Council Election karnataka : ರಮೇಶ್‌ ಜಾರಕಿಹೊಳಿ ಒಬ್ಬ ಬಂಡುಕೋರ : ಹೆಬ್ಬಾಳ್ಕರ್‌ ಕಿಡಿ

Kannadaprabha News   | Asianet News
Published : Nov 29, 2021, 06:41 AM ISTUpdated : Nov 29, 2021, 07:07 AM IST
Council Election karnataka :   ರಮೇಶ್‌ ಜಾರಕಿಹೊಳಿ ಒಬ್ಬ ಬಂಡುಕೋರ : ಹೆಬ್ಬಾಳ್ಕರ್‌ ಕಿಡಿ

ಸಾರಾಂಶ

ಬೆಳಗಾವಿ ವಿಧಾನ ಪರಿಷತ್‌ ಚುನಾವಣೆ ಪ್ರಚಾರ ಬಿರುಸು ಪಡೆಯುತ್ತಿದ್ದಂತೆಯೇ  ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಗರಂ ರಮೇಶ್‌ ಜಾರಕಿಹೊಳಿ ಒಬ್ಬ ಬಂಡುಕೋರ ಎಂದು ಆರೋಪಿಸಿದ  ಲಕ್ಷ್ಮಿ ಹೆಬ್ಬಾಳ್ಕರ್‌

 ಬೆಳಗಾವಿ (ನ.29):  ಬೆಳಗಾವಿ ವಿಧಾನ ಪರಿಷತ್‌ ಚುನಾವಣೆ ಪ್ರಚಾರ ಬಿರುಸು ಪಡೆಯುತ್ತಿದ್ದಂತೆಯೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಮತ್ತೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ. ರಮೇಶ್‌ ಜಾರಕಿಹೊಳಿ ಒಬ್ಬ ಬಂಡುಕೋರ ಎಂದು ಆರೋಪಿಸಿದ್ದಾರೆ. ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಭಾನುವಾರ ಮಾತನಾಡಿ, ಈ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಬಿಜೆಪಿಯಿಂದ ಓಡಾಡುತ್ತಿರುವ ಒಬ್ಬರು ಮುಂಚೆ ನಮ್ಮ ಪಕ್ಷದಲ್ಲೂ ಇದ್ದವರು. ಅವರು ಇಲ್ಲೂ ಬಂಡಾಯ ಮಾಡಿದ್ದರು. ಆದರೂ ಅವರಿಗೆ ಸಮಾಧಾನ ಆಗಲಿಲ್ಲ. ಈಗ ಬಿಜೆಪಿಗೆ ಹೋಗಿದ್ದು, ಅಲ್ಲೂ ಬಂಡಾಯದ ಕೆಲಸ ಮಾಡುತ್ತಿದ್ದಾರೆ ಎಂದರು. 

ಅವರೊಬ್ಬ ಬಂಡುಕೋರ ಎಂದು ರಮೇಶ ಜಾರಕಿಹೊಳಿ (Ramesg jarkiholi) ಹೆಸರೆತ್ತದೆ ವಾಗ್ದಾಳಿ ನಡೆಸಿದರು. ಬಿಜೆಪಿ (BJP)  ಪಕ್ಷದಲ್ಲಿ ಬಾಯಿ ತೆಗೆದರೆ ರಾಮ ರಾಮ ಅಂತಾ ಹೇಳುತ್ತಾರೆ. ಆದರೆ, ಅವರ ಪಕ್ಷದ ಪ್ರಭಾವಿ ಮುಖಂಡ ಮಹಿಳಾ ಶಾಸಕಿ (MLA)  ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ನನಗೆ ಅದರ ಬಗ್ಗೆ ಪ್ರತಿಕ್ರಿಯಿಸುವಷ್ಟು ಸಮಯ ಇಲ್ಲ, ತಲೆನೂ ಓಡಲ್ಲ. ನನಗೆ ನನ್ನ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎನ್ನುವ ಒಂದೇ ಗುರಿ ಇದೆ ಎಂದರು.  ‘ನನಗೆ ಥೂ... ಥೂ... ಎನ್ನುತ್ತಾರೆ. ನಾನೇನು ಮಾಡಿದ್ದೇನೆ? ಲಿಂಗಾಯತ ಸಮುದಾಯದಲ್ಲಿ ಹುಟ್ಟಿರುವ ಒಬ್ಬ ಹೆಣ್ಣು ಮಗಳು ನಾನು. ಇಡೀ ಸ್ತ್ರೀ ಕುಲಕ್ಕೆ ಅವರು ಮಾಡಿದ ಅವಮಾನವಿದು.’

ಇದು ತನ್ನ ವಿರುದ್ಧ ಥೂ ಥೂ ಅಂದಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ(Ramesh Jarkiholi) ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌(Lakshmi Hebbalkar) ಮಾಡಿರುವ ವಾಗ್ದಾಳಿ. ಕಾಂಗ್ರೆಸ್‌(Congress) ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರವಾಗಿ ನಗರದಲ್ಲಿ ಶನಿವಾರ ಪ್ರಚಾರ(Campaign) ಸಭೆಯಲ್ಲಿ ಮಾತನಾಡಿದ ಅವರು ಕೆಪಿಸಿಸಿ(KPCC) ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ(Satish Jarkiholi) ಅವರ ಎದುರು ಸತೀಶ್‌ ಅವರನ್ನು ಹೊಗಳಿ ರಮೇಶ್‌ ಅವರನ್ನು ತೆಗಳಿದರು. ಲಕ್ಷ್ಮೀ ಹೆಬ್ಬಾಳ್ಕರ್‌ ಸೋಲಿಸುವುದೇ ನಮ್ಮ ಗುರಿ ಎನ್ನುತ್ತಾರೆ. ಯಾಕೆ ನಮ್ಮ ಪಕ್ಷದಲ್ಲಿ ನಾನು ಬೆಳೆಯಬಾರದಾ? ನೀವು ನಿಮ್ಮ ಪಕ್ಷದಲ್ಲಿ ಬೆಳೆದುಕೊಳ್ಳಿ. ಏನೂ ಮಾಡಿದ್ದೇನು ನಾನು? ಎಂದು ಪ್ರಶ್ನಿಸಿದರು.

ನಾನು ಬಸ​ವ ತತ್ವ ​ಪಾ​ಲ​ಕ, ಜಾತಿವಾದ ಮಾಡಿಲ್ಲ: ರಮೇಶ್‌

ಬೆಳಗಾವಿ(Belagavi): ನನಗೆ ಪಕ್ಷದ ಗೆಲುವೇ ಮುಖ್ಯ, ಪಕ್ಷದ ವಿಚಾರ ಬಂದಾಗ ನಾನೆಂದಿಗೂ ಕುಟುಂಬ ನೋಡಿಲ್ಲ. ನಾನೂ ಬಸವ ತತ್ವದ(Basava Principle) ಪರಿಪಾಲಕನಾಗಿದ್ದೇನೆ. ನಾನೆಂದಿಗೂ ಜಾತಿವಾದ(Casteism) ಮಾಡಿದವನಲ್ಲ. ಕೆಲವರು ಸೋಲಿನ ಭಯದಿಂದ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರಗೆ ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ತಿರುಗೇಟು ನೀಡಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಶನಿವಾರ ಪ್ರಚಾರ ಸಭೆಯಲ್ಲಿ ಅವ​ರು ಮಾತನಾಡಿದ ಅವರು, ನಾವು ಯಾವುದೇ ಜಾತಿ(Caste) ಆಧಾರಿತವಾಗಿಲ್ಲ. ನಮ್ಮದು ಮಾನವ ಜಾತಿ. ನಾವು ಬಸವಣ್ಣನವರ(Basavanna) ತತ್ವ ಸಿದ್ಧಾಂತದ ಮೇಲೆ ಹೋಗುವಂತವರು ಎಂದರು. ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ನನ್ನ ಸ್ವಂತ ತಮ್ಮ ಸತೀಶ ಜಾರಕಿಹೊಳಿ ಅವರನ್ನು ಸೋಲಿಸಿ, ಲಿಂಗಾಯತ(Lingayat) ಸಮುದಾಯದ ಬಿಜೆಪಿ(BJP) ಅಭ್ಯರ್ಥಿ ಮಂಗಲಾ ಅಂಗಡಿ ಅವರನ್ನು ಗೆಲ್ಲಿಸಿದ್ದು ನಾನೇ. ಇನ್ನು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ(Mahantesh Kavatagimatha) ಅವರನ್ನು ಗೆಲ್ಲಿಸುವುದು, ಕಾಂಗ್ರೆಸ್‌ ಪಕ್ಷವನ್ನು ಸೋಲೀಸುವದೇ ನನ್ನ ಗುರಿ. ಆದರೆ, ಸದ್ಯ ಇರುವ ಲಿಂಗಾಯತ ನಾಯಕಿಯ ಬಗ್ಗೆ ನಾನು ವೈಯಕ್ತಿಕವಾಗಿ ಮಾತನಾಡಲ್ಲ ಎಂದು ಪರೋಕ್ಷವಾಗಿ ಹೆಬ್ಬಾಳ್ಕರ್‌ಗೆ ಟಾಂಗ್‌ ನೀಡಿದ್ದಾರೆ. 

 ಟಿಕೆಟ್‌ ಕೈತಪ್ಪಿದ್ದಕ್ಕೆ ನನಗೆ ಬೇಸರವಿಲ್ಲ: ಎಸ್‌ಆರ್‌ಪಿ

ಕಾಂಗ್ರೆಸ್‌ ಪಕ್ಷ ಎಂದರೆ ನನಗೆ ತಾ(Mother) ಸಮಾನ. ಪಕ್ಷದ ನಿರ್ಣಯವನ್ನು ನಾನು ಪ್ರೀತಿಯಿಂದ ಸ್ವೀಕರಿಸಿ ಗೌರವಿಸುತ್ತೇನೆ. ವಿಧಾನಪರಿಷತ್‌ ಚುನಾವಣೆ(Vidhan Parishat Election) ಟಿಕೆಟ್‌ ಕೈ ತಪ್ಪಿರುವ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ವಿಧಾನ ಪರಿಷತ್‌ ವಿರೋಧಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌(SR Patil) ಹೇಳಿದ್ದಾರೆ.

ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕಾಗಿ 45 ವರ್ಷಗಳಿಂದ ನಿಸ್ವಾರ್ಥವಾಗಿ ಸೇವೆ ಮಾಡಿಕೊಂಡು ಬಂದಿದ್ದೇನೆ. ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ. ಈ ನಿರ್ಧಾರದಿಂದ ಅಸಮಾಧಾನ ಉಂಟಾಗುವ ಪ್ರಶ್ನೆಯೇ ಇಲ್ಲ. ನಮ್ಮ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಿಗೆ ಬೇಸರ ಉಂಟಾಗಿತ್ತು ಸತ್ಯ. ಆದರೆ ಅವರಿಗೂ ನಾನು ಸಮಾಧಾನ ಹೇಳಿದ್ದೇನೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ತಮಗೆ ಯಾವುದೇ ಅಸಮಾಧಾನ ಇಲ್ಲ ಎಂದು ಎಸ್‌.ಆರ್‌. ಪಾಟೀಲ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಕೆಲವೊಮ್ಮೆ ಇಂತಹ ನಿರ್ಧಾರಗಳು ಆಗುತ್ತವೆ. ಪಕ್ಷವು ದೂರದೃಷ್ಟಿಯ ಯೋಚನೆಯಿಂದ ಅವರಿಗೆ ಈಗ ಅವಕಾಶ ನೀಡಿಲ್ಲ. ಮುಂದಿನ ನಡೆಗಳ ಕುರಿತು ಈಗಾಗಲೇ ಹೈಕಮಾಂಡ್‌ ಅವರೊಂದಿಗೆ ಚರ್ಚಿಸಿದೆ ಎಂದು ಸ್ಪಷ್ಟಪಡಿಸಿದರು.

PREV
Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!