ಚಿಕ್ಕಬಳ್ಳಾಪುರದಲ್ಲಿ ಮೋದಿ ಹವಾ: ಸರ್ ಎಂ. ವಿಶ್ವೇಶ್ವರಯ್ಯ ಸಮಾಧಿಗೆ ಶಿರಬಾಗಿ ನಮಿಸಿದ ನಮೋ

By BK Ashwin  |  First Published Mar 25, 2023, 12:05 PM IST

ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ಮೋದಿ ಶ್ರೀ ಮಧುಸೂಧನ್‌ ಸಾಯಿ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಅಂಡ್‌ ರೀಸರ್ಚ್‌ ಕಾಲೇಜನ್ನು ಉದ್ಘಾಟಿಸುತ್ತಿದ್ದು, ಈ ಕಾಲೇಜು ಅನೇಕ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಮೆಡಿಕಲ್‌ ಕಾಲೇಜು ಉದ್ಘಾಟನೆ ಮಾಡಲು ಆಗಮಿಸಿದ್ದು, ಮಂತ್ರಘೋಷಗಳ ಮೂಲಕ ಸ್ವಾಗತ ನೀಡಲಾಯ್ತು.


ಚಿಕ್ಕಬಳ್ಳಾಪುರ (ಮಾರ್ಚ್‌ 25, 2023): ರಾಜ್ಯದಲ್ಲಿ ಇಂದು 3 ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ ಮಿಂಚಿನ ಸಂಚಾರ ನಡೆಸಲಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲದೆ ಚುನಾವಣಾ ಭಾಷಣವನ್ನೂ ಮಾಡಲಿದ್ದಾರೆ. ಮೊದಲಿಗೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಭಾರತ ರತ್ನ ಪ್ರಶಸ್ತಿ ವಿಜೇತ ಸರ್‌. ಎಂ. ವಿ. ವಿಶ್ವೇಶ್ವರಯ್ಯ ಅವರ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಸರ್‌ ಎಂ ವಿ ನಾಡಿನಲ್ಲಿ ಚುನಾವಣೆ ಕಹಳೆ ಮೊಳಗಿಸಿದ ಪ್ರಧಾನಿ ಮೋದಿ, ಸರ್‌ ಎಂ. ವಿಶ್ವೇಶ್ವರಯ್ಯ ಅವರ ಸ್ಮಾರಕಕ್ಕೆ ಶಿರಬಾಗಿ ನಮಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಾಥ್‌ ನೀಡಿದ್ದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಬಳಿ ಇರುವ ಸರ್‌ ಎಂ. ವಿಶ್ವೇಶ್ವರಯ್ಯ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಈ ವೇಳೆ ಪ್ರಧಾನಿ ಮೋದಿ ಅವರ ಸ್ಮಾರಕಕ್ಕೆ ಶಿರಬಾಗಿ ನಮಿಸಿದ್ರು. ಸಿಎಂ ಬಸವರಾಜ ಬೊಮ್ಮಾಯಿ ಸಹ ಸ್ಮಾರಕಕ್ಕೆ ನಮಿಸಿದ್ರು. 

Tap to resize

Latest Videos

ಇದನ್ನು ಓದಿ: ರಾಜ್ಯದಲ್ಲಿಂದು ಪ್ರಧಾನಿ ಮೋದಿ ಹವಾ: ಇಂದು ರಾಜ್ಯದ 3 ಜಿಲ್ಲೆಗಳಲ್ಲಿ ಕೇಸರಿ ರಣ ಕಹಳೆ..!

ನಂತರ, ಭಾರತ ರತ್ನ ಪ್ರಶಸ್ತಿ ವಿಜೇತ ಸರ್‌. ಎಂ. ವಿಶ್ವೇಶ್ವರಯ್ಯ ಅವರ ಮನೆಗೆ ಸಹ ಮೋದಿ ಭೇಟಿ ನೀಡಿದ್ರು. ಮನೆಯಲ್ಲೇ ಇರುವ ವಸ್ತು ಸಂಗ್ರಹಾಲಯವನ್ನು ಸಹ ಮೋದಿ ಹಾಗೂ ಬೊಮ್ಮಾಯಿ ವೀಕ್ಷಣೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ಮೋದಿ ಶ್ರೀ ಮಧುಸೂಧನ್‌ ಸಾಯಿ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಅಂಡ್‌ ರೀಸರ್ಚ್‌ ಕಾಲೇಜನ್ನು ಉದ್ಘಾಟಿಸುತ್ತಿದ್ದು, ಈ ಕಾಲೇಜು ಅನೇಕ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಮೆಡಿಕಲ್‌ ಕಾಲೇಜು ಉದ್ಘಾಟನೆ ಮಾಡಲು ಆಗಮಿಸಿದ್ದು, ಮಂತ್ರಘೋಷಗಳ ಮೂಲಕ ಸ್ವಾಗತ ನೀಡಲಾಯ್ತು.

ಇದನ್ನೂ ಓದಿ: Chikkaballapur: ಶ್ರೀ ಮಧುಸೂದನ್‌ ಸಾಯಿ ಇನ್‌ಸ್ಟಿಟ್ಯೂಟ್ ಉಚಿತ ಆಸ್ಪತ್ರೆ ಇಂದು ಮೋದಿಯಿಂದ ಲೋಕಾರ್ಪಣೆ

ಚಿಕ್ಕಬಳ್ಳಾಪುರ ಬಳಿಕ ಪ್ರಧಾನಿ ಮೋದಿ ಮತ್ತೆ ಬೆಂಗಳೂರಿಗೆ ಆಗಮಿಸಲಿದ್ದು, ಈ ವೇಳೆ ವೈಟ್‌ಫೀಲ್ಡ್‌ - ಕೆ.ಆರ್‌. ಪುರ ನಡುವಣ ನಮ್ಮ ಮೆಟ್ರೋ ನೂತನ ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಮೆಟ್ರೋ ರೈಲಿನಲ್ಲೂ ಮೋದಿ ಪ್ರಯಾಣಿಸಲಿದ್ದು, ರೋಡ್‌ ಶೋ ಸಹ ನಡೆಸುವ ಸಾಧ್ಯತೆ ಇದೆ. 

ಬಳಿಕ, ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿಯಾಗುತ್ತಿದ್ದಾರೆ. ಮಧ್ಯ ಕರ್ನಾಟಕ ಭಾಗದ ದಾವಣಗೆರೆಯಲ್ಲಿ ಈ ಬೃಹತ್‌ ಸಮಾವೇಶ ನಡೆಯುತ್ತಿದ್ದು, ಈ ವೇಳೆ ಸುಮಾರು 10 ಲಕ್ಷ ಜನರು, ಬಿಜೆಪಿ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ. ಈ ವೇಳೆ, ಕಾರ್ಯಕರ್ತರ ಮಧ್ಯೆ ಪ್ರಧಾನಿ ಮೋದಿ ಹಾದು ಹೋಗಲಿದ್ದು, ಕೇಸರಿ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ. 

ಇದನ್ನೂ ಓದಿ: ಇಂದು ದಾವಣಗೆರೆಯಲ್ಲಿ ಮೋದಿ ಚುನಾವಣಾ ಪಾಂಚಜನ್ಯ: ಬಿಜೆಪಿ ಲ್ಯಾಂಡ್ ಮಾರ್ಕ್ ಆಗಲಿದೆಯಾ ಸಮಾವೇಶ?

click me!