ಮೋದಿ ಬಜೆಟ್‌ನಲ್ಲಿ ಬೆಂಗಳೂರು ಮೆಟ್ರೋಕ್ಕೆ 1012 ಕೋಟಿ ರೂ.

By Web DeskFirst Published Feb 1, 2019, 10:23 PM IST
Highlights

ಮೋದಿ ಬಜೆಟ್ ನಲ್ಲಿ ಬೆಂಗಳೂರು ಮೆಟ್ರೋಕ್ಕೆ ಬಂಪರ್ ಕೊಡುಗೆ! ನಮ್ಮ ಮೆಟ್ರೋಗೆ 1012 ಕೋಟಿ ರೂ. ನೀಡಿದ ಕೇಂದ್ರ ಬಜೆಟ್!

ನವದೆಹಲಿ, [ಫೆ.01]: ಬೆಂಗಳೂರಿನ ಮೆಟ್ರೋ ಕಾಮಗಾರಿಗಳಿಗೆ ಈ ಬಾರಿಯ ಬಜೆಟ್ ನಲ್ಲಿ 1012 ಕೋಟಿ ರೂಗಳನ್ನು ನೀಡಲಾಗಿದೆ. 

2ನೇ ಹಂತದ ಮೆಟ್ರೋ ಕಾಮಗಾರಿಗಾಗಿ ಈ ಹಣವನನ್ನು ನೀಡುತ್ತಿರುವುದುದಾಗಿ ಕೇಂದ್ರ ಸರ್ಕಾರವು ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ತಿಳಿಸಿದೆ.

ಮೋದಿ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹೊಸ 3 ರೈಲ್ವೇ ಮಾರ್ಗಗಳು ಮಂಜೂರು

ಉಳಿದಂತೆ ಕೇಂದ್ರ ಸರ್ಕಾರದ ಸಂಸ್ಥೆಗಳಾದ ಬೆಂಗಳೂರಿನ ನಿಮ್ಹಾನ್ಸ್ ಗೆ 450 ಕೋಟಿ ರೂ, ಯುನಾನಿ ಮೆಡಿಕಲ್ ಸಂಸ್ಥೆಗೆ 40 ಕೋಟಿ ರೂ ಮೈಸೂರಿನ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆಗೆ 55 ಕೋಟಿ ರೂ ಗಳನ್ನು ಘೋಷಿಸಲಾಗಿದೆ.

Union Budget 2019: ಕರ್ನಾಟಕಕ್ಕೆ ಸಿಕ್ಕಿದ್ದೇನು..?

ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ 300 ಕೋಟಿ ರೂ, ನಗರ ಕುಡಿಯುವ ನೀರಿನ ಯೋಜನೆಗೆ 217 ಕೋಟಿ ರೂಗಳನ್ನು ಕೇಂದ್ರ ಸರ್ಕಾರವು ತನ್ನ ಬಜೆಟ್ ನಲ್ಲಿ ಪ್ರಕಟಿಸಿದೆ.

click me!