ಚಾಮರಾಜನಗರ: ರೈಲು ಪ್ರಯಾಣಿಕರಿಗೆ ದರ ಹೆಚ್ಚಳದ ಬಿಸಿ

By Kannadaprabha News  |  First Published Jan 3, 2020, 11:20 AM IST

ರೈಲು ಪ್ರಯಾಣದ ದರ ಹೆಚ್ಚಳ ಮಾಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದ ಹಿನ್ನೆಲೆ ಪರಿಷ್ಕೃತ ದರ ಜ. 1ರಿಂದಲೇ ಜಾರಿಗೆ ಬಂದಿದ್ದು, ಇದರಿಂದಾಗಿ ಚಾಮರಾಜನಗರದಿಂದ ಹೊರಡುವ ಪ್ಯಾಸೆಂಜರ್‌ ಹಾಗೂ ಎಕ್ಸ್‌ಪ್ರೆಸ್‌ ರೈಲುಗಳ ಪ್ರಯಾಣದ ಟಿಕೆಟ್‌ ದರವು ಬದಲಾಗಿದೆ.


ಚಾಮರಾಜನಗರ(ಜ.03): ಹೊಸ ವರ್ಷದಿಂದ ರೈಲು ಟಿಕೆಟ್‌ ದರ ಹೆಚ್ಚಳವಾಗಿದ್ದು, ಪ್ರಯಾಣಿಕರಿಗೆ ದರ ಹೆಚ್ಚಳ ಬಿಸಿ ತಟ್ಟಿದೆ. ಚಾಮರಾಜನಗರ ರೈಲು ನಿಲ್ದಾಣದಿಂದ ಕಡಕೊಳದ ರೈಲು ನಿಲ್ದಾಣದವರೆಗೆ ದರ ಹೆಚ್ಚಳವಾಗಿಲ್ಲದಿದ್ದರೂ, ಮೈಸೂರಿನ ಅಶೋಕಪುರಂ ನಿಲ್ದಾಣದಿಂದಾಚೆಗೆ ರೈಲು ಪ್ರಯಾಣ ಬೆಳೆಸುವವರಿಗೆ ರೈಲು ಟೆಕೆಟ್‌ ದರ ಹೆಚ್ಚಳವಾಗಿರುವುದರಿಂದ ಪ್ರಯಾಣಿಕರಿಗೆ ಹೊರೆಯಾಗಿದೆ.

ರೈಲು ಪ್ರಯಾಣದ ದರ ಹೆಚ್ಚಳ ಮಾಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದ ಹಿನ್ನೆಲೆ ಪರಿಷ್ಕೃತ ದರ ಜ. 1ರಿಂದಲೇ ಜಾರಿಗೆ ಬಂದಿದ್ದು, ಇದರಿಂದಾಗಿ ಚಾಮರಾಜನಗರದಿಂದ ಹೊರಡುವ ಪ್ಯಾಸೆಂಜರ್‌ ಹಾಗೂ ಎಕ್ಸ್‌ಪ್ರೆಸ್‌ ರೈಲುಗಳ ಪ್ರಯಾಣದ ಟಿಕೆಟ್‌ ದರವು ಬದಲಾಗಿದೆ.

Tap to resize

Latest Videos

ಬೆಂಗಳೂರು, ಬಿಡದಿ ನಿಲ್ದಾಣಕ್ಕೆ ದರ ಹೆಚ್ಚಳ:

ಚಾಮರಾಜನಗರ ರೈಲು ನಿಲ್ದಾಣದಿಂದ ಹೊರಡುವ ಪ್ರಯಾಣಿಕರಿಗೆ ಕಡಕೊಳದ ವರೆಗೆ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮೈಸೂರಿನ ಅಶೋಕಪುರಂ ನಿಲ್ದಾಣ ಸೇರಿದಂತೆ ಅದರ ಮುಂದಿನ ನಿಲ್ದಾಣಗಳಿಗೆ ತೆರಳುವ ಪ್ರಯಾಣಿಕರಿಗೆ ಸ್ಟೇಜ್‌ಗೆ (48 ಕಿ.ಮೀ. 1 ಸ್ಟೇಜ್‌) ಅನುಗುಣವಾಗಿ 5 ರು. ದರ ಹೆಚ್ಚಳವಾಗಿದೆ. ಚಾಮರಾಜನಗರ ರೈಲು ನಿಲ್ದಾಣದಿಂದ ಪ್ಯಾಸೆಂಜರ್‌ ರೈಲಿನಲ್ಲಿ ಮೈಸೂರಿನ ಅಶೋಕಪುರಂ ರೈಲು ನಿಲ್ದಾಣ, ಮೈಸೂರು ಜಂಕ್ಷನ್‌, ಬಿಡದಿ ರೈಲು ನಿಲ್ದಾಣ, ಕೆಂಗೇರಿ ರೈಲು ನಿಲ್ದಾಣಕ್ಕೆ ತೆರಳುವ ರೈಲು ಪ್ರಯಾಣ ದರ ಹೆಚ್ಚಳವಾಗಿದೆ.

ಇಂಧನ ಬೇಡ, ಕೂಲಿಗಾರರೂ ಬೇಡ; ದಿನಕ್ಕೆ 1 ಎಕರೆ ಕಟಾವು ಮಾಡುತ್ತೆ ಈ ಕೊಯ್ಲುಗತ್ತಿ..!

ಅಲ್ಲದೇ ಚಾಮರಾಜನಗರ ರೈಲು ನಿಲ್ದಾಣದಿಂದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಕೆಂಗೇರಿ, ಬೆಂಗಳೂರು ಸಿಟಿ ಜಂಕ್ಷನ್‌, ಬೆಂಗಳೂರು ಕಂಟ್ಮೋನ್ಮೆಟ್‌, ಹಾಸನ ಜಂಕ್ಷನ್‌, ತಿರುಪತಿಗೆ ತೆರಳುವ ರೈಲು ಪ್ರಯಾಣ ದರ ಹೆಚ್ಚಳವಾಗಿದೆ.

ಕೆಂಗೇರಿಗೂ ಹೆಚ್ಚಳ:

ರೈಲಿನಲ್ಲಿ ಪ್ರಯಾಣಿಸುವ ಮಕ್ಕಳ ಟಿಕೆಟ್‌ ದರದಲ್ಲೂ ಹೆಚ್ಚಳವಾಗಿದ್ದು, ಪ್ಯಾಸೆಂಜರ್‌ ರೈಲಿನಲ್ಲಿ ಚಾಮರಾಜನಗರದಿಂದ ಬಿಡದಿ ರೈಲು ನಿಲ್ದಾಣದವರೆಗೂ ದರ ಹೆಚ್ಚಳವಾಗಿಲ್ಲದಿದ್ದರೂ ಕೆಂಗೇರಿ ರೈಲು ನಿಲ್ದಾಣಕ್ಕೆ ಹೆಚ್ಚಳವಾಗಿದೆ. ಎಕ್ಸ್‌ಪ್ರೆಸ್‌ ರೈಲಿನಲ್ಲಿ ಚಾಮರಾಜನಗರದಿಂದ ಮದ್ದೂರು ರೈಲು ನಿಲ್ದಾಣದವರೆಗೂ ಹೆಚ್ಚಳವಾಗಿಲ್ಲದಿದ್ದರೂ ಚನ್ನಪಟ್ಟಣ, ರಾಮನಗರಂ, ಕೆಂಗೇರಿ, ಕೃಷ್ಣರಾಜಪುರಂ, ಹೊಳೆ ನರಸೀಪುರ, ಹಾಸನ ಜಂಕ್ಷನ್‌, ತಿರುಪತಿವರೆಗೆ ಪ್ರಯಾಣ ದರ ಹೆಚ್ಚಳವಾಗಿದೆ.

ಹೊಸವರ್ಷ: ಬಂಡೀಪುರದಲ್ಲಿ ಸಫಾರಿಗೆ ಪ್ರವಾಸಿಗರ ದಂಡು

ತಿರುಪತಿ ರೈಲು ಪ್ರಯಾಣ ದರ ಹೆಚ್ಚಳದಿಂದ ಚಾಮರಾಜನಗರದಿಂದ ತಿರುಪತಿ ಎಕ್ಸ್‌ಪ್ರೆಸ್‌ನಲ್ಲಿ ಟಿಕೆಟ್‌ ದರ 160 ರು. ಇದ್ದಿದು, ಈಗ 175 ರು. ಆಗಿದೆ. ನಾನ್‌ ಏಸಿ ಟಿಕೆಟ್‌ ಬುಕ್ಕಿಂಗ್‌ಗೆ 310 ರು. ಇದ್ದಿದ್ದು, ಈಗ 320 ರು. ಆಗಿದೆ. ಎಸಿ ಟಿಕೆಟ್‌ ಬುಕ್ಕಿಂಗ್‌ಗೆ 845 ರು. ಇದ್ದಿದು, ಈಗ 870 ರು. ಆಗಿದೆ.

ರೈಲು ದರ ಪಟ್ಟಿಇಲಾಖೆಯಿಂದಲೇ ಬಂದಿದೆ. ರೈಲು ಟಿಕೆಟ್‌ ದರ ಜ. 1ರಿಂದ ಬದಲಾವಣೆಯಾಗಿದ್ದು, ಪ್ರಯಾಣಿಕರು ಎಂದಿನಂತೆ ಸಹಕರಿಸಲು ಮನವಿ ಮಾಡುತ್ತೇವೆ ಎಂದು ಚಾಮರಾಜನಗರ ಸ್ಟೆಷನ್‌ ಮಾಸ್ಟರ್‌ ಬಾಲರಾಜು ತಿಳಿಸಿದ್ದಾರೆ.

ಸಂಶಯಾಸ್ಪದವಾಗಿ ಮೃತಪಟ್ಟ ನ್ಯೂಸ್‌ ಚಾನೆಲ್‌ ಮಾಲೀಕ 3 ಮದುವೆಯಾಗಿದ್ದ..!

ದರ ಹೆಚ್ಚಳವಾದರೂ ಪ್ರಯಾಣ ಅನುಕೂಲಕರ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಕಲ್ಪಿಸಿರುವ ಸೌಲಭ್ಯಗಳು ಚೆನ್ನಾಗಿದ್ದು, ರೈಲು ಪ್ರಯಾಣ ಸುಖಕರವಾಗಿರುತ್ತದೆ. ಆದ್ದರಿಂದ ರೈಲಿನ ದರ ಹೆಚ್ಚಳವಾದರೂ ಪ್ರಯಾಣ ಅನುಕೂಲಕರವಾಗಿರಲಿದೆ ಎಂದು ಚಾಮರಾಜನಗರದ ನಿವಾಸಿ ಶ್ರೀನಿವಾಸ ತಿಳಿಸಿದ್ದಾರೆ.

-ಎನ್‌. ರವಿಚಂದ್ರ

click me!