Koppal: ದೇಣಿಗೆಯಿಂದ ಕಿಷ್ಕಿಂಧೆ ಪೌರಾಣಿಕ ದೇಗುಲಗಳ ಜೀರ್ಣೋದ್ಧಾರ: ಸಚಿವ ರಾಮುಲು

By Kannadaprabha NewsFirst Published Feb 20, 2022, 10:47 AM IST
Highlights

*  ಕಾಣದ ಕೈಗಳ ಕೊಡುಗೆಯಿಂದ ದೇವಸ್ಥಾನಗಳ ಅಭಿವೃದ್ಧಿ: ಶ್ರೀರಾಮುಲು
*  ದೇವಸ್ಥಾನಗಳ ಮೂಲಕ್ಕೆ ಧಕ್ಕೆ ಬರದಂತೆ ನಿರ್ಮಾಣ 
*  ಜನಾರ್ದನರೆಡ್ಡಿ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ

ಸೋಮರಡ್ಡಿ ಅಳವಂಡಿ

ಕೊಪ್ಪಳ(ಫೆ.20): ದಾನಿಗಳ ನೆರವಿನಿಂದ ರಾಜ್ಯ ಪ್ರಾಚ್ಯವಸ್ತು ಇಲಾಖೆಯ ಅಧಿಕೃತ ಗುತ್ತಿಗೆದಾರರ ಮೂಲಕವೇ ಗಂಗಾವತಿ ತಾಲೂಕಿನ ಆನೆಗೊಂದಿ(Anegondi) ಭಾಗದ ಕಿಷ್ಕಿಂಧೆಯ(Kishkindha) ಪ್ರದೇಶ ವ್ಯಾಪ್ತಿಯಲ್ಲಿರುವ ರಾಮಾಯಣ ಕಾಲದ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದ್ದು, ಇದೆಲ್ಲವೂ ಕಾಣದ ಕೈಗಳು ಕೊಡಮಾಡುವ ದೇಣಿಗೆಯ ನೆರವಿನಿಂದ ಸಾರಿಗೆ ಸಚಿವ ಶ್ರೀರಾಮುಲು(B Sriramulu) ಅವರ ಸಾರಥ್ಯದಲ್ಲಿ ಅಭಿವೃದ್ಧಿಯಾಗುತ್ತಿದೆ.

ಆನೆಗೊಂದಿಯ ಪಂಪಾ ಸರೋವರ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀರಾಮನಿಗಾಗಿ ಕಾದ ಶಬರಿಯ ಗುಹೆ ಹಾಗೂ ಶ್ರೀ ಆದಿಶಕ್ತಿ ದುರ್ಗಾದೇವಿ ದೇವಸ್ಥಾನಗಳ(Temple) ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದೆ. ಅಳಿವಿನಂಚಿನಲ್ಲಿ ಇದ್ದ ಈ ದೇವಸ್ಥಾನಗಳನ್ನು ಅತ್ಯಂತ ನುರಿತ, ನೈಪುಣ್ಯವುಳ್ಳವರಿಂದಲೇ ಜೀರ್ಣೋದ್ಧಾರ ಮಾಡಿಸಲಾಗುತ್ತದೆ. ಅದರಲ್ಲೂ ರಾಜ್ಯ ಪ್ರಾಚ್ಯವಸ್ತು ಇಲಾಖೆಯ ಅಧಿಕೃತ ಗುತ್ತಿಗೆದಾರರೇ ಈ ಕಾರ್ಯವನ್ನು ಕೈಗೊಂಡಿರುವುದರಿಂದ ದೇವಸ್ಥಾನಗಳ ಮೂಲಕ್ಕೆ ಧಕ್ಕೆ ಬರದಂತೆ ನಿರ್ಮಾಣ ಮಾಡಲಾಗುತ್ತದೆ.

Koppal: ಅಂಜನಾದ್ರಿಗೆ ಹೋಗುವ ದಾರಿ ಯಾವುದಯ್ಯ?

ಇಡೀ ದೇವಸ್ಥಾನಗಳನ್ನು ನೆಲಸಮ ಮಾಡಿ ಪಂಪಾ ಸರೋವರವನ್ನು ಪೂರ್ಣ ಅಗೆದು ಆದಿಕಾಲದಲ್ಲಿ ಹೇಗಿತ್ತೊ ಅದೇ ಮಾದಿರಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ. ಇದಕ್ಕಾಗಿ ದೇವಸ್ಥಾನದಲ್ಲಿಯೇ ಇದ್ದ ಕಲ್ಲುಗಳನ್ನು ನಂಬರ್‌ ಹಾಕಿ ತೆಗೆದು ಅದೇ ಮಾದರಿಯಲ್ಲಿ ಪುನರ್‌ ಸ್ಥಾಪಿಸಿ ನಿರ್ಮಾಣ ಮಾಡಲಾಗುತ್ತದೆ. ಹಾಗೊಂದು ವೇಳೆ ಭಿನ್ನವಾಗಿದ್ದ ಕಲ್ಲುಗಳು ಇದ್ದರೆ ಅವುಗಳಿಗೆ ಪರ್ಯಾಯ ಕಲ್ಲುಗಳನ್ನು ಬಳಕೆ ಮಾಡಲಾಗುತ್ತದೆ. ಬೆಂಡಾಗಿರುವ(ಮಣಿದ) ಕಲ್ಲುಗಳನ್ನು ಸೀದಾ ಮಾಡಿಕೊಳ್ಳಲಾಗುತ್ತದೆ.

ಕಾಣದ ಕೈಗಳ ದೇಣಿಗೆ ಹಣ:

ದೇಗುಲಗಳ ಜೀರ್ಣೋದ್ಧಾರಕ್ಕೆ ಕೇಂದ್ರ ಪ್ರಾಚ್ಯವಸ್ತು ಇಲಾಖೆ ಮತ್ತು ರಾಜ್ಯ ಪ್ರಾಚ್ಯವಸ್ತು ಇಲಾಖೆಯು ನಯಾಪೈಸೆ ವೆಚ್ಚ ಮಾಡುತ್ತಿಲ್ಲ. ಇದೆಲ್ಲವೂ ಖಾಸಗಿಯಾಗಿಯೇ ಸಂಗ್ರಹಿಸಿರುವ ದೇಣಿಗೆಯಾಗಿದೆ. ಅದ್ಯಾವುದರ ಮಾಹಿತಿಯನ್ನು ಇದುವರೆಗೂ ಬಹಿರಂಗ ಮಾಡಿಲ್ಲ. ಕಾಣದ ಕೈಗಳು ಯಾವುವು ಎನ್ನುವುದೇ ಎದ್ದಿರುವ ಜಿಜ್ಞಾಸೆಯಾಗಿದೆ. ಇದು ಭಾರಿ ಚರ್ಚೆಗೂ ಕಾರಣವಾಗಿದೆ.

ಅಂದಾಜು ವೆಚ್ಚವೇ ಹತ್ತಾರು ಕೋಟಿ ರುಪಾಯಿ ಆಗುತ್ತದೆ. ಇದು ಮೇಲ್ನೋಟಕ್ಕೆ ಕಂಡುಬರುತ್ತಿರುವ ಮಾಹಿತಿ. ವಾಸ್ತವದಲ್ಲಿ ಎಷ್ಟು ಖರ್ಚಾಗುತ್ತದೆ ಎಂದು ಇದುವರೆಗೂ ಯಾರೂ ಹೇಳಿಕೊಂಡಿಲ್ಲ. ಸಾರಿಗೆ ಸಚಿವ ಶ್ರೀರಾಮುಲು ಅವರು ನೀಡುವ ಮಾಹಿತಿಯ ಪ್ರಕಾರ, ಇದೆಲ್ಲವನ್ನು ಖಾಸಗಿಯಾಗಿ ಮಾಡಲಾಗುತ್ತದೆ. ನಾನು ಇಲ್ಲಿ ನಿಮಿತ್ಯ ಮಾತ್ರ. ಕಾಣದ ಕೈಗಳಿಂದ ದೇಣಿಗೆ ಬರುತ್ತಿದೆ. ಅನೇಕರು ರಾಮಾಯಣ ಕಾಲದ ಪೌರಾಣಿಕ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕೈಜೋಡಿಸಿದ್ದಾರೆ ಎನ್ನುತ್ತಾರೆಯೇ ಹೊರತು ಯಾರು ಎಂದು ಹೇಳುವುದಿಲ್ಲ.

Anjaneya Birth Place Dispute: ಹನುಮಂತ ಎರಡೆರಡು ಬಾರಿ ಜನಿಸಿದನೇ?: ಸಂಸದ ಕರಡಿ

ಇದೊಂದು ಪುಣ್ಯದ ಕಾರ್ಯವಾಗಿದೆ. ಇದನ್ನು ಕೈಗೆತ್ತಿಕೊಂಡಿರುವ ಶ್ರೀರಾಮುಲು ಅವರ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಚಿವ ಜನಾರ್ದನರೆಡ್ಡಿ(Janardha Reddy) ಅವರು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಒಟ್ಟಾರೆ ಕಿಷ್ಕಿಂಧೆಯ ರಾಮಾಣಯಣ(Ramanayana) ಕಾಲದ ದೇವಸ್ಥಾನಗಳು, ಪೌರಾಣಿಕ ಐತಿಹ್ಯಗಳ ಪುನರುತ್ಥಾನವಂತೂ ಆಗುತ್ತಿರುವುದು ನಿಜ. ನಾನು ಇಲ್ಲಿ ನಿಮಿತ್ತ ಮಾತ್ರ. ಕಾಣದ ಅನೇಕರು ದೇಣಿಗೆ ನೀಡಿ, ಅಭಿವೃದ್ಧಿಪಡಿಸುವುದಕ್ಕೆ ಸಹಾಯ ಮಾಡುತ್ತಿದ್ದಾರೆ. ಹೀಗಾಗಿ ಇಂಥ ದೊಡ್ಡ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಅಂತ ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ. 

ಅಯೋಧ್ಯೆ, ರಾಮಮಂದಿರ ಬಳಿಕ ಅಂಜನಾದ್ರಿ ಅಭಿವೃದ್ಧಿ: ಸಿಎಂ ಬೊಮ್ಮಾಯಿ

ಆಂಜನೇಯನ(Hanuman) ಜನ್ಮಸ್ಥಳ, ಕೊಪ್ಪಳ ಜಿಲ್ಲೆಯಲ್ಲಿನ ‘ಅಂಜನಾದ್ರಿ ಬೆಟ್ಟ’ವನ್ನು(Anjandri Hill) ಅಂತಾರಾಷ್ಟ್ರೀಯ ಮಟ್ಟದ ಸುಕ್ಷೇತ್ರವಾಗಿ ಅಭಿವೃದ್ಧಿಪಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಘೋಷಿಸಿದ್ದರು. 

ಹನುಮನ ಜನ್ಮಸ್ಥಳ(Hanuman Birthplace) ಅಂಜನಾದ್ರಿ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಅತ್ತ ಅಯೋಧ್ಯೆಯಲ್ಲಿ(Ayodhya) ಶ್ರೀರಾಮ ಮಂದಿರ(Ram Mandir) ಉದ್ಘಾಟನೆಯಾಗುತ್ತಿದ್ದಂತೆ, ಇತ್ತ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕೆಲಸಕ್ಕೆ ಪ್ರಧಾನಿ ಮೋದಿ(Narendra Modi) ಅವರಿಂದಲೇ ಚಾಲನೆ ಕೊಡಿಸುತ್ತೇವೆ. ಅಂಜನಾದ್ರಿ ಬೆಟ್ಟಯಾವ ರೀತಿ ಆಕಾಶದೆತ್ತರಕ್ಕೆ ಇದೆಯೋ, ಅದೇ ರೀತಿ ಅಲ್ಲಿನ ಅಭಿವೃದ್ಧಿಯನ್ನೂ ಆಕಾಶಕ್ಕೆ ನಿಲುಕುವಂತೆ ಮಾಡಿ ತೋರಿಸುತ್ತೇವೆ ಎಂದು ಕಾರ್ಯಕಾರಿಣಿಯಲ್ಲಿ ಬೊಮ್ಮಾಯಿ ಭರವಸೆ ನೀಡಿದ್ದರು. 
 

click me!