ಸಿ. ಕ್ಯಾಟಗರಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಬ್ಯಾಂಕ್| ಸತತ ಮೂರು ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತೀಯ ರೆಡ್ ಕ್ರಾಸ್|ರಾಜ್ಯದ ಸಿ. ಕ್ಯಾಟಗರಿ ಜಿಲ್ಲೆಯ ಏಕೈಕ ಬ್ಲಡ್ ಬ್ಯಾಂಕ್|
ಕೊಪ್ಪಳ(ಫೆ.17): ಭಾರತೀಯ ರೆಡ್‌ಕ್ರಾಸ್ ಕೊಪ್ಪಳ ಬ್ಲಡ್ ಬ್ಯಾಂಕ್ ಪ್ರಸಕ್ತ ಸಾಲಿನ ಬೆಸ್ಟ್ ಬ್ಲಡ್ ಬ್ಯಾಂಕ್ ಪ್ರಶಸ್ತಿಗೆ ಪಾತ್ರವಾಗಿದ್ದು, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಬೆಂಗಳೂರಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ವಜುಭಾಯಿವಾಲಾ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
undefined
ಇವರ ಜೊತೆಗೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಚಂದ್ರಶೇಖರ ಕರಮುಡಿ, ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ, ನಿರ್ದೇಶಕರಾದ ರಾಜೇಶ ಯಾವಗಲ್, ಗೌರಮ್ಮ ದೇಸಾಯಿ ಮೊದಲಾದವರು ಇದ್ದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಗೆ ಈಗಾಗಲೇ ಎರಡು ಪ್ರಶಸ್ತಿಗಳು ಲಭಿಸಿದ್ದು, ಇದು ಮೂರನೇ ಪ್ರಶಸ್ತಿಗೆಯಾಗಿದೆ. ಮೂರು ಪ್ರಶಸ್ತಿಗಳನ್ನು ರಾಜ್ಯಪಾಲರಾದ ವಜುಭಾಯಿವಾಲಾ ಅವರೇ ನೀಡಿದ್ದಾರೆ ಎನ್ನುವುದು ವಿಶೇಷ.
ಸತತ ಎರಡು ವರ್ಷಗಳ ಕಾಲ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಸಂದಿದ್ದ ಪ್ರಶಸ್ತಿ ಈ ಬಾರಿ ಸಿ. ಕ್ಯಾಟಗರಿ ಜಿಲ್ಲೆಯಲ್ಲಿಯೇ ಕೊಪ್ಪಳ ಬ್ಲಡ್ ಬ್ಯಾಂಕ್ ಬೆಸ್ಟ್ ಎನ್ನುವ ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ.
51 ಸಾವಿರ ಯುನಿಟ್ ವಿತರಣೆ:
ಕೊಪ್ಪಳ ಬ್ಲಡ್ ಬ್ಯಾಂಕ್‌ನಲ್ಲಿ ಕಳೆದ ಐದು ವರ್ಷಗಳಲ್ಲಿ 51446 ಯುನಿಟ್ ರಕ್ತ ವಿತರಣೆ ಮಾಡಲಾಗಿದೆ. 37907 ಯುನಿಟ್ ಸಂಗ್ರಹಿಸಲಾಗಿದ್ದು, ಸಂಗ್ರಹಿಸಿದ ಬ್ಲಡ್ ವಿಂಗಡಣೆ ಮಾಡಿದ ಆಧಾರದ ಮೇಲೆ 51446 ಯುನಿಟ್ ವಿತರಣೆ ಮಾಡಲಾಗಿದೆ. 10093 ಪ್ಲೇಟ್ ಲೆಟ್ ವಿತರಣೆ ಮಾಡಲಾಗಿದೆ. 8747 ಯುನಿಟ್ ಗರ್ಭಿಣಿಯರಿಗೆ ವಿತರಿಸಲಾಗಿದೆ. ಇಷ್ಟೊಂದು ಸಂಗ್ರಹಣೆ ಮಾಡಿ, ವಿತರಣೆ ಮಾಡಿರುವ ರಾಜ್ಯದ ಸಿ. ಕ್ಯಾಟಗರಿ ಜಿಲ್ಲೆಯ ಏಕೈಕ ಬ್ಲಡ್ ಬ್ಯಾಂಕ್ ಇದಾಗಿದೆ.
ಪ್ರಶಂಸೆ:
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಶಾಖೆಯ ಕಾರ್ಯದ ಕುರಿತು ರಾಜ್ಯಶಾಖೆಯ ಚೇರ್‌ಮನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ಭಾಗದಲ್ಲಿದ್ದರೂ ಕೊಪ್ಪಳ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಇತರೆ ಜಿಲ್ಲೆಗೆ ಮಾದರಿಯಂತೆ ಕಾರ್ಯ ನಿರ್ವಹಿಸುತ್ತಿದೆ. ಅದರಲ್ಲೂ ಬ್ಲಡ್ ಬ್ಯಾಂಕ್ ನಿರ್ವಹಣೆಯಲ್ಲಿಯಂತೂ ಅದರ ಕಾರ್ಯ ಶ್ಲಾಘನೀಯವಾಗಿದೆ ಎಂದಿದ್ದಾರೆ.