Hijab Row: ಕುಂಕುಮ, ಬಳೆ ವಿಷಯಕ್ಕೆ ಬಂದ್ರೆ ನಾಲಿಗೆ ಸೀಳ್ತೇವೆ: ಮುತಾಲಿಕ್‌ ಖಡಕ್‌ ಎಚ್ಚರಿಕೆ

By Kannadaprabha News  |  First Published Feb 20, 2022, 10:01 AM IST

*   ಬಿಜೆಪಿ ಕುರಿತು ಟೀಕೆ ಮಾಡಲಿ ಆರ್‌ಎಸ್‌ಎಸ್‌ ಬಗ್ಗೆ ಟೀಕೆ ಬೇಡ 
*   ನಮ್ಮ ಸಂಪ್ರದಾಯದ ಭಾಗವಾಗಿರುವ ವಿಷಯಗಳ ಬಗ್ಗೆ ಮಾತನಾಡಿದರೆ ಹೇಗೆ ಸಹಿಸಲು ಸಾಧ್ಯ?
*   ಆರ್‌ಎಸ್‌ಎಸ್‌ ಸಂಘಟನೆಯ ಬಗ್ಗೆ ಸಿದ್ದರಾಮಯ್ಯ ಮಾತನಾಡಬಾರದು 
 


ಬಾಗಲಕೋಟೆ(ಫೆ.20):  ಹಿಜಾಬ್‌(Hijab) ವಿಷಯದ ಜೊತೆಗೆ ಕುಂಕುಮ, ಬಳೆ, ಗಣಪತಿ ಪೂಜೆ, ಸರಸ್ವತಿ ಪೂಜೆ ಬಗ್ಗೆ ಯಾರಾದರೂ ಮಾತನಾಡಿದರೆ ನಾಲಿಗೆ ಸೀಳಬೇಕಾದಿತು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌(Pramod Mutalik) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ನಮ್ಮ ಹತ್ತಾರು ದೇಶಗಳನ್ನು ನುಂಗಿ ನೀರು ಕುಡಿದಿರುವ ಇಸ್ಲಾಮಿಕ್‌(Islamic) ಇತಿಹಾಸ ಇದೀಗ ನಮ್ಮ ಸಂಪ್ರದಾಯದ ಭಾಗವಾಗಿರುವ ವಿಷಯಗಳ ಬಗ್ಗೆ ಮಾತನಾಡಿದರೆ ಹೇಗೆ ಸಹಿಸಲು ಸಾಧ್ಯ ಎಂದು ಪ್ರಶ್ನಿಸಿದರು. 
ಆರ್‌ಎಸ್‌ಎಸ್‌(RSS) ಸಂಘಟನೆ ದೇಶ ಭಕ್ತಿಯ ಸಂಘಟನೆ ಅಂತಹ ಸಂಘಟನೆಯ ಬಗ್ಗೆ ಸಿದ್ದರಾಮಯ್ಯ(Siddaramaiah) ಅವರು ಮಾತನಾಡಬಾರದು. ಅವರು ಬೇಕಾದರೆ ಬಿಜೆಪಿ ಕುರಿತು ಟೀಕೆ ಮಾಡಲಿ ಆರ್‌ಎಸ್‌ಎಸ್‌ ಬಗ್ಗೆ ಟೀಕೆ ಬೇಡ ಎಂದು ಸಲಹೆ ನೀಡಿದರು.

Tap to resize

Latest Videos

Anti Conversion Bill: ಮತಾಂತರ ನಿಷೇಧ ಕಾಯ್ದೆ ವಿರೋಧಿಗಳು ಅಭಿವೃದ್ಧಿ ಕಂಟಕರು: ಮುತಾಲಿಕ್‌

ಕಾಲೇಜಿಗೆ ಹಿಜಾಬ್‌ ಧರಿಸಿಯೇ ಬರ್ತೇವೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಮುತಾಲಿಕ್‌

ಹುಬ್ಬಳ್ಳಿ: ಹಿಜಾಬ್‌ ಧರಿಸಿಯೇ ಕಾಲೇಜಿಗೆ ಬರುತ್ತೇವೆ ಎನ್ನುವವರು ಪಾಕಿಸ್ತಾನಕ್ಕೆ(Pakistan) ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್‌, ಸರ್ಕಾರ ವಿಳಂಬ ಮಾಡದೆ, ಅವಿಧೇಯತೆ ತೋರುವವರ ಮೇಲೆ ಸೂಕ್ತಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಫೆ.01 ರಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಉಡುಪಿ(Udupi) ಸರ್ಕಾರಿ ಮಹಿಳಾ ಕಾಲೇಜಿನ ಹಿಜಾಬ್‌ ವಿವಾದವನ್ನು ಎಳೆದಾಡುವ ಅಗತ್ಯವಿಲ್ಲ. ಇವತ್ತು ಹಿಜಾಬ್‌ ಬೇಕು ಎನ್ನುವವರು ನಾಳೆ ಬೇರೆ ಬೇಡಿಕೆ ಇಡಬಹುದು. ವಿದ್ಯಾರ್ಥಿಗಳು(Students) ವಿದ್ಯಾಕೇಂದ್ರಕ್ಕೆ ಬರುತ್ತಿದ್ದಾರೋ ಅಥವಾ ಧಾರ್ಮಿಕ ಕೇಂದ್ರಕ್ಕೆ ಬರುತ್ತಿದ್ದಾರೊ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ವಿದ್ಯಾಸಂಸ್ಥೆಯಲ್ಲಿ ಎಲ್ಲರಿಗೂ ಒಂದೇ ನಿಯಮಾವಳಿ ಇರುತ್ತದೆ. ಅದನ್ನು ಪಾಲಿಸಬೇಕಾಗುತ್ತದೆ. ವಿನಾಕಾರಣ ವಿವಾದ(Controversy) ಸೃಷ್ಟಿಸುವುದು ಸರಿಯಲ್ಲ. ಅಷ್ಟಕ್ಕೂ ಹಿಜಾಬ್‌ ಧರಿಸಿಯೇ ಬರುತ್ತೇವೆ ಎಂದಾದರೆ ಅಂಥವರು ಪಾಕಿಸ್ತಾನಕ್ಕೆ ಹೋಗಲಿ. ಅಂಥ ವಿದ್ಯಾರ್ಥಿಗಳ ಮನವಿ ಆಲಿಕೆ ಮಾಡುತ್ತ ಕಾಲಹರಣ ಮಾಡುವ ಬದಲು ಟಿಸಿ ಕೊಟ್ಟು ಕಳಿಸಬೇಕು ಎಂದು ತಿಳಿಸಿದ್ದರು. 

ಮಂತಾತರ ನಿಷೇಧಕ್ಕೆ ಪೂರಕವಾಗಿ ಶ್ರೀರಾಮಸೇನೆಯಿಂದ ಟಾಸ್ಕ್‌ಫೋರ್ಸ್‌

ಮತಾಂತರ ನಿಷೇಧ ಕಾನೂನು ಹಿಂದೂಗಳಿಗೆ ಕಣ್ಣೊರೆಸುವ ತಂತ್ರವಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಶ್ರೀರಾಮ ಸೇನಾ ವತಿಯಿಂದ ಟಾಸ್ಕ್‌ಫೋರ್ಸ್‌ ರಚಿಸಲಾಗಿದೆ ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದ್ದರು. 

ಕಳೆದ ವರ್ಷದ ಡಿ. 22 ರಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ನಮ್ಮ ಟಾಸ್ಕ್‌ಫೋರ್ಸ್‌ ಈ ಕಾನೂನಿಗೆ ಪೂರಕವಾಗಿ ಕೆಲಸ ಮಾಡಲಿದೆ. ಇದರಲ್ಲಿ ವಕೀಲರು, ಮಹಿಳೆಯರು, ಯುವಕರು ಇರಲಿದ್ದಾರೆ. ಮತಾಂತರ ನಿಷೇಧ ಕಾಯಿದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ನೆರವು ನೀಡಲಿದ್ದಾರೆ. ಮತಾಂತರ ನಡೆವ ಸ್ಥಳದ ಕುರಿತು, ಯಾರು ಪಾಲ್ಗೊಂಡಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡಲಿದ್ದೇವೆ ಎಂದರು.

Religious Conversion: ಬಿಜೆಪಿ ಸರ್ಕಾರದಲ್ಲಿಯೇ ಗೋ ಕಳ್ಳತನ, ಮತಾಂತರ ಹೆಚ್ಚು: ಮುತಾಲಿಕ್‌

ಕ್ರಿಶ್ಚಿಯನ್‌(Christian) ಸಮುದಾಯ ವ್ಯವಸ್ಥಿತವಾಗಿ ಮತಾಂತರ ಪ್ರಕ್ರಿಯೆ ನಡೆಸುತ್ತದೆ. ಬಲವಂತ ಮತಾಂತರದ ಮೂಲಕ ಹಿಂದೂ ಸಂಸ್ಕೃತಿಯನ್ನು ನಾಶ ಮಾಡುವ ಹುನ್ನಾರ ಮಾಡಿದ್ದಾರೆ. ಸರ್ಕಾರದ ದಾಖಲೆಗಳಲ್ಲಿ ದಲಿತನಾಗಿದ್ದರೆ, ಕ್ರಿಶ್ಚಿಯನ್ನರ ಪ್ರಕಾರ ಆತ ಇಸಾಯಿ ಧರ್ಮದ ಅನುಯಾಯಿ ಆಗಿರುತ್ತಾರೆ. ಇಂತಹ ನುಸುಳುಕೋರತನ ತಡೆಗೆ ಸರ್ಕಾರ ಕಠಿಣ ಕ್ರಮ ವಹಿಸಬೇಕು. ಅದಕ್ಕಾಗಿ ಶ್ರೀರಾಮ ಸೇನೆ ಟಾಸ್ಕ್‌ಫೋರ್ಸ್‌ ಮೂಲಕ ಈ ಕಾನೂನಿಗೆ ಬಲ ತುಂಬಲಿದೆ ಎಂದರು.

ಇನ್ನು ಧರ್ಮಸ್ಥಳ, ಇಸ್ಕಾನ್‌, ರವಿಶಂಕರ ಗುರೂಜಿ ಅವರ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮ ಸೇರಿ ಇತರೆಡೆ ಹೊಸ ವರ್ಷವನ್ನು ಕೇಕ್‌ ಕತ್ತರಿಸಿ ಆಚರಣೆ ಮಾಡಲಾಗುತ್ತದೆ. ಇದು ಪಾಶ್ಚಿಮಾತ್ಯ ಸಂಸ್ಕೃತಿ. ಈ ವರ್ಷ ಏನಾದರೂ ಇದೇ ರೀತಿ ಆಚರಣೆಗೆ ಮುಂದಾದರೆ ಆಕ್ಷೇಪಿಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಪರಮಾತ್ಮಜೀ ಮಹಾರಾಜ ಸ್ವಾಮೀಜಿ, ಅಪ್ಪಣ್ಣ ದಿವಟಗಿ ಸೇರಿ ಇತರರಿದ್ದರು.

click me!