ಕೋವಿಡ್ ಲಸಿಕೆ ಪಡೆಯಲು ಜನದಟ್ಟಣೆ :ಸೆಕೆಂಡ್ ಡೋಸ್‌ಗೆ ಬೇಡಿಕೆ

By Suvarna NewsFirst Published May 7, 2021, 2:54 PM IST
Highlights

ರಾಜ್ಯದಲ್ಲಿ ಕೊರೋನಾ ಸೋಂಕು ಏರುತ್ತಿದೆ.  ಸಾವಿನ ಪ್ರಕರಣಗಳು ಏರಿಕೆಯಾಗುತ್ತಲೆ ಇದೆ. ಈ ನಿಟ್ಟಿನಲ್ಲಿ ಇದೀಗ ವ್ಯಾಕ್ಸಿನ್‌ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅಲ್ಲದೇ ವ್ಯಾಕ್ಸಿನ್ ಸೆಂಟರ್‌ ಮುಂದೆ ಜನದಟ್ಟಣೆಯು ಕಂಡು ಬರುತ್ತಿದೆ. 

ಬೆಂಗಳೂರು (ಮೇ.07):ಕೊರೋನಾ ಮಹಾಮಾರಿ ಮಿತಿ ಮೀರಿದೆ. ಸೋಂಕು ಸಾವಿನ ಪ್ರಕರಣಗಳು ಏರಿಕೆಯಾಗುತ್ತಲೆ ಇದೆ. ಈ ನಿಟ್ಟಿನಲ್ಲಿ ಇದೀಗ ವ್ಯಾಕ್ಸಿನ್‌ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅಲ್ಲದೇ ವ್ಯಾಕ್ಸಿನ್ ಸೆಂಟರ್‌ ಮುಂದೆ ಜನದಟ್ಟಣೆಯು ಕಂಡು ಬರುತ್ತಿದೆ. 

ಬೆಂಗಳೂರಿನಲ್ಲಿ  ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ಮುಗಿಬೀಳುತ್ತಿದ್ದು ಕೆ.ಸಿ.ಜನರಲ್ ಆಸ್ಪತ್ರೆ ಮುಂದೆ ಸಾರ್ವಜನಿಕರು ಪ್ರತಿದಿನವೂ ಕ್ಯೂ ನಿಂತು ಕಾಯುತ್ತಿರುತ್ತಾರೆ.  ಇಂದೂ ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕ್ಯೂ ನಿಂತು ಲಸಿಕೆಗೆ ಕಾದಿದ್ದರು. 

ರಾಜ್ಯದಲ್ಲಿ 1 ಕೋಟಿ ಜನರಿಗೆ ಲಸಿಕೆ. ಆರೋಗ್ಯ ಸಚಿವರ ನೇತೃತ್ವದಲ್ಲಿ ಗಣನೀಯ ಸಾಧನೆ ...

ಲಸಿಕೆಗಾಗಿ ಗಂಟೆಗಟ್ಟಲೆ ಇಲ್ಲಿ ಕಾಯುವ ಸಾಲು ಇರುವ ಹಿನ್ನಲೆ ದಿನವೂ  ಜನದಟ್ಟಣೆಯಾಗುತ್ತಿದೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಒಂದು ದಿನಕ್ಕೆ 700 ರಿಂದ 800 ಜನರಿಗೆ ವ್ಯಾಕ್ಸಿನ್ ಹಾಕಬಹುದಾಗಿದ್ದು, ಇಷ್ಟು ಪ್ರಮಾಣದಲ್ಲಿ ಇಲ್ಲಿಗೆ ಲಸಿಕೆ ಪೂರೈಕೆಯಾಗುತ್ತಿಲ್ಲ. 

ಆದರೆ  ಆಸ್ಪತ್ರೆಗೆ ವ್ಯಾಕ್ಸಿನ್ ಡೋಸ್ ಪೂರೈಕೆ ಆಗಿರುವುದಕ್ಕಿಂತ  ಹೆಚ್ಚಿನ ಸಂಖ್ಯೆಯಲ್ಲಿ  ಜನರು ಆಗಮಿಸುತ್ತಿರುವ ಹಿನ್ನೆಲೆ  ಜನದಟ್ಟಣೆಯಾಗುತ್ತಿದೆ. ಇಂದು 200 ಜನರಿಗೆ ವ್ಯಾಕ್ಸಿನ್ ಕೊಡುವಷ್ಟು ಕೋ ವ್ಯಾಕ್ಸಿನ್ ಬಂದಿದ್ದು, 500  ಜನರಿಗೆ ಕೋವಿಶಿಲ್ಡ್ ಬಂದಿದೆ. ಆದರೆ ಲಸಿಕೆ ಪಡೆಯುವರ ಸಂಖ್ಯೆ ಇದಕ್ಕಿಂತಲೂ ಹೆಚ್ಚಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ

18+ ಲಸಿಕೆ ವಿತರಣೆಯಲ್ಲಿ ಕನ್ನಡಿಗರಿಗೆ ಅನ್ಯಾಯ: ಕೇಂದ್ರದ ವಿರುದ್ಧ ಎಚ್‌ಡಿಕೆ ಕೆಂಡಾಮಂಡಲ ...

ಇನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಲು ಜನರು ಹೆಚ್ಚು ಆಗಮಿಸುತ್ತಿದ್ದಾರೆ ಎಂದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

click me!