Kolar Milk Union : ಚಿಕ್ಕಬಳ್ಳಾಪುರದಷ್ಟೇ ಕೋಲಾರ ಜನರ ಮೇಲೆ ಕಾಳಜಿ ಇದೆ-ಸುಧಾಕರ್

By Kannadaprabha News  |  First Published Dec 19, 2021, 11:36 AM IST
  •  ಪ್ಲಾಟಿನಂ ಡೇರಿ ಮಾಡಿದರೂ ನನ್ನ ವಿರೋಧ ಇಲ್ಲ
  •  ಚಿಕ್ಕಬಳ್ಳಾಪುರದಷ್ಟೇ ಕೋಲಾರ ಜನರ ಮೇಲೆ ಕಾಳಜಿ ಇದೆ-ಸುಧಾಕರ್  
     

  ಚಿಕ್ಕಬಳ್ಳಾಪುರ(ಡಿ.19):  ಕೋಮುಲ್‌ (Komul) ಯಾವುದೇ ಯೋಜನೆ ಮಾಡಿದರೂ, ಅದಕ್ಕೆ ನನ್ನ ವಿರೋಧ ಇಲ್ಲ. ಮೆಗಾ ಡೇರಿ, ಗೋಲ್ಡನ್‌ ಡೇರಿ, ಪ್ಲಾಟಿನಂ ಡೇರಿ ಮಾಡುವುದಾದರೆ ಅದಕ್ಕೂ ನಮ್ಮ ಅಭ್ಯಂತರ ಇಲ್ಲ. ಚಿಕ್ಕಬಳ್ಳಾಪುರ (Chikkaballapura) ಜನರು, ರೈತರ (Farmers) ಬಗ್ಗೆ ಹೊಂದಿರುವಷ್ಟು ಬದ್ಧತೆಯನ್ನು ಕೋಲಾರ (Kolar) ಜಿಲ್ಲೆಯ ಜನರ ಮೇಲೆಯೂ ಹೊಂದಿದ್ದೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr K Sudhakar) ತಿಳಿಸಿದರು. ನಗರದ ಪಿಕಾರ್ಡ್‌ ಬ್ಯಾಂಕ್‌ (Bank) ನೂತನ ಕಟ್ಟಡದಲ್ಲಿ ಶನಿವಾರ ನಡೆದ ಬ್ಯಾಂಕಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ. ಕೋಲಾರ ಜಿಲ್ಲೆಯಿಂದ ಎಲ್ಲಾ ಎಲ್ಲ ಇಲಾಖೆಗಳನ್ನು ಬೇರ್ಪಡಿಸಿಕೊಂಡಿದ್ದೇವೆ. ಆದರೆ ಕೋಚಿಮುಲ್‌, ಡಿಸಿಸಿ ಬ್ಯಾಂಕ್‌ (DCC Bank) ಇಲ್ಲಿಗೆ ತರಲು ಆಗಿರಲಿಲ್ಲ. ಈಗ ಚಿಮುಲ್‌ ಸ್ಥಾಪನೆಗೆ ಸರ್ಕಾರ ಅನುಮೋಧನೆ ನೀಡಿದೆ ಎಂದರು.

ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ : ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ (Milk Union) ರಚನೆಗೆ ಒಂದೂವರೆ ವರ್ಷದಲ್ಲಿ ಅನೇಕ ಬಾರಿ ಪ್ರಯತ್ನ ಮಾಡಿದ್ದೆ. ಸಿಎಂ ಬೊಮ್ಮಾಯಿ (CM Basavaraj Bommai) ಅವರು ನಿರ್ದಿಷ್ಟವಾದ ನಿರ್ಧಾರವನ್ನು ಅರ್ಧಗಂಟೆಯಲ್ಲಿ ತೆಗೆದುಕೊಂಡರು. ಇದಕ್ಕೆ ಸಹಕಾರ ಸಚಿವ ಸೋಮಶೇಖರ್‌ ಸಹ ಸಹಕಾರ ಕೊಟ್ಟರು. ಜಿಲ್ಲೆಯಲ್ಲಿ ಹೆಚ್ಚು ಹಾಲು ಉತ್ಪಾದಕ ಸಂಘಗಳಿಗೆ. ಡಿಪಾಸಿಟ್‌ 80 ಕೋಟಿಯಷ್ಟಿದೆ. 4 ರಿಂದ 5ಲಕ್ಷ ಲೀಟರ್‌ ಪ್ರತಿ ನಿತ್ಯ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಇದೆ. ಅನೇಕ ಜಿಲ್ಲೆಗಳು ಒಂದೂವರೆ, ಒಂದು ಲಕ್ಷ ಲೀಟರ್‌ ಹಾಲು ಉತ್ಪಾದನೆ ಆದರೂ, ಮಂಡಳಿ ಇದೆ. ನಮ್ಮ ಜಿಲ್ಲೆಯಲ್ಲಿ ಆಗುವುದಿಲ್ಲವೇ ಎಂದು ಹೇಳಿದ್ದೆ. ನಮ್ಮ ಪರವಾಗಿ ಸರ್ಕಾರ ಈಗ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.

Tap to resize

Latest Videos

ಕಾರ್ಯಕ್ರಮದಲ್ಲಿ ಪಿಕಾರ್ಡ್‌ ಬ್ಯಾಂಕ್‌ (Bank) ಅಧ್ಯಕ್ಷ ನಾಗೇಶ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾವು ಮತ್ತ ಮಾರುಕಟ್ಟೆಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ವಿ. ನಾಗರಾಜ, ಜಿಪಂ ಮಾಜಿ ಅಧ್ಯಕ್ಷ ಪಿ. ಕೇಶವರೆಡ್ಡಿ, ನಗರಸಭೆ ಅಧ್ಯಕ್ಷ ಆನಂದಬಾಬುರೆಡ್ಡಿ, ಮುಖಂಡ ಮರಳುಕುಂಟೆ ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಗೆರೆಗಪ್ಪ, ತಿರುಮಲಪ್ಪ, ಜೆಸಿಬಿ ಮಂಜುನಾಥ,  ರಾಮಸ್ವಾಮಿ ಮತ್ತಿತರರು ಇದ್ದರು.

ದೂರದೃಷ್ಟಿ, ಬದ್ಧತೆ ಬೇಕು

ಕೋವಿಡ್‌ (covid) ಬಿಕ್ಕಟ್ಟಿನಲ್ಲೂ ಪಿಕಾರ್ಡ್‌ ಬ್ಯಾಂಕ್‌ಗೆ 35ಲಕ್ಷ ರೂ. ಆದಾಯ ಬಂದಿದೆ. 28 ಕೋಟಿ ರು.ಗಳ ಸಾಲವನ್ನು ನೀಡಲಾಗಿದೆ. ಅನೇಕರು ಈ ಬ್ಯಾಂಕ್‌ ಸ್ಥಾಪಿಸಿ, ಅನೇಕರು ಕಾರ್ಯನಿರ್ವಹಿಸಿ, ರೈತರಿಗೆ ಆರ್ಥಿಕ ಚೈತನ್ಯ ತುಂಬಿದ್ದಾರೆ. ಬ್ಯಾಂಕ್‌ ಅನ್ನು ಮತ್ತಷ್ಟುಎತ್ತರಕ್ಕೆ ಕೊಂಡೊಯ್ಯಬೇಕಿದೆ. ಗುಜರಾತ್‌ನಲ್ಲಿ ಸಹಕಾರ ಕ್ಷೇತ್ರದ ಹಾಲು ಮಹಾಮಂಡಳಿ ವೈದ್ಯಕೀಯ ಕಾಲೇಜು ಸ್ಥಾಪಿಸಿ, ನಿರ್ವಹಿಸುತ್ತಿದೆ. ಆ ರೀತಿಯಲ್ಲಿ ಆಡಳಿತ ನಡೆಸಲು ಸಹಕಾರ ಕ್ಷೇತ್ರದಲ್ಲಿ ಅವಕಾಶ ಇದೆ. ಆ ರೀತಿ ಮಾಡಲು ದೂರದೃಷ್ಟಿ, ಬದ್ಧತೆ ಬೇಕೆಂದು ಸಚಿವ ಸುಧಾಕರ್‌ ತಿಳಿಸಿದರು.

.ಚಿಮುಲ್‌ ಸ್ಥಾಪನೆಗೆ ಆದೇಶ: 6 ತಿಂಗಳಲ್ಲಿ ಆಸ್ತಿ ವಿಭಜನೆ

 ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಸ್ಥಾಪನೆಗೊಳ್ಳಲು ಈಗಾಗಲೇ ಕಳೆದ ನವೆಂಬರ್‌ 8 ರಂದು ರಾಜ್ಯ ಸಚಿವ ಸಂಪುಟ ಅನುಮೋದನೆಗೊಳಿಸಿರುವ ಮಹತ್ವಕಾಂಕ್ಷಿ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ರಚನೆಗೆ ಸಹಕಾರ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು, ವಿಭಜನೆಗೊಳ್ಳಲಿರುವ ಜಿಲ್ಲೆಯ ಹಾಲು ಒಕ್ಕೂಟಕ್ಕೆ ಮಾರುಕಟ್ಟೆಮೂಲ ಸೌಕರ್ಯ ಹೊಂದಲು 3 ತಿಂಗಳು ಹಾಗೂ ಎರಡು ಒಕ್ಕೂಟಗಳ ನಡುವೆ ಆಸ್ತಿ ಹಾಗೂ ಜವಾಬ್ದಾರಿ ವಿಭಜನೆ ಪ್ರಕ್ರಿಯೆಯನ್ನು 6 ತಿಂಗಳೊಳಗೆ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ.

ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ವಿಭಜಿಸಿ ಹೊಸದಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಸಹಕಾರಿ ಒಕ್ಕೂಟ ಸ್ಥಾಪಿಸಲು ಅಗತ್ಯ ಇರುವ ಎಲ್ಲಾ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸಹಕಾರ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ವಿಶೇಷ ಕರ್ತವ್ಯಾಧಿಕಾರಿ ಎಂ.ವೆಂಕಟಸ್ವಾಮಿ ಆದೇಶ ಹೊರಡಿಸಿದ್ದು ಜಿಲ್ಲೆಯ ಬಹುದಿನಗಳ ಕನಸು ಕೆಲವೇ ತಿಂಗಳಲ್ಲಿ ಈಡೇರಲಿದೆ.

click me!