ಬಡವರ ಮನೆ ನಿರ್ಮಾಣಕ್ಕೆ ರಾಮದಾಸ್‌ ಅಡ್ಡಿ: ಆರೋಪ

Published : Nov 17, 2019, 10:07 AM IST
ಬಡವರ ಮನೆ ನಿರ್ಮಾಣಕ್ಕೆ ರಾಮದಾಸ್‌ ಅಡ್ಡಿ: ಆರೋಪ

ಸಾರಾಂಶ

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಕೆ.ಆರ್‌. ಕ್ಷೇತ್ರಕ್ಕೆ ಮಂಜೂರಾಗಿದ್ದ 5296 ಮನೆಗಳು ನಿರ್ಮಾಣವಾಗದಂತೆ ಈಗಿನ ಶಾಸಕ ಎಸ್‌.ಎ. ರಾಮದಾಸ್‌ ತಡೆಯೊಡ್ಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಆರೋಪಿಸಿದ್ದಾರೆ. ತಮ್ಮ ಅವಧಿಯಲ್ಲಿ ವಸತಿ ರಹಿತರಿಗೆ ನಿವೇಶನ ಮನೆ ನಿರ್ಮಿಸಿಕೊಳ್ಳಲು ಅನುದಾನ ಬಿಡುಗಡೆಯಾಗಿದೆ. ಆದರೆ ಶಾಸಕರು ಗುತ್ತಿಗೆದಾರರಿಗೆ ಬೆದರಿಕೆ ಹಾಕಿ ಮನೆ ನಿರ್ಮಾಣ ಮಾಡದಂತೆ ಬೆದರಿಸುತ್ತಿದ್ದಾರೆ ಎಂದಿದ್ದಾರೆ.

ಮೈಸೂರು(ನ.17): ಕೊಳಚೆ ನಿರ್ಮೂಲನಾ ಮಂಡಳಿಯಿಂದ ಕೆ.ಆರ್‌. ಕ್ಷೇತ್ರಕ್ಕೆ ಮಂಜೂರಾಗಿದ್ದ 5296 ಮನೆಗಳು ನಿರ್ಮಾಣವಾಗದಂತೆ ಈಗಿನ ಶಾಸಕ ಎಸ್‌.ಎ. ರಾಮದಾಸ್‌ ತಡೆಯೊಡ್ಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಆರೋಪಿಸಿದ್ದಾರೆ.

ತಮ್ಮ ಅವಧಿಯಲ್ಲಿ ವಸತಿ ರಹಿತರಿಗೆ ನಿವೇಶನ ಮನೆ ನಿರ್ಮಿಸಿಕೊಳ್ಳಲು ಅನುದಾನ ಬಿಡುಗಡೆಯಾಗಿದೆ. ಆದರೆ ಶಾಸಕರು ಗುತ್ತಿಗೆದಾರರಿಗೆ ಬೆದರಿಕೆ ಹಾಕಿ ಮನೆ ನಿರ್ಮಾಣ ಮಾಡದಂತೆ ಬೆದರಿಸುತ್ತಿದ್ದಾರೆ. ಶಾಸಕರ ಈ ವರ್ತನೆ ವಿರುದ್ಧ ಎಲ್ಲಾ ಫಲಾನುಭವಿಗಳು ಬೀದಿಗಿಳಿದು ಹೋರಾಟ ನಡೆಸಬೇಕು. ಹಿಂದೆ ಮುಖ್ಯಮಂತ್ರಿ ಮತ್ತು ವಸತಿ ಸಚಿವರ ಮೇಲೆ ಒತ್ತಡ ಹೇರಿ 4 ವರ್ಷದ ಹೋರಾಟದ ಫಲವಾಗಿ ನಗರದ ಮಳಲವಾಡಿ, ವಿಶ್ವೇಶ್ವರನಗರ, ಲಲಿತ್ರಾದಿಪುರ, ಗೊರೂರಿನಲ್ಲಿ 5296 ಮನೆಗಳ ನಿರ್ಮಾಣಕ್ಕೆ ಅನುಮೋದನೆ ಕೊಡಿಸಿದ್ದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕೆ. ಆರ್. ಪೇಟೆ: ಪಕ್ಷೇತರ ಅಭ್ಯರ್ಥಿಯಾಗಿ ಸರ್ವೇ ದೇವೇಗೌಡ ನಾಮಪತ್ರ ಸಲ್ಲಿಕೆ

ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡುವ ಗುತ್ತಿಗೆದಾರರನ್ನುಬೆದರಿಕೆ ಹಾಕಿ ಕೆಲಸ ಪ್ರಾರಂಭ ಆಗದಂತೆ ಶಾಸಕ ಎಸ….ಎ.ರಾಮದಾಸ್‌ ತಡೆಯುತ್ತಿದ್ದಾರೆ. ಮನೆ ನಿರ್ಮಾಣಕ್ಕಾಗಿ ರಾಜೀವ್‌ಗಾಂಧಿ ಹೌಸಿಂಗ್‌ ಸ್ಕೀಮ್‌ನಿಂದ 1.5 ವರ್ಷದ ಹಿಂದೆಯೇ 18 ಕೋಟಿ ರು. ಮಂಜೂರಾಗಿದೆ. ಜಿಲ್ಲಾಧಿಕಾರಿ ಖಾತೆಯಲ್ಲಿ ಈ ಹಣ ಹಾಗೆಯೇ ಬಿದಿದ್ದೆ. ಇದಕ್ಕೆ ಟೆಂಡರ್‌ಕರೆಯಲು ತಡೆ ಹಾಕಿದ್ದಾರೆ. ತಡೆಯೊಡ್ಡಲು ಕಾರಣ ಹೇಳುವ ಅವರು ಜಿ+2 ಮಾದರಿ ಬದಲು ಜಿ+14ಮಾದರಿ ಮನೆಗಳನ್ನು ಕಟ್ಟಬೇಕೆಂದು ಸಬೂಬು ಹೇಳುತ್ತಿದ್ದಾರೆ. ಬಡವರು ಮಹಡಿ ಏರಲು ಸಾಧ್ಯವೇ? ಎಂದು ಸೋಮಶೇಖರ್‌ ಪ್ರಶ್ನಿಸಿದ್ದಾರೆ.

ಮೈತ್ರಿ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ ಯೋಗೇಶ್ವರ್‌ಗಿಲ್ಲ ಟಿಕೆಟ್!

ಹಳೆ ಯೋಜನೆಯಂತೆ ಲಾನುಭವಿಗಳಿಗೆ ಮನೆನಿರ್ಮಿಸಿಕೊಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 4.80 ಲಕ್ಷ ರು. ಒಂದು ಮನೆ ನಿರ್ಮಾಣಕ್ಕೆ ನೀಡಲಾಗುತ್ತದೆ. ನಿಗಧಿತ ಕಾಲಾವಧಿಯಲ್ಲಿ ಮನೆ ನಿರ್ಮಿಸಿದ್ದಿದರೆ ಅನುದಾನ ವಾಪಸ್ಸು ಹೋಗುತ್ತದೆ. ಮತ್ತೆ ಈ ಹಣತರುವುದು ತುಂಬಾ ಕಷ್ಟ. ಜಿಲ್ಲಾ ಉಸ್ತುವಾರಿ ಮತ್ತು ವಸತಿ ಸಚಿವರೂ ಆಗಿರುವ ಸೋಮಣ್ಣ ಅವರ ಗಮನಕ್ಕೂ ಈ ವಿಚಾರ ತರಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿ ಮೂಲಕ ಸರಕಾರ ಹೆಚ್ಚುವರಿ ಕಾರ್ಯದರ್ಶಿಗಳ ಗಮನಕ್ಕೂ ತಂದಿದ್ದೇವೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ವಿಷಾದಿಸಿದ್ದಾರೆ. ಪಾಲಿಕೆ ಸದಸ್ಯರಾದ ಶೋಭಾ ಸುನಿಲ್, ಜೆ. ಗೋಪಿ, ಮಾಜಿ ಸದಸ್ಯ ಎಂ. ಸುನಿಲ್‌, ಜಿ. ಸೋಮಶೇಖರ್‌ ಇದ್ದರು.

'ಶಾಸಕನಾಗಿ ಮಸಿ ಬಳಿದಿದ್ದು ಸಾಕು, ಮಂತ್ರಿಯಾಗಿ ಜಿಲ್ಲೆ ಮಾರೋದ್ಬೇಡ'..!

PREV
click me!

Recommended Stories

Bengaluru: ಹೆಂಡ್ತಿ ಮಸಾಜ್ ಕೆಲಸಕ್ಕೆ ಮಸಣ ಸೇರಿಸಿದ ಮೂರನೇ ಗಂಡ! ಡೆಡ್ಲಿ ಮರ್ಡರ್ ಗೆ ಬೆಚ್ಚಿಬಿದ್ದ ರಾಜಧಾನಿ
Bengaluru: ಮಂಗಳಮುಖಿಯರ ಹಗಲುದರೋಡೆ, ಹಣ ಕೊಡದಿದ್ರೆ ಬಟ್ಟೆ ಬಿಚ್ಚಿ ನಿಲ್ತಾರೆ!