ಕೋತಿಗೆ ದೇಗುಲ ಕಟ್ಟಿದ್ರು ಸಾರಾ, ಮುದ್ದಾದ ಪ್ರತಿಮೆ ಪ್ರತಿಷ್ಠಾಪನೆ

By Suvarna NewsFirst Published Feb 17, 2020, 9:14 AM IST
Highlights

ನೆಚ್ಚಿನ ಮಂಗ ತೀರಿಕೊಂಡಾಗ ವಿದೇಶ ಪ್ರವಾಸ ರದ್ದು ಮಾಡಿ ಓಡೋಡಿ ಬಂದ ಮಾಜಿ ಸಚಿವ ಸಾರಾ ಮಹೇಶ್ ಈಗ ಚಿಂಟುವಿಗಾಗಿ ದೇವಾಲಯ ನಿರ್ಮಿಸಿ ಅನ್ನಸಂತರ್ಪಣೆಯನ್ನೂ ನಡೆಸಿದ್ದಾರೆ. ದೇವಸ್ಥಾನ ಉದ್ಘಾಟನೆ, ಹೋಮ ಹವನ, ಅನ್ನ ಸಂತರ್ಪಣೆ ನೆರವೇರಿದೆ.

ಮೈಸೂರು(ಫೆ.17): ನೆಚ್ಚಿನ ಮಂಗ ತೀರಿಕೊಂಡಾಗ ವಿದೇಶ ಪ್ರವಾಸ ರದ್ದು ಮಾಡಿ ಓಡೋಡಿ ಬಂದ ಮಾಜಿ ಸಚಿವ ಸಾರಾ ಮಹೇಶ್ ಈಗ ಚಿಂಟುವಿಗಾಗಿ ದೇವಾಲಯ ನಿರ್ಮಿಸಿ ಅನ್ನಸಂತರ್ಪಣೆಯನ್ನೂ ನಡೆಸಿದ್ದಾರೆ. ದೇವಸ್ಥಾನ ಉದ್ಘಾಟನೆ, ಹೋಮ ಹವನ, ಅನ್ನ ಸಂತರ್ಪಣೆ ನೆರವೇರಿದೆ.

"

ಚಿಂಟು ದೇಗುಲ ಅನಾವರಣ ಮಾಡಿದ್ದು, ಸಾಕು ಪ್ರಾಣಿಯ ಪ್ರತಿಮೆ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ಕೋತಿಗಾಗಿ ದೇವಾಲಯ ನಿರ್ಮಿಸಿದ ಮಾಜಿ ಸಚಿವ ಸಾ.ರಾ.ಮಹೇಶ್ ದೇವಸ್ಥಾನ ಉದ್ಘಾಟನೆ, ಹೋಮ ಹವನ, ಅನ್ನ ಸಂತರ್ಪಣೆ ನೆರವೇರಿಸಿದ್ದಾರೆ.

ಕೋತಿಯ ಗುಡಿಯ ನೋಡಿರಣ್ಣಾ! 'ಚಿಂಟು'ಗಾಗಿ ಗುಡಿ ಕಟ್ಟಿಸಲು ಮುಂದಾದ ಸಾರಾ ಮಹೇಶ್!

ಮೈಸೂರಿನ ದಟ್ಟಗಳ್ಳಿಯ ಸಾ.ರಾ ಫಾರಂ ಹೌಸನಲ್ಲಿ ಚಿಂಟು ಕೋತಿ ದೇಗುಲ ನಿರ್ಮಾಣವಾಗಿದ್ದು, ಕಲ್ಲಿನ ಮಂಟಪದಿಂದ ದೇಗುಲ ಕಟ್ಟಲಾಗಿದೆ. ದೇಗುಲದಲ್ಲಿ ಚಿಂಟು ಕೋತಿ, ಕುರಿ ಮೇಲೆ ಕುಳಿತ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ದೇವಸ್ಥಾನ ಉದ್ಘಾಟನೆಯಾಗಿದೆ.

ಕೋತಿ ಅಂತ್ಯ ಸಂಸ್ಕಾರಕ್ಕೆ ಫಾರಿನ್ ಟ್ರಿಪ್ ಮೊಟಕುಗೊಳಿಸಿ ಬಂದ ಶಾಸಕ..!

ಕೆಲವೇ ಕೆಲವು ಆಪ್ತರಿಗೆ ಮಾತ್ರ ಕಾರ್ಯಕ್ರಮಕ್ಕೆ‌ ಆಹ್ವಾನ ನೀಡಲಾಗಿತ್ತು. ಇತ್ತೀಚೆಗೆ ಚಿಂಟು ಕೋತಿ ವಿದ್ಯುತ್ ತಗುಲಿ ಮೃತಪಟ್ಟಿತ್ತು. ವಿದೇಶ ಪ್ರವಾಸ ರದ್ದುಗೊಳಿಸಿ ಚಿಂಟು ಅಂತ್ಯ ಸಂಸ್ಕಾರಕ್ಕೆ ಓಡೋಡಿ ಬಂದಿದ್ದ ಸಾ.ರಾ ಮಹೇಶ್ ನೆಚ್ಚಿನ ಚಿಂಟು ಮೃತದೇಹದ ಬಳಿ ಗಳಗಳನೆ ಕಣ್ಣೀರಿಟ್ಟಿದ್ದರು. ಶಿಲ್ಪ ಕಲಾವಿದ ಅರುಣ್‌ ಯೋಗಿ ಅವರಿಂದ ಪ್ರತಿಮೆ ಕೆತ್ತನೆಯಾಗಿದ್ದು, ಬರೋಬ್ಬರಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.

click me!