ಮಳಲಿ ಮಸೀದಿಯ ಮಣ್ಣು ತೆಗೆದು ನೋಡಿ: SDPI ಮುಖಂಡನ ಬೆದರಿಕೆ ಹೇಳಿಕೆ ವೈರಲ್‌

By Kannadaprabha News  |  First Published May 29, 2022, 12:32 PM IST

*  ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಅಬ್ದುಲ್‌ ಮಜೀದ್‌
*  ಮಳಲಿ ಮಸೀದಿ ಬಿಡಿ, ಮಣ್ಣನ್ನು ಮುಟ್ಟಲೂ ಅವಕಾಶ ನೀಡುವುದಿಲ್ಲ
*  ಮಸೀದಿ ವಶಪಡಿಸುವ ಕನಸು ಇದ್ದರೆ ಅದು ನನಸಾಗದು 


ಮಂಗಳೂರು(ಮೇ.29):  ಮಳಲಿ ಮಸೀದಿಯ ಬಗ್ಗೆ ತಾಂಬೂಲ ಪ್ರಶ್ನೆ ಇರಿಸಿ ಜ್ಯೋತಿಷ್ಯ ಕೇಳಿದ ಹಿಂದು ಸಂಘಟನೆಗಳಿಗೆ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಬಹಿರಂಗ ಸವಾಲು ಹಾಕಿದ್ದಾರೆ. ನಿಮಗೆ ತಾಕತ್ತಿದ್ದರೆ ಮಳಲಿ ಮಸೀದಿಯ ಒಂದು ಹಿಡಿ ಮಣ್ಣು ತೆಗೆದು ನೋಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಅವರ ಈ ಭಾಷಣದ ವಿಡಿಯೋ ವೈರಲ್‌ ಆಗಿದೆ.

ಮಂಗಳೂರಿನ ಕಣ್ಣೂರಿನಲ್ಲಿ ಶುಕ್ರವಾರ ನಡೆದ ಎಸ್‌ಡಿಪಿಐ ಸಮಾವೇಶದಲ್ಲಿ ಮಳಲಿ ಮಸೀದಿ ವಿಚಾರದಲ್ಲಿ ಮಾತನಾಡಿದ ಅಬ್ದುಲ್‌ ಮಜೀದ್‌, ಮಳಲಿ ಮಸೀದಿಯನ್ನು ಬಿಡಿ, ಮಣ್ಣನ್ನು ಮುಟ್ಟಲೂ ಅವಕಾಶ ನೀಡುವುದಿಲ್ಲ. ಮಸೀದಿ ಯಾರ ಅಪ್ಪನ ಸೊತ್ತೂ ಅಲ್ಲ, ಈ ದೇಶ ನಮ್ಮದು, ದೇಶಕ್ಕಾಗಿ ನಾವು ರಕ್ತ, ಪ್ರಾಣವನ್ನೂ ಕೊಟ್ಟಿದ್ದೇವೆ. ಮಸೀದಿ ವಶಪಡಿಸುವ ಕನಸು ಇದ್ದರೆ ಅದು ನನಸಾಗದು ಎಂದು ಉಗ್ರವಾಗಿ ಮಾತನಾಡಿದರು.

Tap to resize

Latest Videos

Hijab Row: 'ಹಿಜಾಬ್‌ಧಾರಿಗಳಿಗೆ ತರಗತಿ ಪ್ರವೇಶ ಇಲ್ಲ'

ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಅಬ್ದುಲ್‌ ಮಜೀದ್‌, ಮಳಲಿ ಮಸೀದಿ ಬಗ್ಗೆ ತಾಂಬೂಲ ಪ್ರಶ್ನೆ ಇಡುವವರು ಮೊದಲು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಬಾಂಬ್‌ ಇಟ್ಟು ಒಡೆದು ಹಾಕಿದ ಸುಗ್ಗಮ್ಮ ದೇವಸ್ಥಾನದ ಬಗ್ಗೆ ತಾಂಬೂಲ ಪ್ರಶ್ನೆ ಇರಿಸುವಂತೆ ತಿರುಗೇಟು ನೀಡಿದ್ದಾರೆ.

ಕರಾವಳಿ ದೇವಸ್ಥಾನಗಳ ಮೂಲ ಬೌದ್ಧಮಂದಿರ!:

ಇದೇ ರೀತಿ ಎಸ್‌ಡಿಪಿಐ ಸಮಾವೇಶದಲ್ಲಿ ರಾಜ್ಯ ಕಾರ್ಯದರ್ಶಿ ಭಾಸ್ಕರ ಪ್ರಸಾದ್‌ ಕೂಡ ಮಾತನಾಡಿರುವುದು ಕೂಡಾ ವೈರಲ್‌ ಆಗಿದೆ. ಕರಾವಳಿಯಲ್ಲಿ ಇರುವ ಪ್ರಮುಖ ದೇವಸ್ಥಾನಗಳ ಮೂಲ ಬೌದ್ಧಮಂದಿರ. ಅವುಗಳ ಬಗ್ಗೆ ದಾಖಲೆ ಇದೆ. ನೀವು(ಹಿಂದೂಗಳು) ಮಸೀದಿ ಕೇಳಿದರೆ, ನಾವು(ಎಸ್‌ಡಿಪಿಐ) ದೇವಸ್ಥಾನಗಳನ್ನು ಕೇಳುತ್ತೇವೆ. ಎನ್‌ಇಪಿಯನ್ನು ಕಾಂಗ್ರೆಸ್‌ ವಿರೋಧಿಸಿಲ್ಲ, ಎಸ್‌ಡಿಪಿಐ ಮಾತ್ರ ವಿರೋಧಿಸಿದೆ ಎಂದು ನೆನಪಿಸಿದರು.

ಪೊಲೀಸರ ನಿಂದಿಸಿ ಘೋಷಣೆ ಕೂಗಿದ ಸವಾರರು!

ಎಸ್‌ಡಿಪಿಐ ಸಮಾವೇಶಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಸವಾರರು ಪೊಲೀಸರನ್ನು ನಿಂದಿಸುವ ಘೋಷಣೆ ಕೂಗುತ್ತಿರುವ ವೀಡಿಯೋ ತುಣುಕು ಕೂಡ ವೈರಲ್‌ ಆಗಿದೆ.

ಎಸ್‌ಡಿಪಿಐ ಬಾವುಟ ಹಿಡಿದುಕೊಂಡು ಹೆಲ್ಮೆಟ್‌ ರಹಿತವಾಗಿ ಸವಾರಿ ನಡೆಸುತ್ತಿರುವ ಇಬ್ಬರು ಸವಾರರು ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದಾರೆ. ಆಗ ಸಮೀಪದಲ್ಲೇ ಸಂಚರಿಸುತ್ತಿದ್ದ ಯುವಕರೂ ದನಿಗೂಡಿಸಿದ್ದಾರೆ. ಈ ಸವಾರರು ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿ ಘೋಷಣೆ ಹಾಕಿದ್ದಾರೆ. ಅಡ್ಯಾರಿನಲ್ಲಿ ಸಮಾವೇಶ ಮುಗಿಸಿ ವಾಪಸ್‌ ತೊಕ್ಕೊಟ್ಟಿಗೆ ತೆರಳುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಶುಕ್ರವಾರ ಮಂಗಳೂರಿಗೆ ಆಗಮಿಸಿದ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್‌ ಕುಮಾರ್‌ ಅವರು, ಪೊಲೀಸ್‌ ನಿಂದನೆ ಕಂಡುಬಂದರೆ ಠಾಣೆಗೆ ಕರೆಸಿ ಕೇಸು ದಾಖಲಿಸುವಂತೆ ಸೂಚನೆ ನೀಡಿದ್ದರು, ಇದರ ಬೆನ್ನಿಗೇ ಪೊಲೀಸ್‌ ನಿಂದನೆಯ ವಿದ್ಯಮಾನ ನಡೆದಿದೆ.

ಮಳಲಿ ಮಸೀದಿ ಬಗ್ಗೆ ಎಸ್‌ಡಿಪಿಐ ಏನು?: ಶಾಸಕ ವೇದವ್ಯಾಸ ಕಾಮತ್‌ ಪ್ರಶ್ನೆ

ಮಂಗಳೂರು: ಅಡ್ಯಾರಿನಲ್ಲಿ ಶುಕ್ರವಾರ ನಡೆದ ಎಸ್‌ಡಿಪಿಐ ಸಮಾವೇಶದಲ್ಲಿ ಮಳಲಿ ಮಸೀದಿಯಲ್ಲಿ ಗುರು ಮಠದ ಕುರುಹು ಪತ್ತೆಗೆ ಸಂಬಂಧಿಸಿ ಪಕ್ಷದ ಮುಖಂಡರ ಬೆದರಿಕೆ ಮಾತಿಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ತೀಕ್ಷ$್ಣ ಪ್ರತಿಕ್ರಿಯೆ ನೀಡಿದ್ದಾರೆ.

ಮಳಲಿ ಮಸೀದಿ ಉತ್ಖನನಕ್ಕೆ ಕೋರ್ಟ್‌ಗೆ ಅರ್ಜಿ?: ಕಾನೂನು ಹೋರಾಟಕ್ಕೆ ಮುಂದಾದ ಜಂಗಮ ಮಠ..!

ಎಸ್‌ಡಿಪಿಐ ಮುಖಂಡರು ಬಾಯಿಗೆ ಬಂದಂತೆ ಮಾತನಾಡುವ ಮೂಲಕ ಕೋಮು ಸಂಘರ್ಷಕ್ಕೆ ಕಾರಣರಾಗುತ್ತಿದ್ದಾರೆ. ಸ್ಥಳೀಯ ಮುಸ್ಲಿಮರು ಮಾತನಾಡದಿದ್ದಾಗ ಎಸ್‌ಡಿಪಿಐ ಮುಖಂಡರಿಗೆ ಏನು ಅಗತ್ಯವಿದೆ ಎಂದು ವೇದವ್ಯಾಸ ಕಾಮತ್‌ ಪ್ರಶ್ನಿಸಿದ್ದಾರೆ.

ಎಸ್‌ಡಿಪಿಐ ಶುರುವಾದ್ದೇ ಸ್ಥಾಪಿತ ಹಿತಾಸಕ್ತಿಗಳಿಂದ. ಅಲ್ಲಿಂದಲೇ ಸಮಸ್ಯೆ ಶುರುವಾಗಿದೆ. ಕರಾವಳಿ ಮಾತ್ರವಲ್ಲ ರಾಜ್ಯದ ಹಿತಾಸಕ್ತಿಗೆ ಎಸ್‌ಡಿಪಿಐ ಧಕ್ಕೆ ತರುತ್ತಿದೆ. ಪೊಲೀಸರ ವಿರುದ್ಧ ಘೋಷಣೆ ಕೂಗುವ ಮೂಲಕ ಮಾನಸಿಕತೆ ಕುಗ್ಗಿಸುವ ಕೆಲಸ ಮಾಡುತ್ತಿದೆ. ಇದಕ್ಕೆಲ್ಲ ಕಾರಣ ಆಗಿನ ಸಿಎಂ ಸಿದ್ದರಾಮಯ್ಯರ ಸರ್ಕಾರ. ಆಗ ಎಸ್‌ಡಿಪಿಐ ಮೇಲಿನ ಕೇಸುಗಳನ್ನು ವಾಪಸ್‌ ತೆಗೆದುಕೊಳ್ಳುವ ಮೂಲಕ ಅವರ ಬೆಂಬಲಕ್ಕೆ ಕಾಂಗ್ರೆಸ್‌ ನಿಂತಂತಾಗಿದೆ. ಅದೇ ಮಾನಸಿಕತೆಯಲ್ಲಿ ಕಾಂಗ್ರೆಸಿಗರು ಈಗ ಮಾತನಾಡುತ್ತಿದ್ದಾರೆ. ಮಳಲಿಯಲಿ ಗುರುಮಠದ ಕುರುಹು ಪತ್ತೆಗೆ ಸಂಬಂಧಿಸಿ ಅಲ್ಲಿನ ಶಾಸಕ ಡಾ.ಭರತ್‌ ಶೆಟ್ಟಿಹಾಗೂ ಹಿಂದೂ ಸಂಘಟನೆಗಳು ಬಹಳಷ್ಟುಕೆಲಸ ಮಾಡುತ್ತಿವೆ. ಮಸೀದಿಯ ಇತಿಹಾಸ ತಿಳಿಯಲು ತಾಂಬೂಲ ಪ್ರಶ್ನೆ ಇರಿಸಲಾಗಿದೆ. ಅದು ನಮ್ಮ ನಂಬಿಕೆಯ ಪ್ರಶ್ನೆಯಾಗಿದ್ದು, ಇದರಿಂದ ಸ್ಪಷ್ಟಮಾಹಿತಿ ಬಂದಿದೆ. ಅಲ್ಲಿನ ಸ್ಥಳೀಯ ಮುಸ್ಲಿಮರೇ ಮಾತನಾಡದೇ ಇರುವಾಗ ಎಸ್‌ಡಿಪಿಐ ರಾಜ್ಯಾಧ್ಯಕ್ಷರು ಯಾಕೆ ಶಾಂತಿ ಕದಡುವ ಯತ್ನಕ್ಕೆ ಕೈಹಾಕಬೇಕು? ಈಗಾಗಲೇ ದೇಶದಲ್ಲಿ ಅಯೋಧ್ಯೆ ಮಾದರಿಯಲ್ಲಿ ಜ್ಞಾನವ್ಯಾಪಿ ಮಸೀದಿ ಬಗ್ಗೆ ಕಾನೂನು ರೀತ್ಯಾ ಹೋರಾಟಗಳು ನಡೆಯುತ್ತಿವೆ ಎಂದಿದ್ದಾರೆ.
 

click me!