಂದು ಕೇಳಿ, ಅವರಿಲ್ಲ ಅಂದರೆ ನಾವು ಹೇಳ್ತೀವಿ ಹಾಗೆ ಮಾಡಿ ಎಂದರು. ಯಲಬುರ್ಗಾ ಪಂಚಮಸಾಲಿ ಸಮಾಜದ ತವರು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣವರ್ ಮಾತನಾಡಿ, ರಾಣಿ ಚೆನ್ನಮ್ಮನವರು ಸ್ವಾತಂತ್ರ್ಯ ಕ್ಕೆ ಅನೇಕ ಸವಾಲು ಎದುರಿಸರು. ಆ ತಾಯಿ ನೆನೆದರೆ ಕಷ್ಟ ದೂರವಾಗುತ್ತವೆ. ಪಂಚಮಸಾಲಿ ಸಮಾಜದವರು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ. ಇಟಗಿ ಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿ ಅನಾವರಣ ಮಾಡಿರುವುದು ನಮ್ಮೆಲ್ಲರ ಪುಣ್ಯದ ಫಲ ಎಂದರು.
ಪ್ರಾಸ್ತಾವಿಕ ಮಾತನಾಡಿದ ಕೊಟ್ರಪ್ಪ ತೋಟದ, ಪಂಚಮಸಾಲಿ ಸಮಾಜದವರು ರಾಜಕೀಯ ಪರ್ವತ ಸಾಮಾರ್ಥ್ಯ ಹೊಂದಿದವರು. ಈ ಸಮಾಜ ರೈತಾಪಿ ವರ್ಗದ ಸಮಾಜ ಎಂದರು.
ಮುಖಂಡ ವೀರಣ್ಣ ಹುಬ್ಬಳ್ಳಿ ಮಾತನಾಡಿ, ರಾಜ್ಯದಲ್ಲಿ ಪ್ರಥಮ ಬಾರಿಗೆ 1994ರಲ್ಲಿ ಪಂಚಮಸಾಲಿ ಸಮಾಜ ಯಲಬುರ್ಗಾ ದಲ್ಲಿ ಸ್ಥಾಪನೆ ಆಯಿತು. ಬಿಜಿ ಕೊಟ್ರಪ್ಪ, ಶ್ರೀಪಾದಕ್ಕ ಅಧಿಕಾರಿ, ಮುನೀಯಪ್ಪ ಹುಬ್ಬಳ್ಳಿ, ರೊಕ್ಕಪ್ಪ ಆರೇರ, ಸಂಗಪ್ಪ ಸೊರಟೂರು, ಅಂದಾನಗೌಡ ಉಳ್ಳಾಗಡ್ಡಿ, ಮರೀಯಪ್ಪ ಹಳ್ಳಿ ಅನೇಕರು ಸಮಾಜ ಸ್ಥಾಪನೆಗೆ ಶ್ರಮಿಸಿದರು. ಅಲ್ಲಿಂದ ರಾಜ್ಯದಲ್ಲಿ ಪಂಚಮಸಾಲಿ ಸಮಾಜ ಇರುವಿಕೆ ರಾಜ್ಯಕ್ಕೆ ತಿಳಿಯಿತು. ಸಮಾಜಕ್ಕೆ 2ಎ ಮೀಸಲಾತಿ ಅವಶ್ಯಕ ಇದೆ. ಕಿತ್ತೂರು ರಾಣಿ ಚೆನ್ನಮ್ಮನ ವಂಶದಲ್ಲಿ ಬೆಳೆದ ಪಂಚಮಸಾಲಿ ಸಮಾಜ ಬೃಹತ್ ಆಲದ ಮರ ಆಗಿ ಸಚಿವ ಎಸ್.ಆರ್ ಕಾಶಪ್ಪನವರ್ ನೇತೃತ್ವದಲ್ಲಿ ಬೆಳೆದಿದೆ. ಎಸ್.ಆರ್ ಕಾಶಪ್ಪನವರ್ ಅವರು ಸಮಾಜಕ್ಕೊಸ್ಕರ ರಾಜಿನಾಮೆ ನೀಡಿದರು. ಪಂಚಪೀಠಾಧೀಗಳ ತಾರತಮ್ಯ ಭಾವನೆಯಿಂದ ಪಂಚಮಸಾಲಿ ಮಹಾಪೀಠ ಎಸ್.ಆರ್ ಕಾಶಪ್ಪನವರ್ ನೇತೃತ್ವದಲ್ಲಿ ಸ್ಥಾಪನೆ ಆಯಿತು. ಸದ್ಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗು ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮೀಸಲಾತಿಗೆ ಬೃಹತ್ ಪಾದಯಾತ್ರೆ ಜರುಗಿದೆ. ಉಪವಾಸ ಸತ್ಯಾಗ್ರಹ ಜರುಗುತ್ತಿದೆ ಎಂದರು.
ಬಿಜೆಪಿ ನೋಟಿಸ್ ತೋರಿಸಿದ್ರೆ 10 ಲಕ್ಷ ಕೊಡುವೆ: ಯತ್ನಾಳ್
ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸನಗೌಡ ತೊಂಡಿಹಾಳ, ಮಾಜಿ ಅಧ್ಯಕ್ಷ ಬಸಲಿಂಗಪ್ಪ ಭೂತೆ, ಕುಕನೂರು ತಾಲೂಕು ತಾಲೂಕಾಧ್ಯಕ್ಷ ವೀರಣ್ಣ ಅಣ್ಣಿಗೇರಿ, ಯಲಬುರ್ಗಾದ ತಾಲೂಕು ಅಧ್ಯಕ್ಷ ಕೆಜಿ ಪಲ್ಲೇದ, ಕೊಪ್ಪಳ ತಾಲೂಕಾಧ್ಯಕ್ಷ ಕರೀಯಪ್ಪ ಮೇಟಿ, ಬಿಜಾಪುರ ಜಿಲ್ಲಾ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಹಾಗು ರಾಜ್ಯ ದ್ರಾಕ್ಷಿ ಬೆಳೆಗಾರ ಸಂಘದ ಅಧ್ಯಕ್ಷ ರುದ್ರಗೌಡ ಪಾಟೀಲ್, ಮುಖಂಡರಾದ ಬಸವರಾಜ ದಿಂಡೂರ, ಇಟಗಿಯ ಪಂಚಮಸಾಲಿ ಸಮಾಜದ ಶರಣಪ್ಪ ಹಳ್ಳಿ, ಪ್ರಮುಖರಾದ ಕಳಕನಗೌಡ ಪಾಟೀಲ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣವರ್, ವೀರಣ್ಣ ಹುಬ್ಬಳ್ಳಿ, ಗ್ರಾಪಂ ಅಧ್ಯಕ್ಷ ಪ್ರಭು ಹಳ್ಳಿ, ಅಶೋಕ ತೋಟದ, ಬಸವರಾಜ ಹಳ್ಳಿ, ಬಸವರಾಜ ಉಳ್ಳಾಗಡ್ಡಿ, ಸಾಹಿತಿಗಳಾದ ಬಿ.ಎಮ್ ಹಳ್ಳಿ, ಡಾ.ಕೆ.ಬಿ ಬ್ಯಾಳಿ,ಕೊಟ್ರಪ್ಪ ತೋಟದ, ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೆಲೇರಿ, ತಾಪಂ ಮಾಜಿ ಅಧ್ಯಕ್ಷ ಬಸವಪ್ರಭು ಪಾಟೀಲ್, ದೊಡ್ಡಬಸಪ್ಪ ಭಾವಿಮನಿ, ವಿಶ್ವನಾಥ ಮರಿಬಸಪ್ಪನವರ್,ಮಹೇಶ ದಾಸರ, ವೀರಣ್ಣ ಹಳ್ಳಿಕೇರಿ, ರಾಜಶೇಖರ ಹಳ್ಳಿ, ಬಸವಂತಪ್ಪ ಮಹಾಂತ್, ಸಮಾಜದ ಬಾಂದವರಿದ್ದರು.