ಮೋದಿ ಬಜೆಟ್ ಖುಷಿಗೆ ರಾಜ್ಯ ಬಿಜೆಪಿಯಿಂದ ಅಭಿನಂದನಾ ಕಾರ್ಯಕ್ರಮ

Published : Feb 01, 2019, 08:19 PM ISTUpdated : Feb 01, 2019, 09:45 PM IST
ಮೋದಿ ಬಜೆಟ್ ಖುಷಿಗೆ ರಾಜ್ಯ ಬಿಜೆಪಿಯಿಂದ ಅಭಿನಂದನಾ ಕಾರ್ಯಕ್ರಮ

ಸಾರಾಂಶ

 ಸಮಾಜದ ಎಲ್ಲಾ ವರ್ಗವನ್ನೂ ಪ್ರತಿನಿಧಿಸುವ ಮಧ್ಯಂತರ ಬಜೆಟ್ ಮಂಡಿಸಿದ ಮೋದಿ ಸರ್ಕಾರ! ಇದಕ್ಕೆ ಕರ್ನಾಟಕ ಬಿಜೆಪಿ ಫುಲ್ ಖುಷ್! ಇದೇ ಖುಷಿಯಲ್ಲಿ ಫೆ.2ರಂದು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡ ಕರ್ನಾಟಕ ಬಿಜೆಪಿ.

ಬೆಂಗಳೂರು, (ಫೆ.01): ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ನಲ್ಲಿ ಭರ್ಜರಿ ಗಿಫ್ಟ್ ನೀಡಿದೆ. 

ಇಂದು [ಶುಕ್ರವಾರ] ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಅವರು ಮಧ್ಯಂತರ ಬಜೆಟ್ ಮಂಡಿಸಿದ್ದು, ರೈತ, ಕಾರ್ಮಿಕ ಹಾಗೂ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಬಜೆಟ್‌ವೊಂದನ್ನು ಮಂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ಯಂತರ ಬಜೆಟ್‌ನ ಮಹಾ ಕೊಡುಗೆ: ಅದೂ, ಇದೂ, ಎಲ್ಲವೂ ನಿಮಗೆ!

ಇನ್ನು ಈ ಬಜೆಟ್ ಚುನಾವಣೆ ಬಜೆಟ್ ಆಗಿದೆ ಅಂತೆಲ್ಲಾ ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದ್ರೆ, ಇನ್ನು ಆಡಳಿತ ಪಕ್ಷ ಫುಲ್ ಖುಷ್ ಆಗಿದೆ. ಇದೇ ಖುಷಿಯಲ್ಲಿ ರಾಜ್ಯ [ಕರ್ನಾಟಕ] ಬಿಜೆಪಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

 ಅತ್ಯುತ್ತಮ ಬಜೆಟ್ ನೀಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಭಿನಂದನಾ ಕಾರ್ಯಕ್ರಮ 2.2.2019ರಂದು [ಶನಿವಾರ] ಮಧ್ಯಾಹ್ನ12 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ಎದುರು ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಶ್ರೀ ಬಿ.ಎಸ್. ಯಡಿಯೂರಪ್ಪ, ಮಾಜೀ ಉಪಮುಖ್ಯಮಂತ್ರಿ ಆರ್. ಅಶೋಕ್ ಮತ್ತಿತರ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎಸ್.ಶಾಂತಾರಾಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
click me!

Recommended Stories

​KERC new power rates: ಬೇಸಿಗೆ ಆರಂಭದಲ್ಲೇ ಕರೆಂಟ್ ಶಾಕ್: ಯಾರಿಗೆ ವರ, ಯಾರಿಗೆ ಹೊರೆ? ಕೃಷಿ ಪಂಪ್‌ಸೆಟ್‌ಗಳಿಗೂ ದರ ಏರಿಕೆ ಬಿಸಿ?
Priyank Kharge: ಒಳ ಮೀಸಲಾತಿ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಆದರೆ..: ಪ್ರಿಯಾಂಕ್ ಖರ್ಗೆ ಹೇಳಿದ್ದೇನು?