ಲಾಕ್‌ಡೌನ್ ಬಗ್ಗೆ ಶೀಘ್ರವೇ ಸಿಎಂ ಆದೇಶ ನೀಡ್ತಾರೆ : ಈಶ್ವರಪ್ಪ

By Suvarna NewsFirst Published May 7, 2021, 1:58 PM IST
Highlights

ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿದ್ದು ಶೀಘ್ರವೇ ಸಿಎಂ ಲಾಕ್‌ಡೌನ್ ಮಾಡುವ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಬೇಕಿದೆ. ಬಲವಂತವಾಗಿ ಲಾಕ್ ಡೌನ್ ಮಾಡಬೇಕೆಂಬ ಚರ್ಚೆಯೂ ನಡೆಯುತ್ತಿದೆ ಎಂದು ಈಶ್ವರಪ್ಪ ಹೇಳಿದರು. 

ಶಿವಮೊಗ್ಗ (ಮೇ.07):  ರಾಜ್ಯದಲ್ಲಿ ಲಾಕ್ ಡೌನ್ ಜಾರಿ  ಬಗ್ಗೆ ಈವರೆಗೂ ಕ್ಲಿಯರ್ ಆಗಿಲ್ಲ.  ರಾಜ್ಯದಲ್ಲಿ ಲಾಕ್ ಡೌನ್ ಬೇಕೋ ಬೇಡವೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.  ಮುಖ್ಯಮಂತ್ರಿಗಳು ಸಂಬಂಧಪಟ್ಟ ಮಂತ್ರಿಗಳ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. 

ಶಿವಮೊಗ್ಗದಲ್ಲಿಂದು ಮಾತನಾಡಿದ ಸಚಿವ ಈಶ್ವರಪ್ಪ ಇಂದೇ  ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡುತ್ತಾರೋ ಅಥವಾ ಮತ್ತೊಂದು ಬಾರಿ ಕ್ಯಾಬಿನೆಟ್ ಸಭೆ ಕರೆದು ಹೇಳುತ್ತಾರೋ ನೋಡಬೇಕಿದೆ.  ಲಾಕ್ ಡೌನ್ ಬಗ್ಗೆ ಇವತ್ತೋ ನಾಳೆಯೋ ಗೊತ್ತಾಗಲಿದೆ ಎಂದರು.

ಜನತಾ ಕರ್ಫ್ಯೂನಿಂದ ತಗ್ಗದ ಸೋಂಕು, 2 ವಾರ ರಾಜ್ಯದಲ್ಲಿ ಲಾಕ್‌ಡೌನ್ ಪಕ್ಕಾ.? ..

 ಜನರಿಗಿನ್ನೂ ಅರಿವು ಮೂಡಿಲ್ಲ :  ಶಿವಮೊಗ್ಗದ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದ್ದರೂ ಇನ್ನೂ ಮಾಸ್ಕ್ ಹಾಕಿಕೊಳ್ಳುತ್ತಿಲ್ಲ. ಪೊಲೀಸರು ಸಾವಿರಾರು ವಾಹನಗಳು ಹಿಡಿಯುತ್ತಿದ್ದರೂ, ಆಟೋಗಳನ್ನು ಸೀಜ್ ಮಾಡುತ್ತಿದ್ದರೂ ಕೂಡ ಓಡಾಡುತ್ತಿದ್ದಾರೆ. ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಬೇಕಿದೆ. ಬಲವಂತವಾಗಿ ಲಾಕ್ ಡೌನ್ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ ಎಂದು ಈಶ್ವರಪ್ಪ ಹೇಳಿದರು. 

ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಸಿಇಓ ಜೊತೆ ಚರ್ಚೆ ನಡೆಸಿ, ಶಿವಮೊಗ್ಗದಲ್ಲಿಯೂ ಲಾಕ್ ಡೌನ್ ಮಾಡಬೇಕೋ ಬೇಡವೋ ಎಂಬ ತೀರ್ಮಾನ ಮಾಡಲಾಗುತ್ತದೆ.  ಬೆಳಗ್ಗೆ ತರಕಾರಿ ಮಾರುಕಟ್ಟೆ ಬಳಿ ಹೋದರೆ ಸಾವಿರಾರು ಜನರು ಸಿಗುತ್ತಾರೆ.  ಕರ್ಫ್ಯೂ, ಲಾಕ್ ಡೌನ್ ಮಾಡಿದರೂ ಕೂಡ ಅವರಿಗೆ ಅವಕಾಶ   ಈ ಬಗ್ಗೆ ಸಮಗ್ರ ಚರ್ಚೆ ನಡೆಸಿ, ರಾಜ್ಯ ಸರ್ಕಾರದ ತೀರ್ಮಾನವನ್ನು ಆಧರಿಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಈಶ್ವರಪ್ಪ ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!